»   » 'ಸತ್ಯ ಹರಿಶ್ಚಂದ್ರ'ನ ಅವತಾರ ತಾಳಿದ ಕಾಮಿಡಿ ಕಿಂಗ್ ಶರಣ್

'ಸತ್ಯ ಹರಿಶ್ಚಂದ್ರ'ನ ಅವತಾರ ತಾಳಿದ ಕಾಮಿಡಿ ಕಿಂಗ್ ಶರಣ್

Posted By:
Subscribe to Filmibeat Kannada

'ರ್ಯಾಂಬೋ' ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ಕಾಣಿಸಿಕೊಳ್ಳಲು ಆರಂಭಿಸಿದ ನಂತರ ಕಾಮಿಡಿ ಕಿಂಗ್ ಶರಣ್ ಅವರಿಗೆ ಪುರುಸೋತ್ತೇ ಇಲ್ಲದಂತಾಗಿದೆ.ತದನಂತರ ಸಾಲು-ಸಾಲು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ ಶರಣ್ ಅವರು, ತಮ್ಮ ಅಭಿಮಾನಿಗಳಿಗೆ ಕಾಮಿಡಿ ಜೊತೆಗೆ ಹೀರೋಯಿಸಂ ಕೂಡ ತೋರಿಸಿಕೊಟ್ಟರು.

ಇದೀಗ ಮತ್ತೆ ಇನ್ನೊಂದು ಹೊಸ ಸಿನಿಮಾದಲ್ಲಿ ಶರಣ್ ಅವರು ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ಮಾಪಕ ಕೆ.ಮಂಜು ನಿರ್ಮಾಣದಲ್ಲಿ ಶರಣ್ ಅವರು ನಟಿಸುತ್ತಿದ್ದು, ಇದೀಗ ಚಿತ್ರಕ್ಕೆ 'ಸತ್ಯ ಹರಿಶ್ಚಂದ್ರ' ಎಂದು ಹೆಸರಿಡಲಾಗಿದೆ.[ಸ್ಟಾರ್ ಗಳಾಗಿದ್ದರೂ ಗಾಡಿ ಬಿಟ್ಟು ಕಾಲ್ನಡಿಗೆಯಲ್ಲಿ ಸಾಗಿದ 'ಆ' ಘಟನೆಗಳಿವು.!]

Kannada Actor Sharan All Set To Become 'Sathya Harishchandra'

ಅಂದಹಾಗೆ ನಟ ಸಾರ್ವಭೌಮ ಡಾ ರಾಜ್ ಕುಮಾರ್ ಅವರ ಪೌರಾಣಿಕ ಚಿತ್ರಗಳ ಹೆಸರನ್ನು ಇತ್ತೀಚಿನ ಕಮರ್ಷಿಯಲ್ ಚಿತ್ರಗಳಿಗೆ ಇಡೋದು ಒಂಥರಾ ಟ್ರೆಂಡ್ ಆಗಿದೆ. ರೇಡಿಯೋ ಜಾಕಿ ಆಗಿದ್ದ ಶ್ರೀನಿ ಅವರು ತಮ್ಮ ಹೊಸ ಚಿತ್ರಕ್ಕೆ 'ಶ್ರೀನಿವಾಸ ಕಲ್ಯಾಣ' ಎಂದು ಹೆಸರಿಟ್ಟಿದ್ದಾರೆ.

ಈಗ ಈ ಸಾಲಿಗೆ ಹೊಸ ಸೇರ್ಪಡೆ ಕೆ.ಮಂಜು ಮತ್ತು ಶರಣ್ ಕಾಂಬಿನೇಷನ್ ನ 'ಸತ್ಯ ಹರಿಶ್ಚಂದ್ರ' ಸಿನಿಮಾ. ಇನ್ನು ಇದು 'ಸತ್ಯ ಹರಿಶ್ಚಂದ್ರ' ಮಹಾರಾಜನ ಕುರಿತಾದ ಕಥೆಯಲ್ಲ, ಜೊತೆಗೆ ಡಾ.ರಾಜ್ ಅವರ ಕಥೆಗೂ, ಈ ಕಥೆಗೂ ಯಾವುದೇ ರೀತಿಯ ಸಂಬಂಧ ಇಲ್ಲ.[ಮತ್ತೊಂದು ತಮಿಳು ರೀಮೇಕ್ ನಲ್ಲಿ ನಟಿಸ್ತಾರಾ ಶರಣ್.?]

Kannada Actor Sharan All Set To Become 'Sathya Harishchandra'

ಬದ್ಲಾಗಿ ಇದೊಂದು ಸಾಮಾಜಿಕ ಕಾಮಿಡಿ ಚಿತ್ರವಾಗಿದ್ದು, ಕಥೆಗೆ ಹೆಸರು ಪೂರಕವಾಗಿದೆ ಅಂತ, ಈ ಹೆಸರನ್ನು ಇಡಲಾಗಿದೆ. ಚಿತ್ರಕ್ಕೆ 'ಆಕ್ಟರ್' ಚಿತ್ರದ ಖ್ಯಾತಿಯ ದಯಾಳ್ ಪದ್ಮನಾಭನ್ ಅವರು ಆಕ್ಷನ್-ಕಟ್ ಹೇಳುತ್ತಿದ್ದು, ಚಿತ್ರಕ್ಕೆ ಕಥೆ ಕೂಡ ಅವರೇ ಬರೆದಿದ್ದಾರೆ.[ಭಿಕ್ಷುಕರಾಗಿ 128 ರೂಪಾಯಿ ಸಂಪಾದಿಸಿದ ಕಾಮಿಡಿ ಕಿಂಗ್ ಶರಣ್]

Kannada Actor Sharan All Set To Become 'Sathya Harishchandra'

ಇನ್ನು ಕಾಮಿಡಿ ಕಿಂಗ್ ಶರಣ್ ಅವರು ಸದ್ಯಕ್ಕೆ 'ನಟರಾಜ ಸರ್ವಿಸ್' ಚಿತ್ರದ ಪ್ರೊಮೋಷನ್ ನಲ್ಲಿ ಬಿಜಿಯಾಗಿದ್ದು, ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಜೊತೆಗೆ 'ರಾಜ್-ವಿಷ್ಣು' ಚಿತ್ರದ ಶೂಟಿಂಗ್ ಕೊನೆಯ ಹಂತದಲ್ಲಿರುವುದರಿಂದ, ಪೂರ್ತಿ ಮುಗಿದ ನಂತರ 'ಸತ್ಯ ಹರಿಶ್ಚಂದ್ರ'ನಾಗಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಸೆಪ್ಟೆಂಬರ್ 18ಕ್ಕೆ ಈ ಸಿನಿಮಾ ಸೆಟ್ಟೇರಲಿದೆ.

English summary
Comedian Sharan, who has had a decent success as a lead actor, has signed a new project which is titled as Sathya Harishchandra. The film will be directed by Dayal Padmanabhan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada