For Quick Alerts
  ALLOW NOTIFICATIONS  
  For Daily Alerts

  ರಾಜ್ ಕುಟುಂಬದ ಮನೆ ಮೂರಾದರೇನಾಯ್ತು, ಪ್ರೀತಿಗೆ ಒಂದೇ ಬಾಗಿಲು

  By Naveen
  |

  ಅಣ್ಣ ತಮ್ಮಂದಿರು ಹೇಗಿರಬೇಕು ಎಂದರೆ ಅಣ್ಣಾವ್ರ ಮಕ್ಕಳನ್ನು ತೋರಿಸಬೇಕು. ಅಣ್ಣ ತಮ್ಮ ಎನ್ನುವುದಕ್ಕಿಂತ ಹೆಚ್ಚಾಗಿ ರಾಜ್ ಮಕ್ಕಳು ಸ್ನೇಹಿತರಂತೆ ಇದ್ದಾರೆ. ಅದಕ್ಕೆ ತಾಜಾ ಉದಾಹರಣೆ ಅಂದರೆ 'ಗ್ರಾಮಾಯಣ' ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದ ವೇದಿಕೆ.

  ಅಣ್ಣ - ತಮ್ಮ ಎಂದ ಮೇಲೆ ಸಣ್ಣ ಪುಟ್ಟ ಮಾತುಗಳು ಬಂದು ಹೋಗುವುದು ಸಾಮಾನ್ಯ. ಆದರೆ, ಅಣ್ಣಾವ್ರ ಮಕ್ಕಳ ಮಧ್ಯೆಯೂ ಈ ರೀತಿ ಆಗಿತ್ತಾ? ಗೊತ್ತಿಲ್ಲ. ಆದರೆ, ಕೆಲವರು ಮಾತ್ರ ರಾಜ್ ಪುತ್ರರು ಯಾಕೆ ಬೇರೆ ಬೇರೆ ಮನೆಯಲ್ಲಿ ಇದ್ದಾರೆ ಎಂದು ಪದೇ ಪದೇ ಕೊಂಕು ತೆಗೆಯುತ್ತಾರೆ. ಒಂದೇ ಮಾತಿನಲ್ಲಿ ಹೇಳಬೇಕು ಅಂದರೆ, ಮನೆ ದೂರ ಇದ್ದರೂ ಅಣ್ಣಾವ್ರ ಮಕ್ಕಳ ಮನಸ್ಸು ಹತ್ತಿರದಲ್ಲಿ ಇದೆ.

  ಡಾ.ರಾಜ್ ಕುಟುಂಬವನ್ನ ಪರಿಚಯ ಮಾಡಿದ ಅಪರೂಪದ ವಿಡಿಯೋಡಾ.ರಾಜ್ ಕುಟುಂಬವನ್ನ ಪರಿಚಯ ಮಾಡಿದ ಅಪರೂಪದ ವಿಡಿಯೋ

  ಅಂದಹಾಗೆ, ಸದ್ಯ ತಮ್ಮ ಕುಟುಂಬದ ಬಗ್ಗೆ ಮಾತನಾಡಿರುವ ಶಿವಣ್ಣ ''ನಮ್ಮ‌ ಕುಟುಂಬದಲ್ಲೂ ಸಣ್ಣ ಪುಟ್ಟ ಮನಸ್ತಾಪ ಇದೆ. ಆದರೆ, ಯಾವತ್ತೂ ಬೇರೆ ಆಗಲ್ಲ'' ಎಂದಿದ್ದಾರೆ. ಮುಂದೆ ಓದಿ...

  'ಗ್ರಾಮಾಯಣ' ಚಿತ್ರದ ಕಾರ್ಯಕ್ರಮ

  'ಗ್ರಾಮಾಯಣ' ಚಿತ್ರದ ಕಾರ್ಯಕ್ರಮ

  'ಗ್ರಾಮಾಯಣ' ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಜ್ ಕುಮಾರ್ ನಟನೆಯ ನಾಲ್ಕನೇ ಸಿನಿಮಾ. ಈ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಇತ್ತೀಚಿಗಷ್ಟೆ ನಡೆಯಿತು. ಈ ಕಾರ್ಯಕ್ರಮಕ್ಕೆ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಮೂವರು ಆಗಮಿಸಿದ್ದರು. ಮೂವರನ್ನ ಒಂದೇ ವೇದಿಕೆಯಲ್ಲಿ ನೋಡುವುದೇ ಚಂದವಾಗಿತ್ತು.

  ನಾವು ಯಾವತ್ತೂ ಬೇರೆ ಆಗಲ್ಲ

  ನಾವು ಯಾವತ್ತೂ ಬೇರೆ ಆಗಲ್ಲ

  ಕಾರ್ಯಕ್ರಮದಲ್ಲಿ ತಮ್ಮ ಕುಟುಂಬದ ಬಗ್ಗೆ ಮಾತನಾಡಿದ ಶಿವರಾಜ್ ಕುಮಾರ್ ''ನಾನು ಅಪ್ಪು, ರಾಘು ಮೂರು ಜನ ಬೇರೆ ಬೇರೆ ಮನೆಯಲ್ಲಿದ್ದರೂ ನಮ್ಮ ಮನಸ್ಸು ಒಂದೇ. ನಮ್ಮಲ್ಲಿ ಏನೋ ಸಣ್ಣ ಪುಟ್ಟ ಮನಸ್ತಾಪ ಬಂದರೂ ಯಾವತ್ತೂ ಬೇರೆ ಆಗಲ್ಲ.'' ಎಂದಿದ್ದಾರೆ.

  ರಾಜ್ ಕುಮಾರ್ ಮಕ್ಕಳು ಯಾವತ್ತೂ ಒಂದೇ

  ರಾಜ್ ಕುಮಾರ್ ಮಕ್ಕಳು ಯಾವತ್ತೂ ಒಂದೇ

  ''ಸಮಾಜದಲ್ಲಿ ಇರುವಂತೆ ನಮ್ಮ‌ ಕುಟುಂಬದಲ್ಲೂ ಸಣ್ಣ ಪುಟ್ಟ ಮನಸ್ತಾಪ ಇದೆ. ಆದರೆ ನಾವು ಮೂರು ಜನ ಯಾವತ್ತು ಯಾವ ಆಸ್ತಿಗೂ ಆಸೆ ಪಟ್ಟವರಲ್ಲ. ರಾಜ್ ಕುಮಾರ್ ಮಕ್ಕಳು ಯಾವತ್ತೂ ಒಂದೇ.'' ಎಂದು ಅಣ್ಣ ತಮ್ಮಂದಿರ ಬಾಂದವ್ಯವನ್ನು ಇನ್ನು ಗಟ್ಟಿಕೊಳ್ಳಿಸಿದ್ದಾರೆ.

  ಎಲ್ಲ ಮಾತುಗಳಿಗೆ ತೆರೆ ಎಳೆದ ದೊಡ್ಮಗ

  ಎಲ್ಲ ಮಾತುಗಳಿಗೆ ತೆರೆ ಎಳೆದ ದೊಡ್ಮಗ

  ಅಣ್ಣಾವ್ರ ಮಕ್ಕಳು ಒಂದೇ ಮನೆಯಲ್ಲಿ ವಾಸವಾಗಿಲ್ಲ ಎಂಬ ಕಾರಣಕ್ಕೆ ಕೆಲವರು ರಾಜ್ ಮಕ್ಕಳ ನಡುವೆ ಮನಸ್ತಾಪ ಇದೆ ಎಂದು ಹೇಳಿಕೊಂಡು ಓಡಾಡುತ್ತಿದ್ದರು. ಆದರೆ, ಅಣ್ಣಾವ್ರ ದೊಡ್ಮಗ ಶಿವರಾಜ್ ಕುಮಾರ್ ಈ ಬಗ್ಗೆ ನೇರವಾಗಿ ಉತ್ತರ ನೀಡಿದ್ದಾರೆ.

  {document1}

  English summary
  Kannada actor Shivaraj Kumar clarify the rumors about his family.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X