»   » ನಟ ಶಿವರಾಜ್ ಕುಮಾರ್ ಅಸ್ವಸ್ಥ: ಮಲ್ಯ ಆಸ್ಪತ್ರೆಗೆ ದಾಖಲು

ನಟ ಶಿವರಾಜ್ ಕುಮಾರ್ ಅಸ್ವಸ್ಥ: ಮಲ್ಯ ಆಸ್ಪತ್ರೆಗೆ ದಾಖಲು

Posted By:
Subscribe to Filmibeat Kannada

ನಟ ಶಿವರಾಜ್ ಕುಮಾರ್ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಅಣ್ಣಾವ್ರ ಮಗ ಶಿವಣ್ಣ ಅಸ್ವಸ್ಥಗೊಂಡಿದ್ದಾರೆ. ಬೆಂಗಳೂರಿನ ವಿಠಲ್ ಮಲ್ಯ ರಸ್ತೆಯಲ್ಲಿರುವ ಮಲ್ಯ ಆಸ್ಪತ್ರೆಗೆ ಅವರನ್ನ ದಾಖಲು ಮಾಡಲಾಗಿದೆ.

ನಟ ಶಿವರಾಜ್ ಕುಮಾರ್ ಗೆ ಏನಾಯ್ತು?
ಎಂದಿನಂತೆ ನಟ ಶಿವರಾಜ್ ಕುಮಾರ್ ಇಂದು ಬೆಳ್ಳಗ್ಗೆ ವ್ಯಾಯಾಮ ಮಾಡುವುದಕ್ಕೆ ಜಿಮ್ ಗೆ ತೆರಳಿದ್ದರು. ಕಸರತ್ತು ಮಾಡಿ ಬಂದ ನಂತರ ಶಿವಣ್ಣ ಸುಸ್ತಾಗಿದ್ದಾರೆ.[ಶಿವಣ್ಣನಿಗೆ ಹಾರ್ಟ್ ಅಟ್ಯಾಕ್.! ಮಲ್ಯ ವೈದ್ಯರು ಹೇಳಿದ್ದೇನು?]

Kannada Actor Shivarajkumar admitted to Mallya Hospital

ಬಲ ಭುಜ ಭಾಗದಲ್ಲಿ ನೋವು ಕಾಣಿಸಿಕೊಂಡ ಕೂಡಲೆ, ಪತ್ನಿ ಗೀತಾ ಶಿವರಾಜ್ ಕುಮಾರ್ ಹತ್ತಿರದಲ್ಲಿದ್ದ ಕೊಲಂಬಿಯಾ ಏಷ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ, ECGಯಲ್ಲಿ ಕೊಂಚ ಏರುಪೇರು ಕಂಡುಬಂದ ಕಾರಣ, ಅಲ್ಲಿಂದ ನೇರವಾಗಿ ಆಂಬ್ಯುಲೆನ್ಸ್ ಮೂಲಕ ಮಲ್ಯ ಆಸ್ಪತ್ರೆಗೆ ಶಿವಣ್ಣನನ್ನ ಕರೆದುಕೊಂಡು ಬರಲಾಗಿದೆ.[ಶಿವಣ್ಣನಿಗೆ ಲಘು ಹೃದಯಾಘಾತ : ಅಣ್ಣಾವ್ರ ಮಗನಿಗೆ ಶಸ್ತ್ರಚಿಕಿತ್ಸೆ?]

Kannada Actor Shivarajkumar admitted to Mallya Hospital

ಮಲ್ಯ ಆಸ್ಪತ್ರೆಗೆ ದಾಖಲಾಗಿರುವ ಶಿವಣ್ಣ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿವಣ್ಣ ಆರೋಗ್ಯವಾಗಿದ್ದಾರೆ. ಗಾಬರಿ ಪಡುವಂಥದ್ದೇನಿಲ್ಲ ಅಂತ ಕುಟುಂಬದ ಮೂಲಗಳು ತಿಳಿಸಿವೆ.

    English summary
    Due to severe pain in right shoulder, Kannada Actor Shivarajkumar has been admitted to Mallya Hospital, Bengaluru today (October 6th).

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada