For Quick Alerts
  ALLOW NOTIFICATIONS  
  For Daily Alerts

  ಫೋಟೋ ಆಲ್ಬಂ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ರಿಷಿ-ಸ್ವಾತಿ

  |
  Rishi marries his long time love Swathi

  ಸ್ಯಾಂಡಲ್ ವುಡ್ ಅಂಗಳದಲ್ಲಿ ಮತ್ತೊಂದು ಸಂಭ್ರಮ ನೆರವೇರಿದೆ. ಚಂದನವನದ ಮತ್ತೋರ್ವ ನಟ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ಒಂದ್ಕಡೆ 'ಬಹದ್ದೂರ್' ಹುಡುಗ ಧ್ರುವ ಸರ್ಜಾ ವಿವಾಹಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಇನ್ನೊಂದ್ಕಡೆ 'ಆಪರೇಷನ್ ಅಲಮೇಲಮ್ಮ' ಮತ್ತು 'ಕವಲುದಾರಿ' ಚಿತ್ರಗಳ ಖ್ಯಾತಿಯ ನಟ ರಿಷಿ ಹೊಸ ಜೀವನ ಆರಂಭಿಸಿದ್ದಾರೆ.

  ತಮ್ಮ ಬಹುಕಾಲದ ಗೆಳತಿ ಸ್ವಾತಿ ಜೊತೆಗೆ ರಿಷಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿನ್ನೆಯಷ್ಟೇ (ನವೆಂಬರ್ 10) ಚೆನ್ನೈನಲ್ಲಿ ರಿಷಿ-ಸ್ವಾತಿ ವಿವಾಹ ಮಹೋತ್ಸವ ವಿಜೃಂಭಣೆಯಿಂದ ನಡೆದಿದೆ. ರಿಷಿ-ಸ್ವಾತಿ ಮದುವೆಯ ಫೋಟೋ ಆಲ್ಬಂ ಇಲ್ಲಿದೆ, ನೋಡಿ...

  ಹ್ಯಾಪಿ ಮ್ಯಾರೀಡ್ ಲೈಫ್ ರಿಷಿ-ಸ್ವಾತಿ

  ಹ್ಯಾಪಿ ಮ್ಯಾರೀಡ್ ಲೈಫ್ ರಿಷಿ-ಸ್ವಾತಿ

  ಚೆನ್ನೈನಲ್ಲಿ ರಿಷಿ ಮತ್ತು ಸ್ವಾತಿಯ ಮದುವೆ ಸಿಕ್ಕಾಪಟ್ಟೆ ಗ್ರ್ಯಾಂಡ್ ಆಗಿ ನಡೆದಿದೆ. ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಸ್ವಾತಿ ಕೊರಳಿಗೆ ರಿಷಿ ತಾಳಿ ಕಟ್ಟಿದ್ದಾರೆ. ಈಗಷ್ಟೇ ಹೊಸ ಜೀವನ ಆರಂಭಿಸಿರುವ ನವ ಜೋಡಿಗೆ ಹ್ಯಾಪಿ ಮ್ಯಾರೀಡ್ ಲೈಫ್.

  ಹೈದರಾಬಾದ್ ನಲ್ಲಿ ನಿಶ್ಚಿತಾರ್ಥ, ಚೆನ್ನೈನಲ್ಲಿ ಮದುವೆ, ಬೆಂಗಳೂರಿನಲ್ಲಿ ಆರತಕ್ಷತೆಹೈದರಾಬಾದ್ ನಲ್ಲಿ ನಿಶ್ಚಿತಾರ್ಥ, ಚೆನ್ನೈನಲ್ಲಿ ಮದುವೆ, ಬೆಂಗಳೂರಿನಲ್ಲಿ ಆರತಕ್ಷತೆ

  ಇದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್

  ಇದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್

  ತಮ್ಮ ಗೆಳತಿ ಸ್ವಾತಿಯನ್ನ ರಿಷಿ ಕೈಹಿಡಿದಿದ್ದಾರೆ. ಪ್ರೀತಿ ಮಾಡುತ್ತಿದ್ದ ಈ ಜೋಡಿಯ ಪ್ರೇಮಕ್ಕೆ ಇದೀಗ ಮದುವೆ ಎಂಬ ಅಧಿಕೃತ ಮುದ್ರೆ ಬಿದ್ದಿದೆ. ತಮ್ಮ ಲವ್ ಸ್ಟೋರಿಗೆ ಕುಟುಂಬದ ಸಮ್ಮತಿ ಪಡೆದು ಹಿರಿಯರ ಆಶೀರ್ವಾದದಿಂದ ರಿಷಿ-ಸ್ವಾತಿ ಮದುವೆ ಆಗಿದ್ದಾರೆ. ಅಂದ್ಹಾಗೆ ವೃತ್ತಿಯಲ್ಲಿ ಸ್ವಾತಿ ಬರಹಗಾರ್ತಿ ಆಗಿದ್ದಾರೆ.

  ಮತ್ತೊಂದು ಮದುವೆಗೆ ಸಜ್ಜಾದ ಸ್ಯಾಂಡಲ್ ವುಡ್: ರಿಷಿಗೆ ನಿಶ್ಚಿತಾರ್ಥದ ಸಂಭ್ರಮಮತ್ತೊಂದು ಮದುವೆಗೆ ಸಜ್ಜಾದ ಸ್ಯಾಂಡಲ್ ವುಡ್: ರಿಷಿಗೆ ನಿಶ್ಚಿತಾರ್ಥದ ಸಂಭ್ರಮ

  ಅದ್ಧೂರಿಯಾಗಿ ನಡೆದ ಮೆಹಂದಿ ಸಮಾರಂಭ

  ಅದ್ಧೂರಿಯಾಗಿ ನಡೆದ ಮೆಹಂದಿ ಸಮಾರಂಭ

  ವಿವಾಹ ಮಹೋತ್ಸವಕ್ಕೂ ಮುನ್ನ ಮೆಹಂದಿ ಸಮಾರಂಭ ಅದ್ಧೂರಿಯಾಗಿ ನೆರವೇರಿದೆ. ಮೆಹಂದಿ ಸಮಾರಂಭಕ್ಕಂತಲೇ ವಿಶೇಷ ಉಡುಗೆ ತೊಟ್ಟು ರಿಷಿ-ಸ್ವಾತಿ ಸಂಭ್ರಮಿಸಿದರು.

  ಮನೆಯಲ್ಲಿ ಅರಿಶಿನ ಶಾಸ್ತ್ರ

  ಮನೆಯಲ್ಲಿ ಅರಿಶಿನ ಶಾಸ್ತ್ರ

  ನವೆಂಬರ್ 8 ರಂದು ರಿಷಿ ಮನೆಯಲ್ಲಿ ಅರಿಶಿನ ಶಾಸ್ತ್ರ ನಡೆಯಿತು. ಬಳಿಕ ಚೆನ್ನೈನಲ್ಲಿ ವಿವಾಹ ನಡೆದಿದೆ. ನವೆಂಬರ್ 20 ರಂದು ಬೆಂಗಳೂರಿನಲ್ಲಿ ರಿಷಿ-ಸ್ವಾಮಿ ಆರತಕ್ಷತೆ ನಡೆಯಲಿದೆ.

  ರಿಷಿ ಕೈಯಲ್ಲಿರುವ ಚಿತ್ರಗಳಾವುವು.?

  ರಿಷಿ ಕೈಯಲ್ಲಿರುವ ಚಿತ್ರಗಳಾವುವು.?

  'ಆಪರೇಶನ್ ಅಲಮೇಲಮ್ಮ' ಮತ್ತು 'ಕವಲುದಾರಿ' ಚಿತ್ರಗಳ ಮೂಲಕ ಯಶಸ್ಸು ಪಡೆದಿರುವ ರಿಷಿ ಕೈಯಲ್ಲಿ ಈಗ ಸಾಕಷ್ಟು ಸಿನಿಮಾಗಳಿವೆ. 'ಸಾರ್ವಜನಿಕರಿಗೆ ಸುವರ್ಣಾವಕಾಶ' ರಿಲೀಸ್ ಗೆ ರೆಡಿ ಆಗಿದ್ದು, 'ರಾಮನ ಅವತಾರ', 'ಸಕಲಕಲಾವಲ್ಲಭ' ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ. ಇದೇ ಗ್ಯಾಪ್ನಲ್ಲಿ ರಿಷಿ ಮದುವೆ ಮಾಡಿಕೊಂಡಿದ್ದಾರೆ.

  English summary
  Kannada Actor Rishi got married to Swathi in Chennai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X