»   » ದ್ವಿಪಾತ್ರದಲ್ಲಿ ಮಿಂಚಲಿರುವ 'ಬಾದ್ ಷಾ' ಶಿವಣ್ಣ

ದ್ವಿಪಾತ್ರದಲ್ಲಿ ಮಿಂಚಲಿರುವ 'ಬಾದ್ ಷಾ' ಶಿವಣ್ಣ

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ ಕುಮಾರ್ ಅವರು 'ಭಜರಂಗಿ', 'ಚಿಗುರಿದ ಕನಸು' ಸೇರಿದಂತೆ ಇನ್ನಿತರೇ ಸಿನಿಮಾಗಳಲ್ಲಿ ದ್ವಿಪಾತ್ರ ಮಾಡುವ ಮೂಲಕ ಅಭಿಮಾನಿಗಳ ಮನಗೆದ್ದಿದ್ದರು.

ಇದೀಗ 'ಬಾದ್ ಷಾ' ಚಿತ್ರದ ಸರದಿ. ಹೌದು ಶಿವಣ್ಣ ಅವರು ನಿರ್ದೇಶಕ ಆರ್.ಚಂದ್ರು ಅವರ ಹೊಸ ಪ್ರಾಜೆಕ್ಟ್ 'ಬಾದ್ ಷಾ' ಚಿತ್ರದಲ್ಲಿ ಡಬಲ್ ರೋಲ್ ಮಾಡುತ್ತಿದ್ದಾರೆ.[ಸ್ಯಾಂಡಲ್ ವುಡ್ ನ 'ಬಾದ್ ಷಾ' ಶಿವಣ್ಣ ಅವರಿಗೆ ಬಹುಪರಾಕ್]

Kannada actor Shivarajakumar plays a dual role in Badshah

ನಿರ್ಮಾಪಕ ಮೈಲಾರಪ್ಪ ನಿರ್ಮಾಣದಲ್ಲಿ ಮೂಡಿಬರುತ್ತಿರುವ 'ಬಾದ್ ಷಾ' ಸಿನಿಮಾದಲ್ಲಿ ಶಿವಣ್ಣ ಅವರು ದ್ವಿಪಾತ್ರ ಮಾಡುತ್ತಿದ್ದಾರೆ ಎಂಬುದನ್ನು ನಿರ್ದೇಶಕ ಆರ್.ಚಂದ್ರು ಅವರು ತಿಳಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಸೆಟ್ಟೇರಿದ್ದ ಈ ಸಿನಿಮಾ ಇದೀಗ ಮತ್ತೆ ಸುದ್ದಿಯಲ್ಲಿದೆ. ಈಗಾಗಲೇ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಸ್ಟುಡಿಯೋದಲ್ಲಿ ಚಿತ್ರದ ಹಾಡುಗಳ ರೆಕಾರ್ಡಿಂಗ್ ಕಾರ್ಯ ನಡೆಯುತ್ತಿದೆ. ಚಿತ್ರದ ಶೂಟಿಂಗ್ ಎಪ್ರಿಲ್ ತಿಂಗಳಿನಲ್ಲಿ ಆರಂಭವಾಗಲಿದೆ.[ಶಿವಣ್ಣ ಮಹತ್ವಾಕಾಂಕ್ಷಿ 'ಬಾದ್ ಷಾ'ಗೆ ಬಾಹುಬಲಿ ತಂಡ ]

Kannada actor Shivarajakumar plays a dual role in Badshah

ಅಂದಹಾಗೆ ಶಿವಣ್ಣ ಅವರ 'ಶಿವಲಿಂಗ' ಮತ್ತು 'ಕಿಲ್ಲಿಂಗ್ ವೀರಪ್ಪನ್' ಎಂಬ ಎರಡು ಚಿತ್ರಗಳು ಕಂಪ್ಲೀಟ್ ಆಗಿದ್ದು, ಬಿಡುಗಡೆಗೆ ತಯಾರಾಗಿವೆ. ಒಟ್ಟಿನಲ್ಲಿ ಕೈ ತುಂಬಾ ಕೆಲಸ ಹಿಡಿದು ಏಡಾಡುತ್ತಿರುವ ಶಿವಣ್ಣ ಅವರು ಈಗಲೂ ಇಪ್ಪತ್ತೈದರ ಹರೆಯದ ಯುವಕರನ್ನು ನಾಚಿಸುವಂತಹ ಉತ್ಸಾಹವನ್ನು ತುಂಬಿಕೊಂಡಿದ್ದಾರೆ.

English summary
Kannada actor Shivarajakumar has played double roles in many films including 'Bhajarangi', 'Chigurida Kanasu' and others. Now the actor is all set to do double roles in 'Badshah' to be directed by R Chandru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada