For Quick Alerts
  ALLOW NOTIFICATIONS  
  For Daily Alerts

  ರಾಕ್ಷಸಿ ಆಡಿಯೋ ಬಿಡುಗಡೆ ಮಾಡಿದ ಅಪ್ಪು ಮತ್ತು ವಿಶಾಲ್

  By Suneetha
  |

  ಖ್ಯಾತ ತಮಿಳು ನಟ ವಿಶಾಲ್ ಹಾಗೂ ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅಕ್ಟೋಬರ್ 4 ರಂದು ಬಸವೇಶ್ವರ ನಗರದ ಡಾ.ಬಿ. ಆರ್ ಅಂಬೇಡ್ಕರ್ ಸ್ಟೇಡಿಯಂ ನಲ್ಲಿ ನಟಿ ಸಿಂಧು ಲೋಕನಾಥ್ ಹಾಗೂ ನವರಸನ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ 'ರಾಕ್ಷಸಿ' ಚಿತ್ರದ ಆಡಿಯೋ ಹಾಗೂ ಟ್ರೈಲರ್ ಬಿಡುಗಡೆ ಮಾಡಿದರು.

  ಫೇಮಸ್ ಡೈರೆಕ್ಟರ್ ಎ ಆರ್ ಮುರುಗದಾಸ್ ಅವರ ಶಿಷ್ಯ ಅಶ್ರಫ್ ಅವರು 'ರಾಕ್ಷಸಿ' ಚಿತ್ರಕ್ಕೆ ಆಕ್ಷನ್- ಕಟ್ ಹೇಳಿದ್ದಾರೆ. ಸುಮಾರು ವರ್ಷಗಳಿಂದ ಎ ಆರ್ ಮುರುಗದಾಸ್ ಅವರೊಂದಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಅಶ್ರಫ್ ಅವರಿಗೆ ಕನ್ನಡದಲ್ಲಿ ಇದು ಚೊಚ್ಚಲ ಚಿತ್ರ.

  ನಿರ್ದೇಶಕ ಮೈಸಾಕಿನ್ ಆಕ್ಷನ್-ಕಟ್ ಹೇಳಿದ್ದ ತಮಿಳು 'ಪಿಸಾಸು' (2014) ಚಿತ್ರದ ರಿಮೇಕ್ ಚಿತ್ರವಾದ 'ರಾಕ್ಷಸಿ' ಈಗಾಗಲೇ ಶೂಟಿಂಗ್ ಮುಗಿಸಿದೆ. ಇನ್ನು ಈ ಮೊದಲು ಚಿತ್ರದ ಶೂಟಿಂಗ್ ಸೆಟ್ ಗೆ ನಟ ವಿಶಾಲ್ ಅವರು ಭೇಟಿ ನೀಡಿ ನಿರ್ದೇಶಕರಿಗೆ ಹಾಗೂ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು.

  ಇದೀಗ ನಟ ವಿಶಾಲ್ ಅವರು ಚಿತ್ರದ ಆಡಿಯೋ ಹಾಗೂ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ಆಗಮಿಸಿ ಚಿತ್ರತಂಡಕ್ಕೆ ಮತ್ತಷ್ಟು ಸ್ಪೂರ್ತಿ ನೀಡಿದ್ದಾರೆ.

  ನಟ ವಿಶಾಲ್ ಅವರ ತಂದೆಯವರಿಗೆ ಬೆಂಗಳೂರಿನ ಕಡೆ ಹೆಚ್ಚಿನ ಕನೆಕ್ಷನ್ ಜೊತೆಗೆ ವಿಶಾಲ್ ಅವರ ತಂದೆ 'ರಾಕ್ಷಸಿ' ಚಿತ್ರದ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ನಿರ್ದೇಶಕ ಅಶ್ರಫ್ ಅವರು ತಮಿಳು ಚಿತ್ರರಂಗದಿಂದ ಚಿರಪರಿಚಿರಾಗಿರುವುದರಿಂದ ವಿಶಾಲ್ ಅವರು 'ರಾಕ್ಷಸಿ' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

  ಶ್ರೀ ಲಕ್ಷ್ಮಿ ವೃಷಾದ್ರಿ ಪ್ರೊಡಕ್ಷನ್ಸ್ ಅರ್ಪಿಸುವ 'ರಾಕ್ಷಸಿ' ಚಿತ್ರ ತಂದೆ ಮಗಳ ಬಾಂಧವ್ಯದ ಕಥಾಹಂದರವನ್ನು ಹೊಂದಿದೆ. ಶಿವು ಅವರ ಸಾಹಸ ಇರುವ ಚಿತ್ರಕ್ಕೆ ವಿಶಾಲ್ ಅವರ ಸಂಕಲನವಿದೆ.

  ಇನ್ನುಳಿದಂತೆ ತಾರಾಗಣದಲ್ಲಿ ನವರಸನ್, ಸಿಂಧು ಲೋಕನಾಥ್, ಜಿ.ಕೆ ರೆಡ್ಡಿ, ಕುರಿ ಪ್ರತಾಪ್, ಕೆಂಪೇಗೌಡ, ಸುಜಿತ್, ಕೃಷ್ಣಮೂರ್ತಿ ಹಾಗೂ ಕೌತಾರ್ ಮುಂತಾದವರು ಕಾಣಿಸಿಕೊಂಡಿದ್ದಾರೆ.

  English summary
  Actor Puneeth Rajakumar along with well known Tamil actors Vishal, Karthik and Arya are all set to release the audio of 'Rakshasi' being directed by Ashraf. The audio release and trailer launch is scheduled on 4th October at the Dr B R Ambedkar Stadium in Basaveshwaranagar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X