»   » ನಟ ಶ್ರೀಮುರಳಿ ಸ್ವಾರ್ಥಿ ಅಲ್ಲ.! ಯಾಕೆ ಗೊತ್ತಾ?

ನಟ ಶ್ರೀಮುರಳಿ ಸ್ವಾರ್ಥಿ ಅಲ್ಲ.! ಯಾಕೆ ಗೊತ್ತಾ?

Posted By:
Subscribe to Filmibeat Kannada

ವೃತ್ತಿ ಬದುಕಿನಲ್ಲಿ ಏಳು-ಬೀಳುಗಳನ್ನ ಕಂಡು ಎರಡನ್ನೂ ಸಮನಾಗಿ ಸ್ವೀಕರಿಸಿರುವ ನಟ ರೋರಿಂಗ್ ಸ್ಟಾರ್ ಶ್ರೀಮುರಳಿ. ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ, ನಾನು 'ಸ್ಟಾರ್' ಅಂತ ಮೆರೆಯದೆ ಇರುವ ನಟ ಶ್ರೀಮುರಳಿ ಕಂಡ್ರೆ ಎಲ್ಲರಿಗೂ ಅಚ್ಚುಮೆಚ್ಚು.

ನಟ ಶ್ರೀಮುರಳಿ ಒಳ್ಳೆಯತನದ ಬಗ್ಗೆ ನಾವೀಗ ಹೇಳುತ್ತಿರುವುದಕ್ಕೆ ಕಾರಣ ಕಳೆದ ಮೂರು ದಿನಗಳಿಂದ ಫೇಸ್ ಬುಕ್ ನಲ್ಲಿ ನಡೆಯುತ್ತಿರುವ ಚರ್ಚೆ.


ಎಲ್ಲರಿಗೂ ಗೊತ್ತಿರುವ ಹಾಗೆ, ರೋರಿಂಗ್ ಸ್ಟಾರ್ ಶ್ರೀಮುರಳಿ ನಟಿಸಿರುವ 'ರಥಾವರ' ಸಿನಿಮಾ ಡಿಸೆಂಬರ್ 4 ರಂದು ಬಿಡುಗಡೆ ಆಗುತ್ತಿದೆ. ಗಾಂಧಿನಗರದಲ್ಲಿ ಹಬ್ಬಿರುವ ಸುದ್ದಿ ಪ್ರಕಾರ, ಶಿವರಾಜ್ ಕುಮಾರ್ ಅಭಿನಯದ 'ಶಿವಲಿಂಗು' ಅಥವಾ 'ಕಿಲ್ಲಿಂಗ್ ವೀರಪ್ಪನ್' ಅಂದೇ ರಿಲೀಸ್ ಆಗುವ ಸಾಧ್ಯತೆ ಇದೆ.


Kannada Actor Sriimurali's selflessness is widely appreciated

ಎರಡು ಬಹು ನಿರೀಕ್ಷಿತ ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗುತ್ತಿರುವ ಕಾರಣ, ಯಾವ ಚಿತ್ರವನ್ನ ಮೊದಲು ನೋಡ್ಬೇಕು ಅನ್ನೋ ಕನ್ ಫ್ಯೂಶನ್ ನಲ್ಲಿದ್ದಾರೆ ಕನ್ನಡ ಸಿನಿ ಪ್ರಿಯರು. [ಮಿಸ್ ಮಾಡ್ಬೇಡಿ: 'ರಥಾವರ' ಟ್ರೈಲರ್ ನ 10 ಕುತೂಹಲ ದೃಶ್ಯಗಳು]


ಇದೇ ಕನ್ ಫ್ಯೂಶನ್ ನಲ್ಲಿ ಕನ್ನಡ ಸಿನಿ ಪ್ರಿಯರೊಬ್ಬರು, ''ಅಣ್ಣ, ಶಿವಣ್ಣ ಮೂವಿನೂ ಅವತ್ತೆ. ಏನ್ ಮಾಡೋದು ಗೊತ್ತಾಗ್ತಾ ಇಲ್ಲ'' ಅಂತ ಫೇಸ್ ಬುಕ್ ನಲ್ಲಿ ಶ್ರೀಮುರಳಿಯನ್ನ ಕೇಳಿದ್ರು.


Kannada Actor Sriimurali's selflessness is widely appreciated

ಈ ಪ್ರಶ್ನೆಗೆ ಯಾರೇ ಆಗಿದ್ದರೂ, ''ಎರಡನ್ನೂ ನೋಡಿ'' ಅಂತ್ಹೇಳಿ ಜಾಣತನದ ಉತ್ತರ ನೀಡಿ ಜಾರಿಕೊಳ್ತಿದ್ರು. ಇಲ್ಲಾಂದ್ರೆ ರಿಪ್ಲೈ ಮಾಡುವ ಗೋಜಿಗೂ ಹೋಗ್ತಿರ್ಲಿಲ್ಲ. ಆದ್ರೆ, ಶ್ರೀಮುರಳಿ ಹಾಗೆ ಮಾಡ್ಲಿಲ್ಲ. ''ಮೊದಲು ಶಿವಣ್ಣ ಸಿನಿಮಾ ನೋಡಿ. ಆಮೇಲೆ ರಥಾವರ ನೋಡು ಚಿನ್ನ'' ಅಂತ್ಹೇಳಿ ಎಲ್ಲರ ಮನಗೆದ್ದಿದ್ದಾರೆ.


ಶ್ರೀಮುರಳಿಯ ಈ ನಿಸ್ವಾರ್ಥ ಮನೋಭಾವಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರೂ ಉಘೇ ಉಘೇ ಎನ್ನುತ್ತಿದ್ದಾರೆ. ಅಂದ್ಹಾಗೆ, ಡಿಸೆಂಬರ್ 4 ರಂದು ನೀವು 'ರಥಾವರ' ಸಿನಿಮಾ ನೋಡ್ತೀರಾ..?

English summary
Kannada Actor Sriimurali's selflessness is receiving appreciation in Social Networking Sites. Read the article to know more about Sriimurali's selflessness.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada