For Quick Alerts
  ALLOW NOTIFICATIONS  
  For Daily Alerts

  ಹಾಡಲು ಬಾರದೇ ಉಗಿಸಿಕೊಂಡಿದ್ದವರು ಇಂದು ಹಾಡಿ ತೋರಿಸಿದ್ರು

  By Suneetha
  |

  'ನಾನು ಅವನಲ್ಲ ಅವಳು' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡ ನಟ ಸಂಚಾರಿ ವಿಜಯ್ ಅವರು ಅತ್ಯುತ್ತಮ ನಟ ಅಂತ ಪ್ರಶಸ್ತಿ ಗಿಟ್ಟಿಸಿಕೊಂಡಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ.

  ಆದರೆ ನಟ ಸಂಚಾರಿ ವಿಜಯ್ ಅವರು ಒಬ್ಬ ಖ್ಯಾತ ಗಾಯಕನಾಗಬೇಕೆಂಬ ಗುರಿ ಇಟ್ಟುಕೊಂಡು ಚಿತ್ರರಂಗಕ್ಕೆ ಕಾಲಿಟ್ಟರಂತೆ. ಆದರೆ ರಿಯಾಲಿಟಿ ಶೋ ಒಂದರಲ್ಲಿ ಸರಿಯಾಗಿ ಹಾಡುವುದಕ್ಕಾಗದೇ ತೀರ್ಪಗಾರರ ಕೈಯಲ್ಲಿ ಬೈಸಿಕೊಂಡು ವಾಪಸ್ ಬಂದಿದ್ದರು.[ಸಂದರ್ಶನ : ಸಂಚಾರಿ ವಿಜಯ್ 'ಅವನು...ಅವಳಾದ' ಪರಿ]

  ಈ ಸಂದರ್ಭದಲ್ಲಿ ಸಂಗೀತ ನಿರ್ದೇಶಕ ವಿ.ಮನೋಹರ್ ಅವರು ಸಂಚಾರಿ ವಿಜಯ್ ಅವರಿಗೆ 'ನೀನು ಹಾಡುವುದಕ್ಕಿಂತ ನಟನೆಯಲ್ಲಿ ತೊಡಗಿಸಿಕೋ' ಅಂತ ಸಲಹೆ ನೀಡಿದ ಕಾರಣ ನಟನಾ ಕ್ಷೇತ್ರಕ್ಕೆ ಕಾಲಿಟ್ಟು ಪ್ರಶಸ್ತಿ ಕೂಡ ಮುಡಿಗೇರಿಸಿಕೊಂಡರು.

  ಬೆಂಗಳೂರಿಗೆ ಕಾಲಿಟ್ಟ ಮೊದಲ ದಿನಗಳಲ್ಲಿ ಸಂಗೀತಗಾರನಾಗಬೇಕೆಂಬ ದೃಷ್ಟಿಯಿಂದ ಮೂರುವರೆ ವರ್ಷಗಳ ಕಾಲ ಶಾಸ್ತ್ರೀಯ ಸಂಗೀತ, ಕರ್ನಾಟಕ ಸಂಗೀತ ಮತ್ತು ಹಿಂದೂಸ್ಥಾನಿ ಸಂಗೀತ ಅಭ್ಯಾಸ ಮಾಡಿದರಂತೆ. ಆದರೆ ಹಿಂದೂಸ್ಥಾನಿ ಸಂಗೀತ ತಲೆಗೆ ಹತ್ತದ ಕಾರಣ ರಿಯಾಲಿಟಿ ಶೋನಲ್ಲಿ ರಿಜೆಕ್ಟ್ ಆಗಿದ್ದರು.['ರಿಕ್ತ' ಇದು ಸಂಚಾರಿ ವಿಜಯ್ ಬತ್ತಳಿಕೆಯಿಂದ ಹೊರಟ ಹೊಸ ಬಾಣ]

  ಅಂದು ರಿಜೆಕ್ಟ್ ಆದ ಅದೇ ವಿಜಯ್ ಇದೀಗ ತಮ್ಮ ಎರಡನೇ ಚಿತ್ರ 'ರಿಕ್ತ'ದ 'ನೋಡ್ತಾ ನೋಡ್ತಾ ಗೆದ್ದವಳು' ಅನ್ನೋ ಪ್ಯಾಥೋ ಸಾಂಗ್ ಒಂದಕ್ಕೆ ತಮ್ಮ ಧ್ವನಿ ನೀಡಿದ್ದಾರೆ, ಚೊಚ್ಚಲ ಸಂಗೀತ ನಿರ್ದೇಶಕ ರಾಕಿ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.[4 ವಿಭಿನ್ನ ಶೇಡ್ ನಲ್ಲಿ ಸಂಚಾರಿ ವಿಜಯ್ ಹೊಸ ಅವತಾರ]

  ನವ ನಿರ್ದೇಶಕ ಅಮೃತ್ ಕುಮಾರ್ ಅವರ ಒತ್ತಾಯದ ಮೇರೆಗೆ ಈ ಹಾಡಿಗೆ ಸಂಚಾರಿ ವಿಜಯ್ ಅವರು ತಮ್ಮ ಧ್ವನಿ ನೀಡಿದ್ದು, ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ.

  English summary
  Kannada Actor Sanchari Vijay has turned singer with his new kannada movie 'Riktha'. He has sung a song called 'Nodta Nodta Geddavalu' under the music direction of music director Rocky. 'Riktha' movie is directed by Amruth Kumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X