»   » ಲಂಡನ್ ಗೆ ಹಾರಿದ ಶಿವಣ್ಣ: ಪುನೀತ್, ಯಶ್ ಏನಂದ್ರು ಗೊತ್ತಾ?

ಲಂಡನ್ ಗೆ ಹಾರಿದ ಶಿವಣ್ಣ: ಪುನೀತ್, ಯಶ್ ಏನಂದ್ರು ಗೊತ್ತಾ?

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಸೂಪರ್ ಹಿಟ್ ಸಿನಿಮಾ 'ಶಿವಲಿಂಗ' ಇದೇ ಮೊದಲ ಬಾರಿಗೆ ಲಂಡನ್ ನಲ್ಲಿ ಪ್ರೀಮಿಯರ್ ಶೋ ಆಗುತ್ತಿರುವ ವಿಚಾರವನ್ನು ನಾವು ನಿಮಗೆ ಈ ಮೊದಲೇ ಇದೇ ಫಿಲ್ಮಿಬೀಟಲ್ಲಿ ಹೇಳಿದ್ವಿ.

ಇದೀಗ ಆ ದಿನ ಹತ್ತಿರವಾಗುತ್ತಿದ್ದು, ನಿನ್ನೆ (ಮಾರ್ಚ್ 17) ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 9.30ರ ಸಮಯಕ್ಕೆ ಎಮಿರೆಟ್ಸ್ ವಿಮಾನದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ ಅವರು ತಮ್ಮ ಫ್ಯಾಮಿಲಿ ಸಮೇತ ಲಂಡನ್ ಗೆ ಹಾರಿದ್ದಾರೆ.[ಹ್ಯಾಟ್ರಿಕ್ ಹೀರೋ ಶಿವಣ್ಣಗೆ ಲಂಡನ್ ನಲ್ಲಿ ಭರ್ಜರಿ ಸನ್ಮಾನ]


ಮಾರ್ಚ್ 19 ರಂದು ಲಂಡನ್ ನಲ್ಲಿ 'ಶಿವಲಿಂಗ' ಚಿತ್ರದ ಪ್ರೀಮಿಯರ್ ಶೋ ನಡೆಯಲಿದ್ದು, ಅನಿವಾಸಿ ಕನ್ನಡಿಗರ ಜೊತೆ ಪ್ರಿಮಿಯರ್ ಶೋ ವೀಕ್ಷಿಸಲು ಸೆಂಚುರಿ ಸ್ಟಾರ್ ಶಿವಣ್ಣ ಅವರು ಪತ್ನಿ ಗೀತಾ ಶಿವರಾಜ್ ಕುಮಾರ್ ದೊಡ್ಡ ಮಗಳು ನಿರುಪಮಾ, ಅಳಿಯ ದಿಲೀಪ್ ಹಾಗೂ ಸಣ್ಣ ಮಗಳು ಅನುಪಮಾ ಅಂತ ಕುಟುಂಬ ಸಮೇತ ಹಾಗೂ 'ಶಿವಲಿಂಗ' ಚಿತ್ರತಂಡದ ಜೊತೆ ಲಂಡನ್ ಗೆ ಪ್ರಯಾಣಿಸಿದ್ದಾರೆ.


ಅಂದಹಾಗೆ ಶಿವರಾಜ್ ಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ಬರೋಬ್ಬರಿ 30 ವರ್ಷವನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನಲೆಯಲ್ಲಿ ಲಂಡನ್ ನಲ್ಲಿರುವ ಕನ್ನಡಿಗರು ಹಾಗೂ ಅಭಿಮಾನಿಗಳು ಶಿವಣ್ಣ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದಾರೆ.[ಅಮೆರಿಕದಲ್ಲೂ 'ಶಿವಲಿಂಗ' ಅಬ್ಬರ ಶುರು ಆಯ್ತು]


ಇನ್ನು ಶಿವಣ್ಣ ಅವರ ಲಂಡನ್ ಪ್ರಯಾಣಕ್ಕೆ ಯಾರೆಲ್ಲಾ ಸ್ಟಾರ್ ನಟ-ನಟಿಯರು ಶುಭ ಕೋರಿದ್ದಾರೆ ಹಾಗೂ ಮಾರ್ಚ್ 19ರಂದು ಲಂಡನ್ ನಲ್ಲಿ ಶಿವಣ್ಣ ಅವರ ಕಾರ್ಯಕ್ರಮದ ಟೈಮ್ ಟೇಬಲ್ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...


ಬಸವೇಶ್ವರ ಪುತ್ಥಳಿ ಮುಂದೆ ಸನ್ಮಾನ

ಲಂಡನ್ ಗೆ ಭೇಟಿ ಕೊಡುತ್ತಿರುವ ಶಿವರಾಜ್ ಕುಮಾರ್ ದಂಪತಿಗಳು ಮಾರ್ಚ್ 19 ರಂದು ಅಲ್ಲಿ ಇಳಿದ ತಕ್ಷಣ ಬಸವೇಶ್ವರ ಪುತ್ಥಳಿಗೆ ನಮಿಸಲಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಈ ಪುತ್ಥಳಿಯನ್ನು ಪ್ರದಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ್ದರು.[ಲಂಡನ್ ಗೆ ಹಾರಲು ಸಜ್ಜಾದ ಶಿವಣ್ಣನ 'ಶಿವಲಿಂಗ']


ವಿಷನೇರ್ ಪ್ರಶಸ್ತಿ

ಶಿವಣ್ಣ ಅವರ 30 ವರ್ಷಗಳ ಸಾಧನೆಗೆ ಲಂಡನ್ ನ ಅನಿವಾಸಿ ಭಾರತೀಯರು ವಿಷನೇರ್ ಎಂಬ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ಬಸವೇಶ್ವರ ಪುತ್ಥಳಿಯ ಮುಂಭಾಗದಲ್ಲಿ ಬಸವೇಶ್ವರ ಫೌಂಡೇಶನ್ ನ ಅಧ್ಯಕ್ಷರಾದ ನೀರಜ್ ಪಾಟೀಲ್ ಅವರು ಶಿವರಾಜ್ ಕುಮಾರ್ ದಂಪತಿಯನ್ನು ಸನ್ಮಾನಿಸಲಿದ್ದಾರೆ. ತದನಂತರ ಮಧ್ಯಾಹ್ನ ಬ್ರಿಟಿಷ್ ಪಾರ್ಲಿಮೆಂಟ್ ವೀಕ್ಷಿಸಲು ಶಿವಣ್ಣ ಮತ್ತು ಫ್ಯಾಮಿಲಿ ಹೋಗಲಿದ್ದಾರೆ.[ಹರಕೆ ತೀರಿಸಲು ದರ್ಗಾಕ್ಕೆ ಭೇಟಿ ನೀಡಿದ ಹ್ಯಾಟ್ರಿಕ್ ಹೀರೋ ಶಿವಣ್ಣ]


ಶುಭಾಶಯ ಕೋರಿದ ಯಶ್

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ಸ್ವಂತ ಅಣ್ಣನ ಥರ ನೋಡುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅವರು ಏನು ಹೇಳಿದ್ದಾರೆ ಅನ್ನೋದನ್ನ ಅವರ ಮಾತುಗಳಲ್ಲೇ ಕೇಳಲು ಈ ವಿಡಿಯೋ ನೋಡಿ..


ಗುಡ್ ಲಕ್ ಎಂದ ಪವರ್ ಸ್ಟಾರ್

'ನನ್ನ ಅಣ್ಣ ಶಿವಣ್ಣನಿಗೆ ಪ್ರಶಸ್ತಿ ಬಂದರೆ ಅದು ನನ್ನ ಇಡೀ ಕುಟುಂಬಕ್ಕೆ ಬಂದ ಹಾಗೆ ಗುಡ್ ಲಕ್ ಶಿವಣ್ಣ' ಎಂದಿರುವ ಪವರ್ ಸ್ಟಾರ್ ಪುನೀತ್ ಅವರು ಶಿವಣ್ಣನ ಬಗ್ಗೆ ಹೇಳಿದ್ದೇನು? ನೋಡಿ ಈ ವಿಡಿಯೋದಲ್ಲಿ.


ಸುಂದರ ನಟಿ ಸುಧಾರಾಣಿ

ಶಿವಣ್ಣ ಅವರ ಮೊದಲ ಸಿನಿಮಾ 'ಆನಂದ್' ಚಿತ್ರದಿಂದ ಹಿಡಿದು ಅವರ ಜೊತೆ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ನಟಿ ಸುಧಾರಾಣಿ ಅವರು ಶಿವಣ್ಣ ಅವರಿಗೆ ತುಂಬು ಹೃದಯದಿಂದ ಶುಭಾಶಯ ಕೋರಿದ್ದಾರೆ. ನೋಡಿ ಈ ವಿಡಿಯೋದಲ್ಲಿ.


ರಮೇಶ್ ಅರವಿಂದ್

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಲಂಡನ್ ಪ್ರಯಾಣಕ್ಕೆ ಹಾಗೂ ಅವರು ಪರದೇಶದಲ್ಲಿ ಸನ್ಮಾನಿತರಾಗುವುದಕ್ಕೆ ಸಂತಸ ವ್ಯಕ್ತಪಡಿಸಿದ ರಮೇಶ್ ಅರವಿಂದ್ ಅವರು ಶುಭ ಹಾರೈಸಿದ್ದಾರೆ. ವಿಡಿಯೋ ನೋಡಿ.


ಲಂಡನ್ ಗೆ ಹೊರಟ ಶಿವಣ್ಣ

ಲಂಡನ್ ಗೆ ಹೊರಡುವ ತರಾತುರಿಯಲ್ಲಿ ಮನೆಯಲ್ಲಿ ಹಾಗೂ ಏರ್ ಪೋರ್ಟ್ ನಲ್ಲಿ ಶಿವಣ್ಣ ಕಂಡು ಬಂದಿದ್ದು ಹೀಗೆ.


English summary
Kannada Actor Shivarajkumar Of Kannada film industry will be honoured by the Kannada Fans Association in London. Interestingly, Shivanna will be awarded in front of the Basavanna statue in London. His brother Puneeth Rajkumar and Yash have given their heartfelt wishes to Shivanna, through a video.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada