»   » 'ಶರಣ ಬಸವೇಶ್ವರ'ರಿಗೆ ಶರಣ್ ಶರಣು ಶರಣಾರ್ಥಿ

'ಶರಣ ಬಸವೇಶ್ವರ'ರಿಗೆ ಶರಣ್ ಶರಣು ಶರಣಾರ್ಥಿ

Posted By:
Subscribe to Filmibeat Kannada

ಕಾಮಿಡಿ ಕಿಲಾಡಿಯಾಗಿ ಎಲ್ಲರಿಗೂ ಕಚಗುಳಿ ಇಡುತ್ತಿದ್ದ ನಟ ಶರಣ್ ಇದೀಗ ಸ್ಯಾಂಡಲ್ ವುಡ್ ನ ಬಹು ಬೇಡಿಕೆಯ ಹೀರೋ. 'ರ್ಯಾಂಬೋ', 'ಅಧ್ಯಕ್ಷ', 'ವಿಕ್ಟರಿ'...ಹೀಗೆ ಸಾಲು ಸಾಲು ಹಿಟ್ ಗಳನ್ನ ನೀಡಿರುವ ಶರಣ್ ಈಗ 'ಬುಲೆಟ್ ಬಸ್ಯಾ' ಚಿತ್ರದ ಮೂಲಕ ಎಲ್ಲರನ್ನ ರಂಜಿಸಲು ಬರುತ್ತಿದ್ದಾರೆ.

ಎಲ್ಲೆಡೆ 'ಬುಲೆಟ್ ಬಸ್ಯಾ' ಚಿತ್ರದ ಪ್ರಮೋಷನ್ ಭರ್ಜರಿಯಾಗಿ ನಡೆಯುತ್ತಿದೆ. ಅಂತಹ ಒಂದು ಪ್ರಮೋಷನಲ್ ಪ್ರೋಗ್ರಾಂನಲ್ಲಿ ನಟ ಶರಣ್, ತಮಗೆ 'ಶರಣ್' ಅನ್ನುವ ಹೆಸರು ಬಂದಿದ್ದು ಹೇಗೆ ಅನ್ನುವ ಗುಟ್ಟನ್ನ ಬಿಟ್ಟುಕೊಟ್ಟಿದ್ದಾರೆ.

ನಿಮಗೆಲ್ಲಾ ಗೊತ್ತಿರುವ ಹಾಗೆ, ನಟ ಶರಣ್ ತಂದೆ-ತಾಯಿ ರಂಗಭೂಮಿ ಕಲಾವಿದರು. ನಾಟಕದ ನಿಮಿತ್ತ ಒಮ್ಮೆ ಶರಣ್ ತಂದೆ-ತಾಯಿ ಗುಲ್ಬರ್ಗಗೆ ಹೋಗಿದ್ದರು. ಆ ಹೊತ್ತಿನಲ್ಲಿ ಶರಣ್ ತಾಯಿ ಗರ್ಭಿಣಿ.

Kannada Actor Sharan reveals the truth behind his name

ಹೊಟ್ಟೆಯಲ್ಲಿ ಮಗು ಬೆಳವಣಿಗೆ ಆರೋಗ್ಯಕರವಾಗಿಲ್ಲ. ಇದರಿಂದ ಮಗು ಮತ್ತು ತಾಯಿ ಇಬ್ಬರಿಗೂ ಸಮಸ್ಯೆ. ಆದ್ದರಿಂದ ಮಗುವನ್ನ ಅಬಾರ್ಟ್ ಮಾಡಿದರೆ ಒಳಿತು ಅಂತ ಆಗ ವೈದ್ಯರು ಸಲಹೆ ನೀಡಿದ್ದರಂತೆ. [ತಮಿಳು-ಹಿಂದಿಯಲ್ಲಿ ಶರಣ್ ಚಿತ್ರಕ್ಕೆ ಡಿಮ್ಯಾಂಡ್..!]

ಆದ್ರೆ,''ಈ ಮಗು ಬೇಕೆ ಬೇಕು. ನನ್ನ ಕಂದಮ್ಮನನ್ನ ನಾನು ಉಳಿಸಿಕೊಳ್ಳುತ್ತೇನೆ'' ಅಂತ ಪಟ್ಟು ಹಿಡಿದು ಕೂತ ಶರಣ್ ತಾಯಿ 'ಶ್ರೀ ಶರಣ ಬಸವೇಶ್ವರ'ರಿಗೆ ಹರಕೆ ಮಾಡಿಕೊಂಡರಂತೆ. ಅದರ ಪರಿಣಾಮ ಯಾವುದೇ ತೊಂದರೆ ಇಲ್ಲದೆ ಗಂಡು ಮಗುವಿನ ಜನನವಾಯ್ತು. [ಎತ್ತ ಕಳೆದುಹೋದರು 'ರಾಜ ರಾಜೇಂದ್ರ' ಶರಣ್..?]

ಶರಣ ಬಸವೇಶ್ವರ ಕೃಪೆಯಿಂದ ಹುಟ್ಟಿದ ಮಗುವಿಗೆ 'ಶರಣ್' ಅಂತಲೇ ನಾಮಕರಣ ಮಾಡಲಾಯಿತು. ಅಂದಿನಿಂದ ಇಂದಿನವರೆಗೂ ಶರಣ್ ಗೆ 'ಶರಣ ಬಸವೇಶ್ವರ'ರ ಮೇಲೆ ಅಪಾರ ಭಕ್ತಿ, ನಂಬಿಕೆ.

English summary
Kannada Actor Sharan has revealed the truth behind his name. Sharan is named after 'Sri Sharana Basaveshwara'. Read the article to know the reason.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada