»   » ಅಂತೆ-ಕಂತೆಗೆಲ್ಲ ಬ್ರೇಕ್: ಸದ್ದಿಲ್ಲದೇ ಸೆಟ್ಟೇರಿತು ಪುನೀತ್ ಹೊಸ ಸಿನಿಮಾ

ಅಂತೆ-ಕಂತೆಗೆಲ್ಲ ಬ್ರೇಕ್: ಸದ್ದಿಲ್ಲದೇ ಸೆಟ್ಟೇರಿತು ಪುನೀತ್ ಹೊಸ ಸಿನಿಮಾ

Posted By:
Subscribe to Filmibeat Kannada

'ಅಂಜನಿಪುತ್ರ' ಚಿತ್ರದ ನಂತರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸಲಿರುವ ಹೊಸ ಚಿತ್ರದ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಅಪ್ಪು ಹೊಸ ಚಿತ್ರವನ್ನ ಯಾವ ನಿರ್ದೇಶಕ ಮಾಡಲಿದ್ದಾರೆ ಮತ್ತು ಯಾವ ರೀತಿಯ ಸಿನಿಮಾ ಮಾಡಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳನ್ನ ಕಾಡುತ್ತಿತ್ತು.

ಈ ಮಧ್ಯೆ ನಿರ್ದೇಶಕ ಶಶಾಂಕ್ ಅವರ ಜೊತೆ ಮಾಡಲಿರುವ ಸಿನಿಮಾ ಮೊದಲು ಸೆಟ್ಟೇರಲಿದೆ ಎನ್ನಲಾಯಿತು. ಮತ್ತೊಂದೆಡೆ ತಮಿಳು ನಿರ್ದೇಶಕ ವೆಟ್ರಿಮಾರನ್ ಅಪ್ಪುಗೆ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಯಿತು. ಇದರ ಜೊತೆ ರಾಕ್ ಲೈನ್ ವೆಂಕಟೇಶ್ ಬ್ಯಾನರ್ ನಲ್ಲಿ ಮಾಡಲಿರುವ ಸಿನಿಮಾ ಮೊದಲು ಆರಂಭವಾಗಲಿದೆ ಎನ್ನಲಾಯಿತು. ಆದ್ರೆ, ಇದ್ಯಾವುದು ಅಂತಿಮವಾಗಿರಲಿಲ್ಲ.

ರಾಜ್ ಸಮಾಧಿ ಬಳಿ ಹೋಗಿದ್ದ ಚರಣ್ ರಾಜ್ ಗೆ ಪುನೀತ್ ಸಿಕ್ಕಿದ್ರು.! ಆಮೇಲೇನಾಯ್ತು?

ಇದೀಗ, ಪವರ್ ಸ್ಟಾರ್ ಹೊಸ ಸಿನಿಮಾ ಶುರುವಾಗಿದೆ. ಸದ್ದು ಸುದ್ದಿಯಿಲ್ಲದೇ ಮುಹೂರ್ತ ಮುಗಿಸಿಕೊಂಡಿದೆ. ಅವ್ರ ಬಿಟ್ಟು ಇವ್ರ ಬಿಟ್ಟು ಇನ್ನೊಬ್ಬರು ಎಂಬಂತೆ ದೊಡ್ಡ ಪ್ರೊಡಕ್ಷನ್ ಗೆ ಪುನೀತ್ ಮೊದಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಮುಂದೆ ಓದಿ...

ಮೊದಲ ದೃಶ್ಯಕ್ಕೆ ಮುನಿರತ್ನ ಕ್ಲಾಪ್

ಪುನೀತ್ ರಾಜ್ ಕುಮಾರ್ ಅಭಿನಯಿಸಲಿರುವ ಹೊಸ ಚಿತ್ರದ ಮೊದಲ ದೃಶ್ಯಕ್ಕೆ ಶಾಸಕ ಹಾಗೂ ನಿರ್ಮಾಪಕ ಮುನಿರತ್ನ ಅವರು ಕ್ಲಾಪ್ ಮಾಡಿ, ಚಿತ್ರಕ್ಕೆ ಶುಭ ಹಾರೈಸಿದರು.

ರಾಕ್ ಲೈನ್ ಪ್ರೊಡಕ್ಷನ್ಸ್

ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಪುನೀತ್ ಹೊಸ ಸಿನಿಮಾ ಸೆಟ್ಟೇರಿದೆ. ಇದಕ್ಕು ಮುಂಚೆ ಪುನೀತ್ ಜೊತೆ ಮೂರು ಹಿಟ್ ಸಿನಿಮಾ ಮಾಡಿರುವ ರಾಕ್ ಲೈನ್ ಈಗ ನಾಲ್ಕನೇ ಚಿತ್ರದಲ್ಲಿ ಮತ್ತೆ ಒಂದಾಗಿದ್ದಾರೆ. ಪುನೀತ್ ಅಭಿನಯದ 'ಮೌರ್ಯ', 'ಅಜಯ್' ಹಾಗೂ 'ಪವರ್' ಸಿನಿಮಾವನ್ನ ನಿರ್ಮಾಣ ಮಾಡಿದ್ದರು.

ಪುನೀತ್ ಅವರನ್ನ ಭೇಟಿ ಮಾಡಿದ ಪೋಲೆಂಡ್ ರಾಯಭಾರಿ: ಯಾಕೆ?

ಟೈಟಲ್ ಇನ್ನು ಇಟ್ಟಿಲ್ಲ

ಇದೊಂದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾವಾಗಿದ್ದು, ಈ ಚಿತ್ರಕ್ಕೆ ಇನ್ನು ಟೈಟಲ್ ಇಟ್ಟಿಲ್ಲ. ಇನ್ನು ಈ ಚಿತ್ರವನ್ನ ಪವನ್ ಒಡೆಯರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಮೊದಲು ಪುನೀತ್ ಜೊತೆ 'ರಣವಿಕ್ರಮ' ಸಿನಿಮಾ ಮಾಡಿದ್ದರು.

'ಟಗರು' ಚಿತ್ರವನ್ನು ಪುನೀತ್ ಪೂರ್ತಿ ನೋಡಲು ಆಗಲಿಲ್ಲ

ನಾಯಕಿ ಯಾರು.?

ಸದ್ಯ ಸೈಲೆಂಟ್ ಆಗಿ ಮುಹೂರ್ತ ಮಾಡಿಕೊಂಡಿರುವ ಚಿತ್ರತಂಡ ಇನ್ನು ನಾಯಕಿಯನ್ನ ಅಂತಿಮ ಮಾಡಿಲ್ಲ. ಇನ್ನುಳಿದಂತೆ ಚಿತ್ರದ ಕಲಾವಿದರನ್ನ ಕೂಡ ಆಯ್ಕೆ ಮಾಡಿಕೊಂಡಿಲ್ಲ. ಮಾರ್ಚ್ 8 ರಿಂದ ಸಿನಿಮಾ ಚಿತ್ರೀಕರಣ ಮಾಡಲಿರುವ ಚಿತ್ರತಂಡ ಅಷ್ಟರೊಳಗೆ ಕಲಾವಿದರನ್ನ ಅಂತಿಮಗೊಳಿಸಲಿದೆ.

ಸ್ಟಾರ್ ಮ್ಯೂಸಿಕ್ ಡೈರೆಕ್ಟರ್

ಇನ್ನು ಪುನೀತ್ ಮತ್ತು ರಾಕ್ ಲೈನ್ ವೆಂಕಟೇಶ್ ಜುಗಲ್ ಬಂದಿಯ ಈ ಚಿತ್ರಕ್ಕೆ ಸೌತ್ ಸೂಪರ್ ಸ್ಟಾರ್ ಸಂಗೀತ ನಿರ್ದೇಶಕ ಡಿ ಇಮ್ಮನ್ ಹಾಡುಗಳನ್ನ ಸಂಯೋಜನೆ ಮಾಡಲಿದ್ದಾರೆ. ಇದಕ್ಕು ಮುಂಚೆ ಕನ್ನಡದಲ್ಲಿ 'ಕೋಟಿಗೊಬ್ಬ-2' ಮತ್ತು ಸತೀಶ್ ನೀನಾಸಂ ಅಭಿನಯದ 'ಅಂಜದಗಂಡು' ಚಿತ್ರಕ್ಕೆ ಸಂಗೀತ ನೀಡಿದ್ದರು.

ನಾಡಪ್ರಭು 'ಕೆಂಪೇಗೌಡ' ಆದ ಪುನೀತ್ ರಾಜ್ ಕುಮಾರ್

English summary
kannada actor, power star puneeth rajkumar's new movie starts from february 25th. the movie directed by pawan wodeyar and produced by rockline venkatesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada