For Quick Alerts
  ALLOW NOTIFICATIONS  
  For Daily Alerts

  ವೀಕೆಂಡ್ ಅಂತ ಮತ್ತೆ ಬಂದ್ರು, ರಮೇಶ್ ಅರವಿಂದ್

  By Suneetha
  |

  ನಟ ಕಮ್ ನಿರ್ದೇಶಕ ರಮೇಶ್ ಅರವಿಂದ್ ಅವರು ಮತ್ತೆ ಕಿರುತೆರೆ ಕ್ಷೇತ್ರಕ್ಕೆ ವಾಪಸಾಗುತ್ತಿದ್ದಾರೆ. ಹೌದು ನೀವು ಬಹಳ ದಿನಗಳಿಂದ ಕಾಯುತ್ತಿದ್ದ ಆ ಶುಭ ಘಳಿಗೆ ಹತ್ತಿರವಾಗುತ್ತಿದೆ.

  ಅದೇನಪ್ಪಾ ಅಂದ್ರೆ, ಚಂದನವನದ ನಟ ಕಮ್ ನಿರ್ದೇಶಕ ರಮೇಶ್ ಅರವಿಂದ್ ಅವರು ಫೇಮಸ್ ರಿಯಾಲಿಟಿ ಶೋ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಮೂಲಕ ಮತ್ತೆ ಕಿರುತೆರೆ ಸ್ಕ್ರೀನ್ ಮೇಲೆ ಮಿಂಚಲಿದ್ದಾರೆ.[ಕನ್ನಡ ನಿರ್ದೇಶಕರ ತಮಿಳು ಚಿತ್ರ 'ಉತ್ತಮ ವಿಲನ್'ಗೆ, 5 ಪ್ರಶಸ್ತಿ..!]

  ಈಗಾಗಲೇ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಸೆಕೆಂಡ್ ಸೀಸನ್ ಗೆ ಎಲ್ಲಾ ತಯಾರಿ ನಡೆಯುತ್ತಿದ್ದು, ಕನ್ನಡದ ನಟ-ನಿರ್ದೇಶಕ ರಮೇಶ್ ಅವರು ಮತ್ತೆ ಕಿರುತೆರೆಗೆ ವಾಪಸಾಗುತ್ತಿದ್ದಾರೆ.

  ಇನ್ನು ಸ್ಯಾಂಡಲ್ ವುಡ್ ಕ್ಷೇತ್ರದ ಸ್ಟಾರ್ ಗಳು ಸೇರಿದಂತೆ ಇನ್ನಿತರೇ ಕ್ಷೇತ್ರಗಳಲ್ಲಿ ಬಹಳಷ್ಟು ಸಾಧನೆ ಮಾಡಿದ ಮಹನಿಯರನ್ನು ನಟ ರಮೇಶ್ ಅವರು ವೀಕೆಂಡ್ ನಲ್ಲಿ ಕರೆತರುವ ಮೂಲಕ ಅವರೆಲ್ಲರ ಸಾಧನೆಯನ್ನು ಇಡೀ ಜಗತ್ತಿಗೆ ತೋರಿಸಿ ಯಶಸ್ವಿಯಾಗಿರುವ ವಿಷಯ ನಿಮಗೆ ತಿಳಿದೇ ಇದೆ.[30ರ ಸುಂದರ ರಮೇಶ್ ಅರವಿಂದ್ 18 ಸೂಪರ್ ಹಿಟ್ ಚಿತ್ರಗಳು]

  ಇದೀಗ ಮತ್ತೊಮ್ಮೆ ಅದೇ ಸಾಹಸಕ್ಕೆ ಕೈ ಹಾಕಿದ್ದಾರೆ ನಟ ರಮೇಶ್ ಅರವಿಂದ್ ಅವರು. ಇದು ಕೇವಲ ಮಾತುಕತೆ ಮಾತ್ರವಲ್ಲದೇ, ಯಾವ ವ್ಯಕ್ತಿಯನ್ನು ಕರೆಸಿದ್ದಾರೋ ಅವರ ಇಡೀ ಫ್ಯಾಮಿಲಿ ಸೇರಿದಂತೆ, ಬಾಲ್ಯದ ಕೆಲವು ಘಟನೆಗಳನ್ನು, ಮರೆತು ಹೋದ ಆ ದಿನಗಳನ್ನು ನಟ ರಮೇಶ್ ಅವರು ಈ ಕಾರ್ಯಕ್ರಮದ ಮೂಲಕ ನೆನಪು ಮಾಡಿಸುತ್ತಿದ್ದರು.

  ಸ್ಯಾಂಡಲ್ ವುಡ್ ಟಾಪ್ ಸ್ಟಾರ್ ಗಳಾದ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಯಶ್, ರಾಧಿಕಾ ಪಂಡಿತ್, ಉಪೇಂದ್ರ, ರವಿಚಂದ್ರನ್, ಅರ್ಜುನ್ ಸರ್ಜಾ, ಯೋಗರಾಜ್ ಭಟ್, ಪಬ್ಲಿಕ್ ಟಿವಿ ನಿರೂಪಕ ರಂಗನಾಥ್ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರೇಕ್ಷಕರನ್ನು ರಂಜಿಸುವುದರ ಜೊತೆ ಜೊತೆ ತಮ್ಮ ಬಗ್ಗೆ ಹಂಚಿಕೊಂಡು, ಕಳೆದು ಹೋದ ದಿನಗಳನ್ನು ನೆನಪಿಸಿಕೊಂಡು ಸಂಭ್ರಮ ಪಟ್ಟಿದ್ದರು.

  ಒಟ್ನಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ವೀಕೆಂಡ್ ವಿತ್ ರಮೇಶ್' ಜನಮನ್ನಣೆ ಗಳಿಸಿ ನಟ ರಮೇಶ್ ಅರವಿಂದ್ ಅವರು ವೀಕ್ಷಕರನ್ನು ಮೋಡಿ ಮಾಡಿದ್ದರು. ಇದೀಗ ಮತ್ತೆ ರಮೇಶ್ ಅವರು ವಾಪಸಾಗಿದ್ದು, ಮತ್ತೊಮ್ಮೆ ವೀಕ್ಷಕರನ್ನು ಮೋಡಿ ಮಾಡಲಿದ್ದಾರೆ.

  English summary
  The popular show Weekend with Ramesh, hosted by actor-director Ramesh Aravind will be back. Sources said that preliminary work on the second season of the show is underway and Ramesh is all set to return. Ramesh proved to be a very popular and successful host and won immense praise for handling many stars of the industry with elan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X