»   » ಕುದುರೆ ಸವಾರಿಗೆ ತರಬೇತಿ ಪಡೆಯುತ್ತಿದ್ದಾರೆ 'ಕ್ರೇಜಿಸ್ಟಾರ್' ಪುತ್ರ

ಕುದುರೆ ಸವಾರಿಗೆ ತರಬೇತಿ ಪಡೆಯುತ್ತಿದ್ದಾರೆ 'ಕ್ರೇಜಿಸ್ಟಾರ್' ಪುತ್ರ

Posted By:
Subscribe to Filmibeat Kannada

ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ಅವರು ತಮ್ಮ ಹೊಸ 'ಸಾಹೇಬ' ಚಿತ್ರಕ್ಕಾಗಿ ಕುದುರೆ ಸವಾರಿ ಮರು ತರಬೇತಿಯನ್ನು ಪಡೆಯುತ್ತಿದ್ದಾರೆ.

ಫಸ್ಟ್ ಹಾಫ್ ಶೂಟಿಂಗ್ ಮುಗಿಸಿರುವ 'ಸಾಹೇಬ' ಚಿತ್ರತಂಡ ಎರಡನೇ ಭಾಗದ ಶೂಟಿಂಗ್ ನಡೆಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸುಮಾರು 20 ರಿಂದ 25 ದಿನಗಳ ಕಾಲ ವಿಶ್ರಾಂತಿ ತೆಗೆದುಕೊಂಡ ನಟ ಮನೋರಂಜನ್ ಮತ್ತೆ ಸೆಟ್ ಗೆ ಹಾಜರಾಗಿದ್ದಾರೆ.

ಈ ವಿರಾಮದ ದಿನಗಳಲ್ಲಿ ಮನೋರಂಜನ್ ಅವರು ತಾವು ಈ ಹಿಂದೆ ಕಲಿತಿದ್ದ ಕುದುರೆ ಸವಾರಿ ಕೌಶಲ್ಯವನ್ನು ಮತ್ತೆ ನೆನಪು ಮಾಡಿಕೊಂಡಿದ್ದಾರಂತೆ.[ಮನೋರಂಜನ್ ರವಿಚಂದ್ರನ್ ಚೊಚ್ಚಲ ಚಿತ್ರದ ಚಿತ್ರೀಕರಣ ಫಿಕ್ಸ್.!]

Kannada Actor Manoranjan Brushes up his Horse riding skills

'ಈ ವಾರಂತ್ಯ ಎರಡನೇ ಹಂತದ ಚಿತ್ರೀಕರಣದಲ್ಲಿ ಫೈಟ್ ಒಂದಿದೆ. ಅದಕ್ಕಾಗಿ ಕುದುರೆ ಸವಾರಿ ಮಾಡಬೇಕಿದೆ. ಐದು ವರ್ಷದ ಹಿಂದೆಯೇ ಕುದುರೆ ಸವಾರಿ ಕಲಿತಿದ್ದೆ, ಆದರೆ ಈಗ ಅಭ್ಯಾಸ ತಪ್ಪಿತ್ತು. ಅದಕ್ಕೆ ಮತ್ತೆ ಆತ್ಮವಿಶ್ವಾಸ ಗಳಿಸಲು ಮರು ತರಬೇತಿ ಪಡೆದೆ' ಎಂದು ಮನೋರಂಜನ್ ನುಡಿಯುತ್ತಾರೆ.[ರವಿಚಂದ್ರನ್ ಪುತ್ರ ಮನೋರಂಜನ್ 'ರಣಧೀರ' ಸಿನಿಮಾ ನಿಂತ್ಹೋಯ್ತಾ?]

ನಿರ್ದೇಶಕ ಭರತ್ ಆಕ್ಷನ್-ಕಟ್ ಹೇಳುತ್ತಿರುವ ಚಿತ್ರದಲ್ಲಿ 'ಮಾಸ್ಟರ್ ಪೀಸ್' ಖ್ಯಾತಿಯ ನಟಿ ಶಾನ್ವಿ ಶ್ರೀವಾತ್ಸವ ಅವರು ಮನೋರಂಜನ್ ಜೊತೆ ರೋಮ್ಯಾನ್ಸ್ ಮಾಡಲಿದ್ದು, ಇವರೊಂದಿಗೆ ಇದೀಗ ಹೊಸದಾಗಿ ಸಾನಿಕಾ ಎಂಬ ಕನ್ನಡತಿ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಚಿತ್ರತಂಡವನ್ನು ಸೇರಿಕೊಂಡಿದ್ದಾರೆ.[ಮನೋರಂಜನ್ 'ಸಾಹೇಬ'ನಿಗೆ 'ಮಾಸ್ಟರ್ ಪೀಸ್' ಶಾನ್ವಿ ಸಾಥ್]

ನಿರ್ಮಾಪಕ ಜಯಣ್ಣ-ಭೋಗೇಂದ್ರ ಬಂಡವಾಳ ಹೂಡುತ್ತಿರುವ ಈ ಚಿತ್ರಕ್ಕೆ ನಿರ್ದೇಶಕ ಭರತ್ ಅವರು ಆಕ್ಷನ್-ಕಟ್ ಹೇಳುತ್ತಿದ್ದಾರೆ. ಮನೋರಂಜನ್ ಅವರ 'ಸಾಹೇಬ' ಚಿತ್ರದ ಫೊಟೋ ಗ್ಯಾಲರಿ ನೋಡಲು ಸ್ಲೈಡ್ಸ್ ಕ್ಲಿಕ್ಕಿಸಿ...

-
-
-
-
-
-
-
-
-
-
-
-
English summary
Kannada Actor Ravichandran, son Manoranjan will now bring back his charisma again through his next movie 'Saheba'. The actor has recently brushed his horse riding skills for the movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada