»   » ಚಿತ್ರಗಳು: ಬೆಳ್ಳಿ ಹೆಜ್ಜೆಯಲ್ಲಿ ಡಾ.ಶಿವಣ್ಣನ ಮನದಾಳದ ಮಾತು

ಚಿತ್ರಗಳು: ಬೆಳ್ಳಿ ಹೆಜ್ಜೆಯಲ್ಲಿ ಡಾ.ಶಿವಣ್ಣನ ಮನದಾಳದ ಮಾತು

Posted By:
Subscribe to Filmibeat Kannada

ನಾನು ಡಾ ರಾಜ್ ಕುಮಾರ್ ಅಲ್ಲ. ಡಾ ರಾಜ್ ಅವರ ಮಗ ಅಷ್ಟೇ, ದಯಮಾಡಿ ನನ್ನನ್ನು ಡಾ ರಾಜ್ ಅವರಿಗೆ ಹೋಲಿಸಬೇಡಿ. ಈ ರೀತಿ ಭಾವುಕರಾಗಿ ಪ್ರತಿಕ್ರಿಯಿಸಿದವರು ಹ್ಯಾಟ್ರಿಕ್ ಹೀರೋ ಡಾ ಶಿವರಾಜ್ ಕುಮಾರ್.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದೊಂದಿಗೆ ಕರ್ನಾಟಕ ಚಲನಚಿತ್ರ ಅಕಾಡೆಮಿಯು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಸೋಮವಾರ (ನವೆಂಬರ್ 30) ಆಯೋಜಿಸಿದ್ದ 'ಬೆಳ್ಳಿ ಹೆಜ್ಜೆ' ಸಮಾರಂಭದ ಸಂವಾದದಲ್ಲಿ ಡಾ ಶಿವರಾಜ್ ಕುಮಾರ್ ಅವರು ಪಾಲ್ಗೊಂಡು ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟರು.['ಬೆಳ್ಳಿ ಹೆಜ್ಜೆ' ಸಂವಾದ ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ.!]

ಡಾ ರಾಜ್ ಅವರು ಪಕ್ಷಾತೀತವಾಗಿದ್ದರು. ಹಾಗೆ ತಾವು ಕೂಡ ಪಕ್ಷಾತೀತವಾಗಿ ಅಭಿಮಾನಿಗಳನ್ನು ಹೊಂದಿದ್ದೀರಿ. ಆದರೆ, ನೀವು ನಿಮ್ಮ ಪತ್ನಿಯನ್ನು ಚುನಾವಣಾ ಕಣಕ್ಕೆ ಏಕೆ ಇಳಿಸಿದಿರಿ? ಎಂಬ ಪ್ರೇಕ್ಷಕರೋರ್ವರ ನೇರ ಪ್ರಶ್ನೆಗೆ ಉತ್ತರಿಸಿದ ಡಾ ಶಿವರಾಜ್ ಕುಮಾರ್ ಅವರು ಚುನಾವಣೆಯಲ್ಲಿ ಪತ್ನಿಯ ಸೋಲು-ಗೆಲುವಿನ ಬಗ್ಗೆ ಚಿಂತಿಸುವುದಿಲ್ಲ.

ನಾನು ಸತ್ತರೂ ಸಂತೋಷದಿಂದ ಸಾಯಬೇಕು. ಶಾಂತಿ ಮತ್ತು ನೆಮ್ಮದಿಯಿಂದ ಸಾಯಬೇಕು. ಪತ್ನಿಯೂ ಸೇರಿದಂತೆ ಯಾರ ಮನಸ್ಸು ನೋಯಿಸಬಾರದು ಎಂಬ ಕಾರಣಕ್ಕೆ ಗಂಡನಾಗಿ ನನ್ನ ಪತ್ನಿ ಗೀತಾ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಬೆಂಬಲಿಸಿದೆ ಎಂದು ತಮ್ಮ ಮನದಾಳದ ಮಾತುಗಳನ್ನು ಹೊರಹಾಕಿದರು. ಮುಂದೆ ಓದಿ..

ಮದರಾಸಿನ ಕಾಲೇಜು ದಿನಗಳು

ಮದರಾಸಿನಲ್ಲಿ ಕಾಲೇಜಿನಲ್ಲಿ ಪದವಿ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿನ ವಾತಾವರಣದ ಬಗ್ಗೆ ಬಾಲ್ಯದ ಗೆಳೆಯ ಚಿ. ಗುರುದತ್ ಅವರು ಪ್ರಶ್ನಿಸಿ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಮ್ಮ ಮನೆಯಲ್ಲಿನ ವಾತಾವರಣ ಚೆನ್ನಾಗಿತ್ತು, ಜಾತಿ-ವರ್ಗದ ಅರಿವೇ ಇರಲಿಲ್ಲ. ಅದಕ್ಕೇ ಇಂದಿಗೂ ನಾವೆಲ್ಲರೂ ಚೆನ್ನಾಗಿದ್ದೇವೆ, ಎಂದು ಶಿವಣ್ಣ ನುಡಿದರು.[ಕಳಸಾ-ಬಂಡೂರಿ ಯೋಜನೆ ಜಾರಿ: ಮತ್ತೆ ಬೀದಿಗಿಳಿದ ಸ್ಯಾಂಡಲ್ ವುಡ್!]

ಬಸ್ಸಲ್ಲಿ ಕಾಲೇಜಿಗೆ ಹೋಗುತ್ತಿದ್ದ ಶಿವಣ್ಣ

ಹಿರಿಯ ನಟನ ಮಗನಾಗಿಯೂ ಸಾಮಾನ್ಯನಂತೆ ಬಸ್ಸಿನಲ್ಲಿ ಕಾಲೇಜಿಗೆ ತೆರಳುತ್ತಿದ್ದ ದಿನಗಳ ನೆನಪಿನ ಬುತ್ತಿಯನ್ನು ಬಿಚ್ಚಿಡುವಂತೆ ಹಿರಿಯ ಪತ್ರಕರ್ತ ಸದಾಶಿವ ಶೆಣೈ ಅವರು ತಿಳಿಸಿದಾಗ, ಅವೆಲ್ಲವೂ ನನ್ನ ಹೃದಯದ ಗ್ರಂಥಾಲಯದಲ್ಲಿ ಸಂರಕ್ಷಿಸಿ ಇಟ್ಟುಕೊಂಡಿರುವ ಸಂಗತಿಗಳು ಎಂದರಲ್ಲದೆ, ಹುಡುಗಿಯೊಬ್ಬಳು ಟೈಮ್ ಕೇಳಿದಾಗ, ಕೈ ಗಡಿಯಾರ ನೋಡಿ ವಾಚ್ ಓಡುತ್ತಿಲ್ಲ ಎಂದು ತುಂಟ ಉತ್ತರ ಕೊಟ್ಟಿದ್ದನ್ನು ತಮ್ಮ ನೆನಪಿನಂಗಳದಿಂದ ಹೊರಹಾಕಿದರು ಶಿವಣ್ಣ.

ಕನ್ನಡ ಚಿತ್ರರಂಗದ ಮಾನ್ಯತೆಗೆ ಡಾ.ರಾಜ್ ಕಾರಣ

ಕನ್ನಡ ಚಿತ್ರರಂಗಕ್ಕೆ ವಿಶ್ವ ವ್ಯಾಪಿ ಮಾನ್ಯತೆ ದೊರೆಯಲು ಡಾ ರಾಜ್ ಕುಮಾರ್ ಅವರೇ ಕಾರಣ ಎಂದ ಅವರು ತಮ್ಮ ತಂದೆ ಡಾ ರಾಜ್ ಅವರ ಯಶಸ್ಸಿನ ಹಿಂದೆ ತಾಯಿ ಡಾ ಪಾರ್ವತಮ್ಮ ರಾಕ್ ಕುಮಾರ್ ಅವರು ಇದ್ದಂತೆ, ತಮ್ಮ ಯಶಸ್ಸಿನ ಹಿಂದೆ ಪತ್ನಿ ಗೀತಾ ಅವರ ಪಾಲು ಇದೆ. ಗೀತಾ ತಮ್ಮ ಬಾಳಲ್ಲಿ ಬೆಳಕು ತಂದಿದ್ದಾರೆ ಎಂದು ಹೇಳಲು ಮರೆಯಲಿಲ್ಲ.

ಸ್ನೇಹದ ಅರ್ಥ ಏನು ?

ಇದು ಶಿವಣ್ಣ ಅವರಿಗೆ 'ಎಡಕಲ್ಲು ಗುಡ್ಡದ ಮೇಲೆ' ಚಿತ್ರದ ಖ್ಯಾತಿಯ ನಟ ಚಂದ್ರಶೇಖರ್ ಅವರ ಪ್ರಶ್ನೆ. ಮದುವೆಯಾದ ಮೇಲೂ ಗೆಳೆಯರೊಂದಿಗೆ ಸ್ನೇಹ ಮುಂದುವರೆಯಲೇಬೇಕು. ಹೆಂಡತಿಯೊಂದಿಗೆ ಒಡನಾಟ ಮತ್ತು ಗೆಳೆಯನೊಂದಿಗೆ ಸ್ನೇಹ ಎರಡೂ ರೈಲ್ವೇ ಹಳಿಯಂತೆ, ಸಮಾನಾಂತರವಾಗಿ ಮುಂದುವರೆಯಬೇಕು. ಎಂದು ಶಿವಣ್ಣ ಉತ್ತರಿಸಿದರು.

ಬಾಂಧವ್ಯಕ್ಕೆ ಬೆಲೆ ಕೊಡುತ್ತಿದ್ದ ಶಿವಣ್ಣ

15 ದಿನ ಮೈಸೂರಿನಲ್ಲಿ ಶೂಟಿಂಗ್ ಇದ್ದಾಗಲೂ, ಮಗಳ ಪರೀಕ್ಷೆಯ ಸಂದರ್ಭದಲ್ಲಿ ಶಿವಣ್ಣ ಪ್ರತಿದಿನವೂ ಬೆಂಗಳೂರಿಗೆ ಬರುತ್ತಿದ್ದರಂತೆ. ಯಾರೇ ಆಗಲಿ ಸಂಸಾರಕ್ಕೂ ಟೈಮ್ ಕೊಡಬೇಕು. ಬಾಂಧವ್ಯಕ್ಕೂ ಬೆಲೆ ಕೊಡಬೇಕು. ಇದನ್ನು ನಾನು ಅಪ್ಪಾಜಿಯಿಂದ ಕಲಿತೆ ಎಂಬುದು ಶಿವಣ್ಣನ ಸ್ಪಷ್ಟ ಉತ್ತರ.

ತಾಲೀಮು ಇಲ್ಲದೆ ನೃತ್ಯ !

ಸ್ಟೂಡಿಯೋ ಒಂದರಲ್ಲಿ ಸ್ಟೂಡಿಯಸ್ಸಾಗಿ ನೃತ್ಯ ಮಾಡುತ್ತಿದ್ದ ಶಿವಣ್ಣನನ್ನು ಕಂಡ ಹಿಂದಿಯ ಜನಪ್ರಿಯ ನಟ ಸಂಜಯ್ ದತ್ ಅವರು ನೀವು ಎಷ್ಟು ದಿನಗಳು ತಾಲೀಮು ಮಾಡಿದ್ದೀರಿ ಎಂದರಂತೆ. ತಾಳಕ್ಕೆ ತಕ್ಕಂತೆ ಕುಣಿಯಲಾರಂಭಿಸಿದೆ ಎಂಬ ಶಿವಣ್ಣನ ಉತ್ತರಕ್ಕೆ ಸಂಜಯ್ ದತ್ ನಿಬ್ಬೆರಗಾದರಂತೆ.

ಕ್ರಿಕೆಟರ್ ಆಗದ್ದಕ್ಕೆ ನಟ

ಶಿವರಾಜ್ ಕುಮಾರ್ ಅವರು ಕ್ರಿಕೆಟ್ ಪಟು ಆಗಬೇಕಿತ್ತಂತೆ, ಆಯ್ಕೆಯಲ್ಲಿ ನಡೆದ ರಾಜಕೀಯ ಶಿವಣ್ಣನನ್ನು ಕ್ರಿಕೆಟರ್ ಮಾಡಲಿಲ್ಲ ನಿಜ. ಆದರೆ ಉತ್ತಮ ನಟನಾದೆ ಎಂದರು. ಇದು ಸಂವಾದದಲ್ಲಿ ಬಹಿರಂಗಗೊಂಡ ಸತ್ಯ ಸಂಗತಿ.

ಯಾರ ಅಭಿನಯವನ್ನು ಅನುಕರಿಸಿದ ಶಿವಣ್ಣ

ಅಮಿತಾಭ್ ಬಚ್ಚನ್ ಅಭಿಮಾನಿ, ಕಮಲ್ ಹಾಸನ್ ಅಂದ್ರೆ ತಮಗೆ ಪ್ರಾಣ ಎಂದು ಹೇಳಿದ ಶಿವಣ್ಣ, ಯಾರ ಅಭಿನಯವನ್ನೂ ಅನುಕರಿಸಲಿಲ್ಲವಂತ.. ಸ್ವಂತಿಕೆಯನ್ನೇ ನಂಬಿದ್ದೇನೆ ಎಂದರು. ಶಿವಣ್ಣನಿಗೆ ಮೊದಲು ಆಹ್ವಾನ ಬಂದದ್ದು ಮಲೆಯಾಳಂ ಚಿತ್ರದಲ್ಲಿನ ಅಭಿನಯಕ್ಕೆ. ಇದನ್ನು ನಯವಾಗಿ ತಿರಸ್ಕರಿಸಿದ ಶಿವಣ್ಣ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ಅಭಿನಯವನ್ನು ಕಲಿತು, ಕುಚಿಪುಡಿ ನೃತ್ಯ ಕಲಿತು ಕನ್ನಡ ಚಿತ್ರರಂಗದಲ್ಲಿ ದೊಡ್ಡ ತಾರೆಯಾದದ್ದು ಇದೀಗ ಇತಿಹಾಸ.

ಏಟು ತಿಂದದ್ದಕ್ಕೆ ದುಃಖ ಆಗಲಿಲ್ಲ !

ಎಲ್ಲರಂತೆ ಶಿವಣ್ಣ ಕೂಡಾ ತಮ್ಮ ತಂದೆ ಡಾ.ರಾಜ್ ಅವರಿಂದ ಒಮ್ಮೆ ಏಟು ತಿಂದಿದ್ದರಂತೆ. ಆದರೆ ತಾವು ಏಟು ತಿಂದದ್ದಕ್ಕೆ ದುಃಖ ಆಗಲಿಲ್ಲ. ನನ್ನನ್ನು ಹೊಡೆದ ನಂತರ ಅಪ್ಪಾಜಿ ಊಟ ಮಾಡಲಿಲ್ಲ. ಅದಕ್ಕಾಗಿ ದುಃಖವಾಯಿತು ಎಂಬ ತಮ್ಮ ಖಾಸಗಿ ಬದುಕನ್ನೂ ಶಿವಣ್ಣ ಪ್ರೇಕ್ಷಕರ ಮುಂದೆ ಹಂಚಿಕೊಂಡರು.

ಸಲಹೆ ಸ್ವೀಕರಿಸಿದ ಶಿವಣ್ಣ

ಇತರೆ ಭಾಷೆಗಳಂತೆಯೇ ಕನ್ನಡ ಚಿತ್ರರಂಗದಲ್ಲೂ ಬಹುತಾರಾ ಚಿತ್ರಗಳು ಬರಬೇಕು ಎಂಬ ಹಿರಿಯ ನಟಿ ಶ್ರೀಮತಿ ಬಿ. ಸರೋಜಾ ದೇವಿ ಅವರ ಸಲಹೆಯನ್ನು ಮುಕ್ತವಾಗಿ ಸ್ವೀಕರಿಸಿ, ಪಾಲಿಸುವುದಾಗಿ ಶಿವಣ್ಣ ಭರವಸೆ ನೀಡಿದರು. ಶಿವಣ್ಣ ಅವರು ಅತಿ ವೇಗದಲ್ಲಿ ವಾಹನವನ್ನು ಚಲಿಸುತ್ತಾರೆ ಎಂದು ನಟಿ ಸುಧಾರಾಣಿ ಹೇಳಿದ್ದಕ್ಕೆ, ವೇಗಕ್ಕೆ ಮಿತಿ ಇರಲಿ ಎಂಬ ಹಿರಿಯ ನಿರ್ದೇಶಕ ಶ್ರೀ ಎಸ್. ಕೆ. ಭಗವಾನ್ ಅವರ ಸಲಹೆಯನ್ನೂ ಶಿವಣ್ಣ ಸ್ವೀಕರಿಸಿದರು.

'ಆನಂದ'ದ ಜೀವನ

ಚಿತ್ರ ಬದುಕಿಗೆ ಪ್ರವೇಶಿಸಿದ ಮೊದಲ ದಿನದ ಮೊದಲ ಕ್ಷಣ ಭಯ ಮೂಡಿಸಿತ್ತಾದರೂ, ಆನಂದ್ ಎಂಬ ಹೆಸರು ಕೊಟ್ಟು 'ಆನಂದ್' ಚಿತ್ರವನ್ನು ನಿರ್ದೇಶಿಸಿದ ಸಿಂಗೀತಂ ಶ್ರೀನಿವಾಸರಾವ್ ಅವರ ಕೃಪೆಯಿಂದ ನಾನು 'ಆನಂದ'ವಾಗಿದ್ದೇನೆ. ಆ ಚಿತ್ರದ ಚಿತ್ರೀಕರಣ ನನಗೆ ಒಂದು ಪಿಕ್ ನಿಕ್ ಅನುಭವವನ್ನು ನೀಡಿತು ಎಂದು ತಿಳಿಸಿದ ಶಿವಣ್ಣ, ತಮ್ಮ ಮೊದಲ ಚಿತ್ರ 'ಆನಂದ್' ನ ನಾಯಕಿ ಸುಧಾರಾಣಿ ಅವರನ್ನು ಅತ್ಯುತ್ತಮ ನಟಿ ಎಂದು ಬಣ್ಣಿಸಿದರು.

ಮಗಳ ಮದುವೆ ಹೋಟೆಲ್ ನಲ್ಲಿ ಊಟ

ತಮ್ಮ ಮಗಳ ಮದುವೆಗೆ ಎಲ್ಲಾ ಅಭಿಮಾನಿಗಳಿಗೆ ಹೃದಯ ಪೂರ್ವಕವಾಗಿ ಆಮಂತ್ರಣ ನೀಡಿ ಮೂವತ್ತು ಸಾವಿರಕ್ಕೂ ಹೆಚ್ಚು ಮಂದಿಗೆ ಊಟ ಹಾಕಿದ್ದ ಶಿವಣ್ಣ ಆ ದಿನ ತಮಗೆ ಊಟ ದೊರೆಯದೆ, ಹೋಟೆಲ್ ಹೋಗಿ ಊಟ ಮಾಡಿದ್ದಾರೆ. ಏನೂ ಬೇಜಾರಿಲ್ಲ ಬಿಡಿ, ನನ್ನ ಮದುವೆಯ ಸಂದರ್ಭದಲ್ಲೂ ಅಪ್ಪಾಜಿಗೆ ಊಟ ದೊರೆತಿರಲಿಲ್ಲ ಎಂದರು ಶಿವಣ್ಣ. ಆ ಸಂದರ್ಭದಲ್ಲಿ ಚರಿತ್ರೆ ಪುನರಾವರ್ತನೆಗೊಂಡಿದೆ, ಎಂಬ ನಿರೂಪಕರ ಮಾತಿಗೆ ಶಿವಣ್ಣ ನಗು ನಗುತ್ತಲೇ ತಲೆದೂಗಿದರು.

    English summary
    Belli - Hejje program organized by Karnataka Chalana Chitra Academy on 30th November 5 pm in Ravindra Kalakshethra Bengaluru. Kannada Actor Shivaraj Kumar will be guest.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada