»   » ಎತ್ತಣದಿಂದೆತ್ತಣಕ್ಕೆ 'ಭಜರಂಗಿ' ಲೋಕಿಯ ಪಯಣ

ಎತ್ತಣದಿಂದೆತ್ತಣಕ್ಕೆ 'ಭಜರಂಗಿ' ಲೋಕಿಯ ಪಯಣ

Posted By:
Subscribe to Filmibeat Kannada

ಇತ್ತೀಚೆಗೆ ಸಿನಿಮಾಗಳಲ್ಲಿ ಹೀರೋಗಳಿಗಿಂತ, ವಿಲನ್ ಗೆ ಸ್ವಲ್ಪ ಜಾಸ್ತಿ ಸ್ಕೋಪ್. ಅವರ ಎಂಟ್ರಿ ದೃಶ್ಯಗಳು ಸಮೇತ ಹೀರೋಗಿಂತ ಜಾಸ್ತಿ ಅದ್ಧೂರಿಯಾಗಿರುತ್ತೆ. 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ಮೂಲಕ ವಸಿಷ್ಠ ಅವರು ಖ್ಯಾತಿ ಗಳಿಸಿದ್ದು ಎಲ್ಲರಿಗೂ ಗೊತ್ತೇ ಇದೆ.

ಅದೇ ರೀತಿ 'ಭಜರಂಗಿ' ಚಿತ್ರದ ಮೂಲಕ ವಿಲನ್ ಆಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ನಟ ಸೌರವ್ ಲೋಕೇಶ್ ಅವರು ಕೂಡ, ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆಯುಳ್ಳ ಖಳನಟನಾಗಿ ಹೊರಹೊಮ್ಮಿದ್ದಾರೆ.[ಭಜರಂಗಿ 'ರಕ್ತಾಕ್ಷ' ಸೌರವ್ ಲೋಕೇಶ್ ಸಂದರ್ಶನ]


'ಭಜರಂಗಿ' ಚಿತ್ರದಲ್ಲಿ ಸೌರವ್ ಲೋಕೇಶ್ ಅವರ ಅವತಾರ ಕಂಡು ಪ್ರೇಕ್ಷಕರು ಬೆಚ್ಚಿ ಬಿದ್ದಿದ್ದು ಮಾತ್ರ ಸುಳ್ಳಲ್ಲ. ಜೊತೆಗೆ ಅದ್ಭುತ ನಟನೆಗೆ ಅಷ್ಟೇ ಶಿಳ್ಳೆ-ಚಪ್ಪಾಳೆ ಕೂಡ ಬಿದ್ದಿದೆ. ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸೌರವ್ ಲೋಕೇಶ್ ಅವರು 'ಭಜರಂಗಿ' ಲೋಕಿ ಅಂತಾನೇ ಖ್ಯಾತಿ ಪಡೆದರು.


ಮಾತ್ರವಲ್ಲದೇ ರಂಗಾಯಣದ ವಿದ್ಯಾರ್ಥಿ ಸೌರವ್ ಲೋಕಿ ಅವರು ಎಂತಹ ಪಾತ್ರಕ್ಕೂ ಒಪ್ಪುತ್ತಾರೆ ಅನ್ನೋದಕ್ಕೆ, 'ರಥಾವರ' ಚಿತ್ರದ ಮಂಗಳಮುಖಿ 'ಮಾದೇವಿ' ಪಾತ್ರವೇ ಉತ್ತಮ ಉದಾಹರಣೆ.[ರಥಾವರ ವಿಮರ್ಶೆ: ಉಗ್ರಂ, ಘೋರಂ, ಥರಥರ ಅನುಭವಂ.!]


ಇಂತಹ ಅದ್ಭುತ ನಟ ಸೌರವ್ ಲೋಕೇಶ್ ಇದೀಗ ಟಾಲಿವುಡ್ ಚಿತ್ರರಂಗಕ್ಕೂ ಕಾಲಿಡಲು ಸಜ್ಜಾಗಿದ್ದಾರೆ. ಅಂದಹಾಗೆ ಸದ್ದು-ಸುದ್ದಿ ಮಾಡದೇ ಸೌರವ್ ಲೋಕೇಶ್ ಅವರು ಯಾವಾಗ ತೆಲುಗು ಚಿತ್ರ ಒಪ್ಕೊಂಡ್ರು ಅಂತ ಯೋಚನೆ ಮಾಡೋ ಬದಲು, ಸಂಪೂರ್ಣ ಮಾಹಿತಿ ನೋಡಿ ಕೆಳಗಿನ ಸ್ಲೈಡ್ಸ್ ಗಳಲ್ಲಿ....


ತೆಲುಗಿಗೆ 'ಭಜರಂಗಿ' ಲೋಕಿ

ನಟ 'ಭಜರಂಗಿ' ಲೋಕಿ ಅವರು ತೆಲುಗು ಚಿತ್ರರಂಗಕ್ಕೆ ಕಾಲಿಡೋದೇನು ನಿಜ. ಆದರೆ ತೆಲುಗು ನಿರ್ಮಾಪಕರ ಸಿನಿಮಾದಲ್ಲಲ್ಲ, ಬದ್ಲಾಗಿ ಕನ್ನಡ ಚಿತ್ರದ ಮೂಲಕ ತೆಲುಗಿನಲ್ಲಿ ತಮ್ಮ ಖದರ್ ತೋರಲಿದ್ದಾರೆ. ಯಾವ ಸಿನಿಮಾ ಓದಿ ಮುಂದಿನ ಸ್ಲೈಡ್ಸ್ ನಲ್ಲಿ...[ಇಷ್ಟಪಟ್ಟು ಮಂಗಳಮುಖಿಯಾದೆ, ಎಂದ ಆ ಖಳನಾಯಕ ಯಾರು?]


ಯಾವ ಸಿನಿಮಾ

ಸ್ಯಾಂಡಲ್ ವುಡ್ ನಲ್ಲಿ ಬಹು ನಿರೀಕ್ಷೆ ಹುಟ್ಟುಹಾಕಿರುವ, ನಟ ನಿಖಿಲ್ ಕುಮಾರ್ ಅವರ ಚೊಚ್ಚಲ ಸಿನಿಮಾ 'ಜಾಗ್ವಾರ್' ಕನ್ನಡ ಮತ್ತು ತೆಲುಗಿನಲ್ಲಿ ನಿರ್ಮಾಣ ಆಗಿ ಎರಡೂ ಭಾಷೆಯಲ್ಲಿ ಏಕಕಾಲದಲ್ಲಿ ತೆರೆ ಕಾಣುತ್ತಿದೆ. ಇದರಲ್ಲಿ 'ಭಜರಂಗಿ' ಲೋಕಿ ಅವರು ಖಡಕ್ ವಿಲನ್ ಪಾತ್ರ ವಹಿಸಿದ್ದಾರೆ.


'ಜಾಗ್ವಾರ್' ಜೊತೆ ಟಾಲಿವುಡ್ ಗೆ ಲೋಕಿ

ನಟ ಸೌರವ್ ಲೋಕೇಶ್ ನಿಖಿಲ್ ಕುಮಾರ್ ಗೆ ಟಕ್ಕರ್ ಕೊಡಲಿದ್ದು, ಸ್ಟೈಲಿಷ್ ಹಾಗೂ ಖಡಕ್ ಖಳನಟನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಂತೂ-ಇಂತೂ 'ಜಾಗ್ವಾರ್' ಚಿತ್ರದ ಮೂಲಕ 'ಭಜರಂಗಿ' ಲೋಕಿ ಅವರು ತೆಲುಗು ಚಿತ್ರರಂಗಕ್ಕೆ ಪ್ರಯಾಣ ಬೆಳೆಸಿದ್ದಾರೆ.[ಶಿವಣ್ಣ ಅಭಿನಯದ 'ಭಜರಂಗಿ' ಚಿತ್ರ ವಿಮರ್ಶೆ]


ಜಗಪತಿ ಬಾಬು ಜೊತೆ ಸೌರವ್

ಈ ಚಿತ್ರದಲ್ಲಿ ಸೌರವ್ ಲೋಕೇಶ್ ಅವರ ಜೊತೆ ಇನ್ನಿಬ್ಬರು ಖಳನಟರಿದ್ದಾರೆ. ತೆಲುಗು ನಟ ಜಗಪತಿ ಬಾಬು ಮತ್ತು ನಟ ಸಂಪತ್ ಕುಮಾರ್ ಅವರು ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಸಂಪತ್ ಅವರು ಮುಖ್ಯ ವಿಲನ್ ಆಗಿ ರಂಜಿಸಲಿದ್ದಾರೆ. ಇವರ ಕೈ ಕೆಳಗೆ ಸೌರವ್ ಲೋಕಿ ಇರುತ್ತಾರೆ.


ಟರ್ನಿಂಗ್ ಪಾಯಿಂಟ್ ಆಗುತ್ತಾ.?

ಅಂದಹಾಗೆ ಈ ಸಿನಿಮಾ ಸೌರವ್ ಅವರಿಗೆ ಟರ್ನಿಂಗ್ ಪಾಯಿಂಟ್ ಕೊಟ್ಟರೂ ಕೊಡಬಹುದು. ಈ ಚಿತ್ರದ ಮೂಲಕ ಇವರ ನಟನೆ ತೆಲುಗು ನಿರ್ಮಾಪಕರಿಗೆ ಇಷ್ಟವಾದ್ರೆ, ತೆಲುಗಿನಲ್ಲೂ ಲೋಕಿ ಮಿಂಚೋ ಅವಕಾಶ ಗಿಟ್ಟಿಸಿಕೊಳ್ಳಬಹುದು.


English summary
'Bhajarangi' fame Kannada Actor Saurav Lokesh is all set to make his Telugu debut with Kannada Movie 'Jaguar'. Kannada Actor Nikhil Kumar, Actress Deepthi Sati in the lead role. The movie is directed by A Mahadev.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada