»   » ಸೆನ್ಸಾರ್ ನಿಂದ ಕ್ಲೀನ್ ಚಿಟ್ ಪಡೆದ ಶರಣ್ 'ಬುಲೆಟ್ ಬಸ್ಯಾ'

ಸೆನ್ಸಾರ್ ನಿಂದ ಕ್ಲೀನ್ ಚಿಟ್ ಪಡೆದ ಶರಣ್ 'ಬುಲೆಟ್ ಬಸ್ಯಾ'

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಬೇಡಿಕೆಯ ನಟ ಶರಣ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು 1996 ರಲ್ಲಾದ್ರೂ ಪೂರ್ಣ ಪ್ರಮಾಣದ ನಾಯಕ ನಟನಾಗಿ ಬಣ್ಣ ಹಚ್ಚಿದ್ದು ಅವರ ಅಭಿನಯದ 100ನೇ ಚಿತ್ರವಾದ 2012 ರ 'Rambo' ಚಿತ್ರದಲ್ಲಿ.

ಆ ನಂತರ ಹಿಂತಿರುಗಿ ನೋಡದೆ ಮುನ್ನುಗ್ಗಿದ ಶರಣ್, ಹಿಟ್ ಚಿತ್ರಗಳಾದ, 'ವಿಕ್ಟರಿ', 'ಜೈಲಲಿತ', 'ಅಧ್ಯಕ್ಷ', 'ರಾಜರಾಜೇಂದ್ರ', ಮುಂತಾದ ಸಾಲು ಸಾಲು ಕಾಮಿಡಿ ಚಿತ್ರಗಳನ್ನು ನೀಡಿ ಪ್ರೇಕ್ಷಕರನ್ನು ನಕ್ಕು ನಗಿಸಿದ್ದರು. ['ಬುಲ್ಲೆಟ್' ಏರಿ ಬಂದ ಬರ್ತಡೆ ಬಾಯ್ ಶರಣ್]


Kannada Actor Sharan starrer 'Bullet Basya', Gets U/A Certificate

ಇದೀಗ ಶರಣ್ ಅಭಿನಯದ ಮತ್ತೊಂದು ಚಿತ್ರಕ್ಕೆ ಸೆನ್ಸಾರ್ ನಿಂದ ಯು/ಎ ಪ್ರಮಾಣಪತ್ರ ದೊರೆತಿದ್ದು ಬಿಡುಗಡೆಗೆ ತಯಾರಾಗಿದೆ. ಯಶಸ್ವಿ 'ಉಗ್ರಂ' ಚಿತ್ರದ ನಾಯಕಿ ಹರಿಪ್ರಿಯ ಹಾಗೂ ಶರಣ್ ಒಂದಾಗಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ ಕಾಮಿಡಿ ಚಿತ್ರ 'ಬುಲೆಟ್ ಬಸ್ಯಾ' ಸೆನ್ಸಾರ್ ನಿಂದ ಕ್ಲೀನ್ ಚಿಟ್ ಪಡೆದುಕೊಂಡಿದೆ. [ನಟ ಶರಣ್ ಗೆದ್ದಿದ್ದೆಲ್ಲಿ, ಉಳಿದವರು ಎಡವಿದ್ದೆಲ್ಲಿ?]


ಇದೇ ಜುಲೈ 24 ರಂದು ನಿರ್ಮಾಪಕ ಜಯಣ್ಣ ಶರಣ್ ಅಭಿಮಾನಿಗಳಿಗೆ 'ಬುಲೆಟ್ ಬಸ್ಯಾ' ನ ದರ್ಶನ ಮಾಡಿಸಲಿದ್ದಾರೆ. 'ಒಲವೇ ಮಂದಾರ' ಚಿತ್ರಕ್ಕೆ ನಿರ್ದೇಶನ ಮಾಡಿದ್ದ, ನಿರ್ದೇಶಕ ಜಯತೀರ್ಥ 'ಬುಲೆಟ್ ಬಸ್ಯಾ' ನಿಗೆ ಆಕ್ಷನ್-ಕಟ್ ಹೇಳಿದ್ದಾರೆ.[ಶರಣ್ ನಾಯಕತ್ವದ ಮೊದಲ ಚಿತ್ರಕ್ಕೆ ಭಾರಿ ನಿರೀಕ್ಷೆ]


ಜಯಣ್ಣ ಕಂಬೈನ್ಸ್ ಅಡಿಯಲ್ಲಿ ಮೂಡಿಬರುತ್ತಿರುವ 'ಬುಲೆಟ್ ಬಸ್ಯಾ' ನ ಸುಂದರ ಹಾಡುಗಳಿಗೆ ಫೇಮಸ್ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಪ್ರಮುಖವಾಗಿ ತಾರಾಗಣದಲ್ಲಿ ಯತಿರಾಜ್ ಜಗ್ಗೇಶ್ ಕಾಣಿಸಿಕೊಂಡಿದ್ದಾರೆ. ಶರಣ್ ಸಾಲು ಸಾಲು ಚಿತ್ರಗಳಂತೆ 'ಬುಲೆಟ್ ಬಸ್ಯಾ' ಮೋಡಿ ಮಾಡುತ್ತಾನ, ಅನ್ನೋದನ್ನ ಕಾದು ನೋಡಬೇಕಿದೆ.

English summary
Kannada movie 'Bullet Basya', Gets U/A Certificate from the Censor Board. 'Bullet Basya' features Kannada actor Sharan, Kannada actress Haripriya in the lead role, The movie is directed by Jaytheertha of 'Olave Mandara' fame.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X