»   » ಹೊಸ ಚಿತ್ರ 'ಕರುಣಾ-ನಿಧಿ'. ಇದು ಯಾರ ಕಥೆ..?

ಹೊಸ ಚಿತ್ರ 'ಕರುಣಾ-ನಿಧಿ'. ಇದು ಯಾರ ಕಥೆ..?

Posted By:
Subscribe to Filmibeat Kannada

ಕನ್ನಡ ನಟ ಮೋಹನ್ ನಟಿಸಿ, ನಿರ್ಮಿಸಿ, ನಿರ್ದೇಶಿಸಿದ್ದ 'ಮಳೆ ನಿಲ್ಲುವವರೆಗೆ' ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಅಬ್ಬರ ಸೃಷ್ಟಿಸಲಿಲ್ಲ. ಆದರೂ ಚಿಂತೆ ಇಲ್ಲ. ನಟ ಮೋಹನ್ ಹೊಸ ಸಿನಿಮಾ ಮಾಡುವ ಮನಸ್ಸು ಮಾಡಿದ್ದಾರೆ.

ಹಾಗೆ ಮೋಹನ್ ಕಾಣಿಸಿಕೊಳ್ಳುತ್ತಿರುವ ಹೊಸ ಚಿತ್ರದ ಹೆಸರು 'ಕರುಣಾ-ನಿಧಿ'. ಹೆಸರು ಕೇಳಿದ ಕೂಡಲೆ ಇದು ತಮಿಳುನಾಡು ಮಾಜಿ ಮುಖ್ಯಮಂತ್ರಿಯ ಜೀವನಚರಿತ್ರೆ ಆಧರಿಸಿದ ಸಿನಿಮಾನಾ ಅಂತ ಪ್ರಶ್ನೆ ಕೇಳ್ಬೇಡಿ.

mohan

ತಮಿಳುನಾಡು ಮಾಜಿ ಸಿ.ಎಂ ಕರುಣಾನಿಧಿಗೂ, 'ಕರುಣಾ-ನಿಧಿ' ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ. ಕರುಣಾ ಮತ್ತು ನಿಧಿ ಅನ್ನುವ ಇಬ್ಬರು ವ್ಯಕ್ತಿಗಳ ನಡುವಿನ ಕಥೆ 'ಕರುಣಾ-ನಿಧಿ'. [ನಿರ್ದೇಶಕ, ಬರಹಗಾರ ಎಜಿ ಶೇಷಾದ್ರಿ ಸಂದರ್ಶನ]

ಅಂದ್ಹಾಗೆ, ಮೋಹನ್ ಇಲ್ಲಿ ಬರೀ ನಟನಾಗಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡ ಕಿರುತೆರೆಯ ಪ್ರಸಿದ್ಧ ಬರಹಗಾರ ಹಾಗು ನಿರ್ದೇಶಕ ಎ.ಜಿ.ಶೇಷಾದ್ರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.

ಶೀರ್ಷಿಕೆ ಮಾತ್ರದಿಂದಲೇ ಸೌಂಡ್ ಮಾಡುವುದಕ್ಕೆ ಶುರುಮಾಡಿರುವ 'ಕರುಣಾ-ನಿಧಿ' ಚಿತ್ರದ ಬಗ್ಗೆ ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿ ಇಷ್ಟು. ಹೆಚ್ಚಿನ ಮಾಹಿತಿಗೆ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ.

English summary
Kannada Actor, Director, Producer Mohan starrer new movie is titled as 'Karuna-Nidhi'. The movie is directed by Small-Screen fame A.G.Sheshadri.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada