For Quick Alerts
  ALLOW NOTIFICATIONS  
  For Daily Alerts

  Sri Murali : 'ಬಘೀರ' ಶೂಟಿಂಗ್ ವೇಳೆ ಶ್ರೀಮುರಳಿಗೆ ಪೆಟ್ಟು: ಆಸ್ಪತ್ರೆಗೆ ದಾಖಲು!

  |

  ರೋರಿಂಗ್ ಸ್ಟಾರ್ ಶ್ರೀ ಮುರಳಿ 'ಬಘೀರ' ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರು. ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುತ್ತಿರುವ ಈ ಸಿನಿಮಾವನ್ನು ಲಕ್ಕಿ ಸಿನಿಮಾದ ನಿರ್ದೇಶಕ ಡಾ. ಸೂರಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದೇ ಸಿನಿಮಾದ ಶೂಟಿಂಗ್ ವೇಳೆ ಶ್ರೀ ಮುರಳಿಗೆ ಪೆಟ್ಟಾಗಿದೆ ಎಂದು ವರದಿಯಾಗಿದೆ.

  ರಾಕ್‌ಲೈನ್‌ ಸ್ಟುಡಿಯೋದಲ್ಲಿ 'ಬಘೀರ' ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ ಶ್ರೀ ಮುರಳಿ ಬಿದ್ದು ಮೊಣಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

  'ಬಘೀರ' ಸಿನಿಮಾದ ಕೊನೆಯ ಹಂತದ ಶೂಟಿಂಗ್ ನಡೆಯುತ್ತಿತ್ತು. ಇನ್ನು ಎರಡು ದಿನ ಶೂಟಿಂಗ್ ನಡೆದಿದ್ದರೆ, ಇಡೀ ಸಿನಿಮಾದ ಶೂಟಿಂಗ್ ಮುಗಿದೇ ಹೋಗಿತ್ತಿತ್ತು. ಅಷ್ಟರಲ್ಲೇ ಈ ಅನಾಹುತ ನಡೆದಿದೆ ಎನ್ನಲಾಗುತ್ತಿದೆ.

  ಶ್ರೀಮುರಳಿ ಮೊಣಕಾಲಿಗೆ ಪಟ್ಟು

  ಶ್ರೀಮುರಳಿ ಮೊಣಕಾಲಿಗೆ ಪಟ್ಟು

  ಶ್ರೀ ಮುರಳಿ 'ಮದಗಜ' ಸಿನಿಮಾ ಶೂಟಿಂಗ್ ಮಾಡುವಾಗಲೇ ಹೀಗೆ ಎಡಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು. ಈಗ ಅದೇ ಕಾಲಿಗೆ ಮತ್ತೆ ಪೆಟ್ಟುಬಿದ್ದಿರೋದು ಆತಂಕ ಮೂಡಿಸಿದೆ ಎಂದು ಹೇಳಲಾಗುತ್ತಿದೆ. ಶ್ರೀ ಮುರಳಿ ಗಾಯದ ಗಂಭೀರತೆ ಹಾಗೂ ಆರೋಗ್ಯದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಹೊರಬೀಳಬೇಕಿದೆ.

  'ಮದಗಜ' ಶೂಟಿಂಗ್ ವೇಳೆನೂ ಪೆಟ್ಟು

  'ಮದಗಜ' ಶೂಟಿಂಗ್ ವೇಳೆನೂ ಪೆಟ್ಟು

  ರೋರಿಂಗ್ ಸ್ಟಾರ್ ಶ್ರೀಮುರಳಿ ಹಿಂದಿನ 'ಮದಗಜ' ವೇಳೆನೂ ಪೆಟ್ಟಾಗಿತ್ತು. ಮಹೇಶ್ ಕುಮಾರ್ ನಿರ್ದೇಶನದ ಈ ಸಿನಿಮಾದ ಆಕ್ಷನ್ ಸೀಕ್ವೆನ್ಸ್ ವೇಳೆ ಲಾಂಡಿಂಗ್ ಆಗುವಾಗ ಮೊಣಕಾಲಿಗೆ ಪೆಟ್ಟಾಗಿತ್ತು. ಆಗ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಲಿಗಮೆಂಟ್ ಟಿಯರ್ ಆಗಿರುವ ಬಗ್ಗೆ ಮಾಹಿತಿ ಹೊರಬಿದ್ದಿತ್ತು. ಸುಮಾರು ಮೂರು ತಿಂಗಳ ಕಾಲ ಶ್ರೀಮುರಳಿ ವಿಶ್ರಾಂತಿ ಪಡೆಯಬೇಕಾಗಿತ್ತು.

  ವೈದ್ಯರಿಂದ ಶಸ್ತ್ರ ಚಿಕಿತ್ಸೆ ಸಲಹೆ

  ವೈದ್ಯರಿಂದ ಶಸ್ತ್ರ ಚಿಕಿತ್ಸೆ ಸಲಹೆ

  'ಮದಗಜ' ಚಿತ್ರೀಕರಣದ ವೇಳೆ ಪೆಟ್ಟಾದಾಗಲೇ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವಂತೆ ಸೂಚನೆ ನೀಡಿದ್ದರು. ಆದರೆ, ಶ್ರೀಮುರಳಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ಹಿಂದೇಟು ಹಾಕಿದ್ದರು ಎನ್ನಲಾಗಿದೆ. ಹೀಗಾಗಿ ಆಕ್ಷನ್ ಸೀಕ್ವೆನ್ಸ್ ಶೂಟಿಂಗ್ ಅನ್ನು ಬೇರೆಯದ್ದೇ ರೀತಿಯಲ್ಲಿ ಶೂಟಿಂಗ್ ಮಾಡಲು ಚಿತ್ರತಂಡ ಮುಂದಾಗಿತ್ತು ಅನ್ನೋ ಸುದ್ದಿನೂ ಓಡಾಡಿತ್ತು. ಈಗ ಮತ್ತೆ ಅದೇ ಕಾಲಿಗೆ ಪೆಟ್ಟಾಗಿದೆ.

  ಮುಂದಿನ ಸಿನಿಮಾ 'ಬಘೀರ'

  ಮುಂದಿನ ಸಿನಿಮಾ 'ಬಘೀರ'

  ಕಳೆದ ವರ್ಷ 'ಕೆಜಿಎಫ್' , 'ಕಾಂತಾರ'ದಂತಹ ಮೆಗಾ ಸಿನಿಮಾಗಳನ್ನು ನೀಡಿದ್ದ ಹೊಂಬಾಳೆ ಫಿಲ್ಮ್ಸ್ 'ಬಘೀರ' ಸಿನಿಮಾವನ್ನು ನಿರ್ಮಿಸುತ್ತಿದೆ. ಡಾ. ಸೂರಿ ಬಹಳ ದಿನಗಳ ಬಳಿಕ ಮತ್ತೆ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಜೊತೆಗೆ ಪ್ರಶಾಂತ್ ನೀಲ್ ಕಥೆ ಬರೆದಿರೋದ್ರಿಂದ ಶ್ರೀಮುರಳಿಯ 'ಬಘೀರ' ಮೇಲೆ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಸದ್ಯ ಶ್ರೀಮುರಳಿಗೆ ಆಗಿರುವ ಗಂಭೀರ ಗಾಯದ ಮೇಲೆ ಮತ್ತೆ ಶೂಟಿಂಗ್ ಯಾವಾಗ ಅನ್ನೋದನ್ನು ನಿರ್ಧರಿಸುವ ಸಾಧ್ಯತೆಯಿದೆ.

  English summary
  Kannada Actor Sri Murali Injured While Shooting Bagheera he is hospitalized, Know More.
  Thursday, January 12, 2023, 20:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X