Don't Miss!
- News
ಗ್ರಾಮಗಳು ವೃದ್ಧಾಶ್ರಮಗಳಾಗಿವೆ, ಉಡುಪಿಯಲ್ಲಿ ಐಟಿ ಪಾರ್ಕ್ ನಿರ್ಮಿಸಿ: ಕೇಂದ್ರ ಸರ್ಕಾರಕ್ಕೆ ಪೇಜಾವರ ಶ್ರೀ ಒತ್ತಾಯ
- Sports
IND vs NZ 3rd T20: ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ ಮಿಂಚು; ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ತೆಲುಗು ಟಿವಿ ಶೋನಲ್ಲಿ 'ಆರ್ಮುಗ' ರವಿಶಂಕರ್, ಕಿಚ್ಚ ಸುದೀಪ್ ಬಗ್ಗೆ ಹೇಳಿದ್ದೇನು?
ಸದ್ಯ ಕನ್ನಡದ ಅತ್ಯಂತ ಬೇಡಿಕೆಯ ನಟ ರವಿಶಂಕರ್, ತೆಲುಗಿನ ಕಿರುತೆರೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಮೂಲತಃ ತೆಲುಗಿನವರಾದ ರವಿಶಂಕರ್ ಅವರ ಮೊದಲ ಪೂರ್ಣಪ್ರಮಾಣದ ತೆಲುಗು ಕಾರ್ಯಕ್ರಮ ಇದಾಗಿತ್ತು.
Recommended Video
ಈಟಿವಿಯಲ್ಲಿ, ತೆಲುಗು ಹಾಸ್ಯ ನಟ ಆಲಿ ನಡೆಸಿಕೊಡುವ 'ಆಲಿತೋ ಸರದಾಗ' ಕಾರ್ಯಕ್ರಮದಲ್ಲಿ ರವಿಶಂಕರ್ ಭಾಗವಹಿಸಿದ್ದರು. ಆ ಕಾರ್ಯಕ್ರಮ, ಸೋಮವಾರ (ಮಾ 2) ರಾತ್ರಿ ಪ್ರಸಾರವಾಗಿದೆ.
ಕಾರ್ಯಕ್ರಮದಲ್ಲಿ ಹಲವು ವಿಷಯಗಳ ಬಗ್ಗೆ ಮಾತನಾಡಿದ ರವಿಶಂಕರ್, ಡಬ್ಬಿಂಗ್ ಆರ್ಟಿಸ್ಟ್ ಕಾಲದಿಂದ, ಈಗಿನವರೆಗೂ, ತಮ್ಮ ಜೀವನದ ಪ್ರಮುಖ ಘಟನೆಗಳನ್ನು ತೆರೆದಿಟ್ಟರು.
ರವಿಶಂಕರ್,
ಅರ್ಜುನ್
ಜನ್ಯ
ಬೆಳವಣಿಗೆ
ಬಗ್ಗೆ
ಸಂತಸ
ವ್ಯಕ್ತ
ಪಡಿಸಿದ
ಸುದೀಪ್
ತಮ್ಮ ಮನೆಯಲ್ಲಿ ಬೆಡ್ ರೂಂ ಇರುವುದು ಎರಡೇ, ಆದರೆ ಬಾತ್ ರೂಂ ಏಳು ಇದೆ ಎಂದು ಹೇಳಿದ ರವಿಶಂಕರ್, ಕನ್ನಡ ಚಿತ್ರೋದ್ಯಮ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರನ್ನು ನೆನಪಿಸಿಕೊಂಡಿದ್ದು ಹೀಗೆ:

ಒಂದು ದಿನ ನನಗೆ ಬೆಂಗಳೂರಿನಿಂದ ಫೋನ್ ಕರೆಬಂತು
1977ರಲ್ಲಿ ಡಬ್ಬಿಂಗ್ ಮಾಡುವ ಕೆಲಸವನ್ನು ಮಾಡಿದೆ. ಇದುವರೆಗೆ ಸಾವಿರಾರು ಕಲಾವಿದರಿಗೆ ಕಂಠದಾನ ನೀಡಿದ್ದೇನೆ. ತೆಲುಗು ಚಿತ್ರೋದ್ಯಮಕ್ಕೇ ಅಷ್ಟಾಗಿ ನನ್ನ ಪರಿಚಯವಿರಲಿಲ್ಲ. ಇನ್ನು, ಕನ್ನಡ ಚಿತ್ರೋದ್ಯಮಕ್ಕೆ ಹೇಗೆ ನಾನು ಪರಿಚಯವಿರಲು ಸಾಧ್ಯ. ಆದರೆ, ಒಂದು ದಿನ ನನಗೆ ಬೆಂಗಳೂರಿನಿಂದ ಫೋನ್ ಕರೆಬಂತು - ರವಿಶಂಕರ್.

ಕಿಚ್ಚ ಸುದೀಪ್ ಅವರ ಕಡೆಯಿಂದ ಫೋನ್
ಕಿಚ್ಚ ಸುದೀಪ್ ಅವರ ಕಡೆಯಿಂದ ಫೋನ್ ಬಂತು, ಬೆಂಗಳೂರಿಗೆ ಬರುವಂತೆ ಸೂಚಿಸಿದರು. ನನಗೆ ಫುಲ್ ಕನ್ಫ್ಯೂಸ್, ನನ್ನ ಅಣ್ಣ ಸಾಯಿಕುಮಾರ್ ಎಂದು ಕೊಂಡು ನನಗೆ ಫೋನ್ ಮಾಡಿದ್ರಾ ಎಂದು ಅವರಲ್ಲಿ ಕೇಳಿದೆ. ಕೆಂಪೇಗೌಡ ಎನ್ನುವ ಸಿನಿಮಾದಲ್ಲಿ ನೀವು ನಟಿಸಬೇಕು ಎಂದು ನನ್ನಲ್ಲಿ ಕೇಳಿದರು. ಪ್ರಕಾಶ್ ರೈ ಅವರ ರೈಟ್, ಲೆಫ್ಟ್ ಆಗಿ ಸಹಪಾತ್ರ ಮಾಡಲು ಹೇಳುತ್ತಾರೆ ಅಂದು ಕೊಂಡೆ - ರವಿಶಂಕರ್.
ಯಾವ
ನಟನಿಗೆ
ಒಲಿಯಲಿದೆ
'ಸೈಮಾ
ಅತ್ಯುತ್ತಮ
ವಿಲನ್'
ಪಟ್ಟ?

ನನ್ನನ್ನು ಎಲ್ಲರೂ ಆರ್ಮುಗ ಎಂದೇ ಕರೆಯಲಾರಂಭಿಸಿದರು
ಆದರೆ ನನ್ನ ಊಹೆ ತಪ್ಪಾಗಿತ್ತು. ತಮಿಳಿನಲ್ಲಿ ಪ್ರಕಾಶ್ ರೈ ಮಾಡಿದ ಪಾತ್ರವನ್ನು ಕನ್ನಡದಲ್ಲಿ ನಾನು ಮಾಡಬೇಕಾಗಿತ್ತು. ನನಗೆ ಒಂದು ಕಡೆ ಆಶ್ಚರ್ಯ, ಇನ್ನೊಂದು ಕಡೆ ಆ ಪಾತ್ರವನ್ನು ನಾನು ಮಾಡಬಲ್ಲೆನೇ ಎನ್ನುವ ಭಯ. ಆದರೆ, ಸುದೀಪ್ ಚಿತ್ರೀಕರಣದ ವೇಳೆ ನನಗೆ ನೀಡಿದ ಪ್ರೋತ್ಸಾಹದಿಂದ, ನನ್ನ ಪಾತ್ರ ಚೆನ್ನಾಗಿ ಬಂತು. ಆ ಚಿತ್ರ ಹಿಟ್ ಆದ ಮೇಲೆ ನನ್ನ ಜನಪ್ರಿಯ ಎಷ್ಟರ ಮಟ್ಟಿಗೆ ಹೋಯಿತು ಎಂದರೆ, ನನ್ನನ್ನು ಎಲ್ಲರೂ ಆರ್ಮುಗ ಎಂದೇ ಕರೆಯಲಾರಂಭಿಸಿದರು.

ಸುದೀಪ್ ಅವರಿಗೆ ನಾನು ಚಿರ ಖುಣಿ
ನಾನು ಸದ್ಯ ನೂರಾರು ಸಿನಿಮಾಗಳಲ್ಲಿ ನಟಿಸಿದ್ದೇನೆ. ನನ್ನನ್ನು ಕನ್ನಡ ಚಿತ್ರೋದ್ಯಮಕ್ಕೆ ಪರಿಚಯಿಸಿದ ಸುದೀಪ್ ಅವರಿಗೆ ನಾನು ಚಿರ ಖುಣಿ. ಈಗ ಬೆಂಗಳೂರಿನಲ್ಲೇ ಮನೆ ಮಾಡಿದ್ದೇನೆ. ಜೈ ಕನ್ನಡ..ಜೈಭುವನೇಶ್ವರಿ ಎಂದು ರವಿಶಂಕರ್, ಟಿವಿ ಕಾರ್ಯಕ್ರಮದಲ್ಲಿ ತಮ್ಮ ಮನದಾಳದ ಮಾತನ್ನು ಹೇಳಿದ್ದಾರೆ.