For Quick Alerts
  ALLOW NOTIFICATIONS  
  For Daily Alerts

  'ಟಾಕಿಂಗ್ ಸ್ಟಾರ್' ಬರ್ತ್ ಡೇಗೆ 'ಚಾಲೆಂಜಿಂಗ್ ಸ್ಟಾರ್' ಸ್ಪೆಷಲ್ ಗೆಸ್ಟ್

  By Suneetha
  |

  'ಮಜಾ ಟಾಕೀಸ್' ಮೂಲಕ ಗಾಂಧಿನಗರದಲ್ಲಿ ಮತ್ತಷ್ಡು ಫೇಮಸ್ ಆದ ನಟ ಕಮ್ ನಿರೂಪಕ ಸೃಜನ್ ಲೋಕೇಶ್ ಅವರಿಗೆ ಇಂದು (ಜೂನ್ 28) ಹುಟ್ಟುಹಬ್ಬದ ಸಂಭ್ರಮ. ಸಾಮಾನ್ಯವಾಗಿ ಹುಟ್ಟುಹಬ್ಬ ಅಂದಮೇಲೆ ಸಾಮಾನ್ಯವಾಗಿ ಎಲ್ಲರಿಗೂ ಖುಷಿ-ಸಂಭ್ರಮ ಇದ್ದೇ ಇರುತ್ತೆ.

  ಆದರೆ ಈ ಬಾರಿ ಸೃಜನ್ ಲೋಕೇಶ್ ಅವರಿಗೆ ವಿಶೇಷ ಹುಟ್ಟುಹಬ್ಬ ಆಗಲು ಕಾರಣ ಏನಪ್ಪಾ ಅಂದ್ರೆ ಅವರ ಹೊಸ ಚಿತ್ರ 'ಗೋಲ್ ಮಾಲ್ ಬ್ರದರ್ಸ್' ಇಂದು ಮುಹೂರ್ತ ನೆರವೇರಿಸಿಕೊಂಡು ಸೆಟ್ಟೇರುತ್ತಿದೆ.[ಚಾಲೆಂಜಿಂಗ್ ಸ್ಟಾರ್ ಗಜ ಮತ್ತು ಟಾಕಿಂಗ್ ಸ್ಟಾರ್ ಸುಜ!]

  ಮುಹೂರ್ತ ಸಮಾರಂಭದಲ್ಲಿ ಕ್ಲ್ಯಾಪ್ ಮಾಡಲು ಸೃಜನ್ ಲೋಕೇಶ್ ಅವರ ಚಡ್ಡಿ ದೋಸ್ತ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಆಗಮಿಸುತ್ತಿದ್ದಾರೆ ಅನ್ನೋದು ಸೃಜನ್ ಅವರಿಗೆ ಡಬಲ್ ಖುಷಿ.

  ಇಂದು (ಜೂನ್ 28) ಕಂಠೀರವ ಸ್ಟುಡಿಯೋ ಬೆಂಗಳೂರಿನಲ್ಲಿ ಬೆಳಗ್ಗೆ 11 ಕ್ಕೆ ಚಿತ್ರಕ್ಕೆ ಮುಹೂರ್ತ ನೆರವೇರಲಿದೆ. ಈ ಮೂಲಕ 'ಗೋಲ್ ಮಾಲ್ ಬ್ರದರ್ಸ್' ಚಿತ್ರತಂಡದವರು ಸೃಜಾ ಅವರ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ ನೀಡುತ್ತಿದ್ದಾರೆ.['ಜಗ್ಗುದಾದಾ' ಚಿತ್ರಕ್ಕೆ ಹೀರೋ ಯಾರು ದರ್ಶನ್/ಸೃಜನ್ ಲೋಕೇಶ್?]

  ದೇವರಾಜ್ ಕುಮಾರ್ ಎಂಬುವವರು ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದು, ನಿರ್ಮಾಪಕರಾದ ಗೋವಿಂದರಾಜು ಎಸ್, ಪರಮೇಶ್, ಮತ್ತು ರಾಮು ಬಂಡವಾಳ ಹೂಡುತ್ತಿದ್ದಾರೆ.

  ಚಿತ್ರದಲ್ಲಿ ನಟ ಸೃಜನ್ ಲೋಕೇಶ್, ಕಾಮಿಡಿ ನಟ ಚಿಕ್ಕಣ್ಣ ಮತ್ತು ತುಳು ಸಿನಿಮಾಗಳಲ್ಲಿ ಮಿಂಚಿದ್ದ ಆರ್.ಜೆ ರೂಪೇಶ್ ಶೆಟ್ಟಿ ಅವರು ಮುಖ್ಯ ಭೂಮಿಕೆಯಲ್ಲಿ ಮಿಂಚುತ್ತಿದ್ದಾರೆ. ನಾಯಕಿಯರಾಗಿ ಭಾನು, ನಿಖಿತಾ ನಾರಾಯಣ್ ಮತ್ತು ಚಿರಶ್ರೀ ಅವರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

  ಪಕ್ಕಾ ಕಾಮಿಡಿ ಸಿನಿಮಾ ಆಗಿರುವ 'ಗೋಲ್ ಮಾಲ್ ಬ್ರದರ್ಸ್' ಚಿತ್ರದ ಶೂಟಿಂಗ್ ಸುಮಾರು 45 ದಿನಗಳ ಕಾಲ ನಡೆಯಲಿದ್ದು, ಬೆಂಗಳೂರು ಸುತ್ತ-ಮುತ್ತ ಮತ್ತು ಊಟಿಯಲ್ಲಿ ಶೂಟಿಂಗ್ ಜರುಗಲಿದೆ.

  English summary
  Kannada Actor Srujan Lokesh Celebrated his Birthday today (June 28th). Kannada Movie 'Golmaal Brothers' team is are unturned to make Srujan Lokesh's birthday special. They're launching the film on the day. Srujan's close friend Actor Darshan will be the chief guest at the film's muhurat at Kanteerava Studio.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X