»   » 50ರ ಗಡಿ ತಲುಪಿದ ಸಂಭ್ರಮದಲ್ಲಿ 'ಆರ್ಮುಗಂ' ರವಿಶಂಕರ್

50ರ ಗಡಿ ತಲುಪಿದ ಸಂಭ್ರಮದಲ್ಲಿ 'ಆರ್ಮುಗಂ' ರವಿಶಂಕರ್

Posted By:
Subscribe to Filmibeat Kannada

'ಕೆಂಪೇಗೌಡ' ಚಿತ್ರದಲ್ಲಿ 'ಆರ್ಮುಗಂ'ನಾಗಿ ಘರ್ಜನೆ ಮಾಡಿದ ನಟ ರವಿಶಂಕರ್ ಅವರು ತದನಂತರ ಎಲ್ಲಾ ಸಿನಿಮಾಗಳಲ್ಲಿ ಖಳನಟನಾಗಿ ಎಲ್ಲರ ಮೆಚ್ಚುಗೆ ಗಳಿಸುತ್ತಾ, ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ಬಹುಬೇಡಿಕೆಯುಳ್ಳ ಖಳನಟನಾಗಿ ಹೊರ ಹೊಮ್ಮಿದ್ದಾರೆ.

ಇದೀಗ ಈ ಅಪರೂಪದ ಖಳನಟ ಬಂದ ಅಲ್ಪ ಸಮಯದಲ್ಲೇ ಖಳನಟನಾಗಿಯೇ ಹಾಗೂ ಕೆಲವು ಸಿನಿಮಾಗಳಲ್ಲಿ ಕಾಮಿಡಿ ಖಳನಟನಾಗಿ ಎಲ್ಲರ ಮೆಚ್ಚುಗೆ ಗಳಿಸಿ ಅಭಿಮಾನಿಗಳನ್ನು ಸಂಪಾದಿಸಿದ್ದು ಮಾತ್ರವಲ್ಲದೇ ಭರ್ತಿ 50 ಸಿನಿಮಾಗಳಲ್ಲಿ ನಟಿಸಿದ್ದಾರೆ.['ಆರ್ಮುಗಂ' ರವಿಶಂಕರ್ ಗೆ ಹ್ಯಾಪಿ ಬರ್ತ್ ಡೇ ಹೇಳಿ.!]


Kannada Actor P.Ravi Shankar's 50th movie is 'Jigarthanda'

ಸದ್ಯಕ್ಕೆ ತೆರೆಗೆ ಬರಲು ತಯರಾಗಿರುವ 'ಜಿಗರ್ ಥಂಡ' ಚಿತ್ರ ಖಳನಟ ರವಿಶಂಕರ್ ಅವರದು 50ನೇ ಸಿನಿಮಾ. ಕಿಚ್ಚ ಸುದೀಪ್ ಅರ್ಪಿಸುವ ಈ ಚಿತ್ರ ತಮಿಳಿನ 'ಜಿಗರ್ ಥಂಡ' ಚಿತ್ರದ ರೀಮೆಕ್ ಆಗಿದೆ. ಚಿತ್ರಕ್ಕೆ ಶಿವ ಗಣೇಶ್ ಅವರು ಆಕ್ಷನ್-ಕಟ್ ಹೇಳಿದ್ದಾರೆ.


ಈ ಚಿತ್ರದಲ್ಲೂ ರವಿಶಂಕರ್ ಅವರು ಖಳನಟನ ಪಾತ್ರದಲ್ಲಿ ಮಿಂಚಿದ್ದು, ನಟ ರಾಹುಲ್ ಅವರು ನಾಯಕನಾಗಿ ಮಿಂಚಿದ್ದಾರೆ. ಇವರಿಗೆ ನಟಿ ಸಂಯುಕ್ತ ಬೆಳವಾಡಿ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.


Kannada Actor P.Ravi Shankar's 50th movie is 'Jigarthanda'

ಅಂದಹಾಗೆ ಈ ಸಿನಿಮಾದ ಮೂಲಕ ರವಿಶಂಕರ್ ಅವರು ಗಾಯಕರಾಗಿ ಕೂಡ ಹೊರಹೊಮ್ಮಿದ್ದು, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಮ್ಯೂಸಿಕ್ ಕಂಪೋಸಿಷನ್ ನಲ್ಲಿ 'ಇದು ಆರ್ಮುಗಂ ಕೋಟೆ ಕಣೋ' ಅನ್ನೋ ಹಾಡಿಗೆ ತಮ್ಮ ಖಡಕ್ ಧ್ವನಿ ನೀಡಿದ್ದಾರೆ.


'ಕೆಂಪೇಗೌಡ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪರಿಚಯವಾದ ರವಿಶಂಕರ್ ಅವರು ಕಿಚ್ಚ ಸುದೀಪ್ ಅವರಿಗೆ ಪರಮಾತ್ಮ ಗೆಳೆಯ. ಇದೀಗ ಸುಮಾರು 5 ವರ್ಷಗಳಲ್ಲಿ ಭರ್ತಿ 50 ಸಿನಿಮಾ ಮಾಡಿ ಅಭಿಮಾನಿಗಳ ಮನದಲ್ಲಿ ಜಾಗ ಪಡೆದಿದ್ದಾರೆ.

English summary
Kannada Actor P.Ravi Shankar has completed 50 films as an actor and his 50th film is 'Jigar Thanda' which is the remake of the Tamil hit of the same name. Kannada Actor Rahul, Kannada Actress Samyukta Belavadi in the lead role. The movie is directed by Shiva Ganesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada