For Quick Alerts
  ALLOW NOTIFICATIONS  
  For Daily Alerts

  ಶಿವಣ್ಣನ ಮೊದಲ ಚಿತ್ರ 'ಆನಂದ್' ಶೂಟಿಂಗ್ ಅನುಭವ ಹೇಗಿತ್ತು ಗೊತ್ತಾ?

  By Suneetha
  |

  ಶಿವರಾಜ್ ಕುಮಾರ್....ಸ್ಯಾಂಡಲ್ ವುಡ್ ಕಿಂಗ್...ಹ್ಯಾಟ್ರಿಕ್ ಹೀರೋ...ಸೆಂಚುರಿ ಸ್ಟಾರ್...ಕರುನಾಡ ಚಕ್ರವರ್ತಿ..ಅಬ್ಬಬ್ಬಾ..ಮನಮೆಚ್ಚಿದ ಹುಡುಗನಿಗೆ ಪ್ರೀತಿಯ ಅಭಿಮಾನಿಗಳಿಟ್ಟಿರೋ ಹೆಸರುಗಳು ಒಂದಾ ಎರಡಾ...

  ಅಂದಹಾಗೆ ಇಷ್ಟೆಲ್ಲಾ ಅಭಿಮಾನಿಗಳ ಹೃದಯ ಕದ್ದಿರುವ ಚೋರ ಚಿರಯುವಕ ಶಿವಣ್ಣ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಇಂದಿಗೆ ಬರೋಬ್ಬರಿ 30 ವರ್ಷ ಆಯ್ತು.[ಶಿವಣ್ಣ 'ಶಿವಲಿಂಗ' ಮೇಲೆ ಸೂಪರ್ ಸ್ಟಾರ್ ರಜನಿಕಾಂತ್ ಕಣ್ಣು!]

  ಇದೇ ಸಂಭ್ರಮದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ ಅವರ ಮೊದಲ ಸಿನಿಮಾ ಆನಂದ್ ಶೂಟಿಂಗ್ ಅನುಭವವನ್ನು ನಿಮ್ಮ ಮುಂದೆ ತೆರೆದಿಡುತ್ತಿದ್ದೇವೆ.[ಶಿವಣ್ಣನ 'ಶಿವತಾಂಡವ'ಕ್ಕೆ ಬೆಚ್ಚಿ ಬಿದ್ದ ಬಾಕ್ಸಾಫೀಸ್]

  ಮೊದಲ ಸಿನಿಮಾ 'ಆನಂದ್' ನಲ್ಲಿ ಶಿವಣ್ಣ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಬ್ಯೂಟಿಫುಲ್ ನಟಿ ಸುಧಾ ರಾಣಿ. ಅಂದು ಮೊದಲ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಶಿವಣ್ಣ ಅವರಿಗೆ ತುಂಬಾ ಎಕ್ಸೈಟ್ ಮೆಂಟ್ ಆಗಿದ್ದು, ಏನೇನಾಗಿತ್ತು ಅನ್ನೋದನ್ನು ತಿಳಿಯಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ....

  ಶೂಟಿಂಗ್ ರೆಡಿ

  ಶೂಟಿಂಗ್ ರೆಡಿ

  'ಆನಂದ್' ಚಿತ್ರತಂಡ ಅದ್ದೂರಿಯಾಗಿ ಮೂಹೂರ್ತ ಮಾಡ್ಕೊಂಡು ಶೂಟಿಂಗ್ ಗೆ ರೆಡಿ ಆಯ್ತು. ರಾಜ್ ಕುಟುಂಬದ ಕುಡಿ ನಾಯಕನಾಗಿ ಎಂಟ್ರಿಯಾಗ್ತಿದ್ದಾನೆ ಅಂದಾಗ ಅಭಿಮಾನಿಗಳು ಹುಚ್ಚೆದ್ದು ಕುಣಿದ್ರು. ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು. 'ಆನಂದ್' ಚಿತ್ರದ ಮೂಹೂರ್ತದ ದಿನ ಶಿವರಾಜ್ ಕುಮಾರ್ ಫಸ್ಟ್ ಡೈಲಾಗ್ ಹೊಡ್ದೇ ಬಿಟ್ರು. 'ನನ್ನ ಹೆಸರು ಆನಂದ್' ಇದು ಶಿವಣ್ಣ ಕ್ಯಾಮರಾ ಮುಂದೆ ಹೊಡ್ದ ಮೊಟ್ಟ ಮೊದಲ ಡೈಲಾಗ್.[ತಮಿಳು-ತೆಲುಗಿನಲ್ಲು ಸದ್ದು ಮಾಡಲಿದೆಯಾ ಶಿವಣ್ಣನ 'ಶಿವಲಿಂಗ']

  ಮನಸ್ಸಿನಲ್ಲಿ ಏನೋ ಆತಂಕ

  ಮನಸ್ಸಿನಲ್ಲಿ ಏನೋ ಆತಂಕ

  ಚಿತ್ರ ಪ್ರಿಯರ ಮನಸ್ಸಿನಲ್ಲಿ ಮನೆಮಾಡಿದ ದೊಡ್ಡ ನಟನ ಮಗ ಚಿತ್ರರಂಗಕ್ಕೆ ಎಂಟ್ರಿಯಾಗೋದು ತುಂಬಾ ಸುಲಭ ಅಂತಾನೆ ಎಲ್ರೂ ಅಂದ್ಕೊಂಡಿರ್ತಾರೆ. ಆದ್ರೆ ಅಲ್ಲಿರೋ ಆತಂಕ ತುಂಬಾನೆ ಭಿನ್ನವಾದುದು. ಡಾ.ರಾಜ್ ಕುಮಾರ್ ಕರ್ನಾಟಕದಲ್ಲಿ ಎಲ್ಲರ ನೆಚ್ಚಿನ ಅಣ್ಣಾವ್ರಾಗಿ ಮಿಂಚಿದ್ರು. ಇಂತಹ ಮಹಾನ್ ನಟನ ಮಗ ನಾಯಕನಾಗಿ ಎಂಟ್ರಿಯಾಗ್ತಾನೆ ಅಂದಾಗ ನಿರೀಕ್ಷೆಗಳ ಸೌಧವೇ ನಿರ್ಮಾಣವಾಗುತ್ತೆ. ಮೊದಲ ಚಿತ್ರದಲ್ಲಿ ಅಭಿನಯಿಸುವಾಗ ಶಿವರಾಜ್ ಕುಮಾರ್ ಗೆ ನನ್ನನ್ನು ಚಿತ್ರಪ್ರಿಯರು ಒಪ್ಪಿಕೊಳ್ತಾರ, ಒಪ್ಪಿಕೊಳ್ಳದೆ ಇದ್ರೆ ಏನೂ ಮಾಡೋದು ಮುಂತಾದ ಹಲವಾರು ಆತಂಕಗಳನ್ನು ಎದುರಿಸಿದ್ರು. ಈ ಆತಂಕಗಳ ಮದ್ಯೇನೆ ಆನಂದ್ ಚಿತ್ರದ ಚಿತ್ರೀಕರಣ ನಡೀತು.

  ಶಿವಣ್ಣ ವೆಡ್ಸ್ ಗೀತಾ

  ಶಿವಣ್ಣ ವೆಡ್ಸ್ ಗೀತಾ

  'ಆನಂದ್' ಚಿತ್ರದ ಚಿತ್ರೀಕರಣ ಕಂಪ್ಲೀಟ್ ಆಯ್ತು. ಶೂಟಿಂಗ್ ಪೂರ್ತಿ ಆದ ಕೂಡಲೇ ನಡೆದಿದ್ದು ಸೆಂಚುರಿ ಸ್ಟಾರ್ ಶಿವಣ್ಣನ ವಿವಾಹ. ತಂದೆ ತಾಯಿಯ ಸೂಚನೆಯಂತೆ ಬಂಗಾರಪ್ಪನವರ ಪುತ್ರಿ ಗೀತಾರನ್ನು ವಿವಾಹವಾಗಿ ಶಿವರಾಜ್ ಕುಮಾರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

  'ಆನಂದ್' ರಿಲೀಸ್ ದಿನ ಹತ್ತಿರ ಬಂತು

  'ಆನಂದ್' ರಿಲೀಸ್ ದಿನ ಹತ್ತಿರ ಬಂತು

  ಸುಧಾರಾಣಿ-ಶಿವಣ್ಣ ಜೋಡಿಯಾಗಿ ಕಾಣಿಸಿಕೊಂಡ 'ಆನಂದ್' ಚಿತ್ರ ರಿಲೀಸಾಗೋ ದಿನ ಬಂದೇ ಬಿಟ್ಟಿತ್ತು, ಶಿವಣ್ಣನ ಮನಸ್ಸಲ್ಲಿ ಮತ್ತೆ ಆತಂಕದ ಗೆರೆಗಳು ಮೂಡೋದಿಕ್ಕೆ ಶುರುವಾಯಿತು. ಜನಗಳು ಒಪ್ಪಿಕೊಳ್ದೆ ಇದ್ರೆ ಏನೂ ಮಾಡೋದು ಅನ್ನೋ ಆತಂಕ ಶಿವಣ್ಣನನ್ನ ಮತ್ತೆ ಮತ್ತೆ ಕಾಡುತ್ತಿತ್ತು. ಆದ್ರೆ ಈ ಸಂಶಯವನ್ನು ಶಿವರಾಜ್ ಕುಮಾರ್ ಯಾರು ಜೊತೇನೂ ಹಂಚ್ಕೊಂಡಿರ್ಲಿಲ್ಲ. ಈ ವಿಷಯವನ್ನು ಶಿವರಾಜ್ ಕುಮಾರ್ ತಮ್ಮ ಆತ್ಮಕತೆಯಲ್ಲಿ ಹೇಳಿಕೊಂಡಿದ್ದಾರೆ.

  ಶಿವಣ್ಣ ಆತ್ಮಕಥೆಯಲ್ಲಿ ಬರೆದುಕೊಂಡಿದ್ದು

  ಶಿವಣ್ಣ ಆತ್ಮಕಥೆಯಲ್ಲಿ ಬರೆದುಕೊಂಡಿದ್ದು

  ( ಆನಂದ್ ಚಿತ್ರ ರೆಡಿಯಾಗಿದೆ ಅಂತಾ ತಿಳಿದಾಗ ನನಗೆ ನಿದ್ದೇನೆ ಬರಲಿಲ್ಲ. ಚಿತ್ರದಲ್ಲಿ ನಾನು ಹೇಗೆ ಕಾಣಿಸಿರಬಹುದು ಅನ್ನೋ ಆತಂಕ ಮತ್ತೆ ಮತ್ತೆ ಕಾಡುತ್ತಿತ್ತು. ಒಂದು ವೇಳೆ ನಾಯಕ ನಟನಾಗಿ ನನ್ನನ್ನು ಜನ ಒಪ್ಪದೇ ಹೋದ್ರೆ, ಏನು ಮಾಡೋದು ಅನ್ನೋ ಆತಂಕ ಮತ್ತೆ ಕಾಡುತಿತ್ತು. ಸೋತ್ರೆ ಕಾಲೇಜಿಗೆ ಹೋಗಿ ಮತ್ತೆ ಭಿ-ಫಾರ್ಮ್ ಮಾಡಿದರಾಯಿತು ಅಂದ್ಕೊಂಡಿದ್ದೆ). ಎಂದು ಶಿವಣ್ಣ ಅವರು ತಮ್ಮ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾರೆ.

  ಗೊಂದಲ ಹುಟ್ಟಿಸಿದ ಸಿನಿಮಾ

  ಗೊಂದಲ ಹುಟ್ಟಿಸಿದ ಸಿನಿಮಾ

  ನಟ ಶಿವರಾಜ್ ಕುಮಾರ್ ಮನಸ್ಸಲ್ಲಿ ಸಾಕಷ್ಟು ಗೊಂದಲಗಳನ್ನು ಹುಟ್ಟು ಹಾಕಿದ್ದ ಮೊದಲ ಸಿನಿಮಾ 'ಆನಂದ್' ಬಿಡುಗಡೆ ಆಯ್ತು. ಆನಂದ್ ಆಗಿ ಶಿವಣ್ಣ ಥಿಯೇಟರ್ ಗೆ ಎಂಟ್ರಿಕೊಟ್ಟೇ ಬಿಟ್ರು. ಬಿಡುಗಡೆಯಾದ ಮೊದಲ ದಿನ ಶಿವರಾಜ್ ಕುಮಾರ್ ಗೆ ಅಚ್ಚರಿ ಕಾದಿತ್ತು. ಮೊದಲ ದಿನವೇ ಶಿವಣ್ಣ ಸಿನಿ ಪ್ರಿಯರ ಮನಸ್ಸು ಗೆದ್ದು ಬಿಟ್ಟಿದ್ದರು. ಬಿಡುಗಡೆಯಾದ ಚಿತ್ರಮಂದಿರದಲ್ಲೆಲ್ಲಾ ಹೌಸ್ ಪುಲ್ ಪ್ರದರ್ಶನ ಕಾಣ್ತು. ಮೊದಲ ಸಿನಿಮಾದಲ್ಲೇ ಶಿವರಾಜ್ ಕುಮಾರ್ ಭರವಸೆ ಮೂಡಿಸಿ ಗೆದ್ದುಬಿಟ್ರು.

  ಬರೋಬ್ಬರಿ 30 ವರ್ಷ

  ಬರೋಬ್ಬರಿ 30 ವರ್ಷ

  ಇದೀಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಕನ್ನಡ ಸಿನಿಮಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ ಬರೋಬ್ಬರಿ 30 ವರ್ಷ ಆಗಿದ್ದು, ಆಗ್ಲೂ ಹ್ಯಾಟ್ರಿಕ್ ಹಿಟ್ ಸಿನಿಮಾ ನೀಡಿದ್ರು, ಈವಾಗ್ಲೂ ಹ್ಯಾಟ್ರಿಕ್ ಹಿಟ್ ನೀಡಿದ್ದಾರೆ.(ಚಿತ್ರಕೃಪೆ: ಫೇಸ್ ಬುಕ್)

  English summary
  Hatrick Hero Shivarajkumar, eldest son of Dr Rajkumar completes 30 years in Kannada film industry. Here is the beautiful memory about Shiva Rajkumar's first film 'Anand'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X