»   » ಕಿಚ್ಚನಿಗೆ 'ಕೋಟಿಗೊಬ್ಬ 2' ತಂಡದಿಂದ ಅಚ್ಚರಿಯ ಗಿಫ್ಟ್

ಕಿಚ್ಚನಿಗೆ 'ಕೋಟಿಗೊಬ್ಬ 2' ತಂಡದಿಂದ ಅಚ್ಚರಿಯ ಗಿಫ್ಟ್

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಅಭಿನವ ಚಕ್ರವರ್ತಿ ಕಿಚ್ಷ ಸುದೀಪ್ ಅವರ ಹೊಸ 'ಕೋಟಿಗೊಬ್ಬ 2' ಚಿತ್ರದ ಶೂಟಿಂಗ್ ಸ್ಪಾಟ್ ನಲ್ಲಿ ಅವರಿಗೊಂದು ಸರ್ ಪ್ರೈಜ್ ಕಾದಿತ್ತು.

ಅದೇನಪ್ಪಾ ಅಂದ್ರೆ ಸೆಪ್ಟೆಂಬರ್ 2 ರಂದು ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್ ಅವರು ತಮ್ಮ 42ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ನಿರ್ದೇಶಕ ಕೆ.ಎಸ್ ರವಿಕುಮಾರ್ ಹಾಗೂ ಇಡೀ ಚಿತ್ರತಂಡ ಸೆಟ್ ನಲ್ಲಿಯೇ ಎರಡು ದಿನ ಮುಂಚಿತವಾಗಿ ಆದಿತ್ಯವಾರ(ಆಗಸ್ಟ್ 30) ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬವನ್ನು ಆಚರಿಸಿ ಸಂತಸ ಹಂಚಿಕೊಂಡರು.

Kannada Actor Sudeep Celebrates His Birthday on 'Kotigobba 2' set

ಬರ್ತ್ ಡೇ ಕೇಕ್ ನಲ್ಲಿ 'ಹ್ಯಾಪಿ ಬರ್ತ್ ಡೇ ಕಿಚ್ಚ ಸುದೀಪ್ ಪ್ರೊಡಕ್ಷನ್ ನಂ 4' ಅಂತ ಹೆಸರು ಬರೆಯಲಾಗಿತ್ತು.

ಇನ್ನೂ 'ಕೋಟಿಗೊಬ್ಬ 2' ಚಿತ್ರದ ಶೂಟಿಂಗ್ ಭರ್ಜರಿಯಾಗಿ ಸಾಗುತ್ತಿದ್ದು, ಕಿಚ್ಚ ಸುದೀಪ್ ಅವರ ಹುಟ್ಟುಹಬ್ದ (ಆಗಸ್ಟ್ 2) ದಂದು ಚಿತ್ರದ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.[ಶಿವಣ್ಣನ ಮಗಳ ಮದುವೆಗೆ ಬಂದು ಆಶೀರ್ವದಿಸಿದ ಕಿಚ್ಚ]

ಈ ವಾರ ಆರಂಭಗೊಳ್ಳಲಿರುವ ಕರ್ನಾಟಕ ಕ್ರಿಕೆಟ್ ಲೀಗ್ ನಲ್ಲಿ ಕಿಚ್ಚ ಸುದೀಪ್ ಬ್ಯುಸಿಯಾಗುವುದರಿಂದ ಸದ್ಯಕ್ಕೆ 'ಕೋಟಿಗೊಬ್ಬ 2' ಚಿತ್ರದ ಶೂಟಿಂಗ್ ಅರ್ಧಕ್ಕೆ ನಿಲ್ಲಿಸಲಾಗಿದೆ.

'ಕೋಟಿಗೊಬ್ಬ 2' ಚಿತ್ರದ ಶೂಟಿಂಗ್ ಸೆಟ್ ನಲ್ಲಿ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬ ಆಚರಿಸಿದ ಸಂದರ್ಭದಲ್ಲಿ ಚಿತ್ರದ ನಾಯಕಿ ಬಹುಭಾಷಾ ತಾರೆ ನಿತ್ಯಾ ಮೆನನ್ ಹಾಜರಿದ್ದರು.

ಕಿಚ್ಚ ಸುದೀಪ್ ಅಭಿನಯದ ಈ ಚಿತ್ರ ಕನ್ನಡ ಹಾಗೂ ತಮಿಳು ಭಾಷೆಗಳಲ್ಲಿ ತೆರೆ ಕಾಣುತ್ತಿದ್ದು, ಚಿತ್ರಕ್ಕೆ ಕೆ.ಎಸ್ ರವಿಕುಮಾರ್ ಆಕ್ಷನ್-ಕಟ್ ಹೇಳುತ್ತಿದ್ದಾರೆ. ಈಗಾಗಲೇ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅದ್ದೂರಿ ಸೆಟ್ ಹಾಕಿ ಚಿತ್ರದ ಶೂಟಿಂಗ್ ಮಾಡಲಾಗುತ್ತಿದೆ.

ಒಟ್ನಲ್ಲಿ 'ರನ್ನ' ಚಿತ್ರ 50 ದಿನಗಳ ಸಂಭ್ರಮ ಆಚರಿಸಿಕೊಂಡ ನಂತರ ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಮತ್ತೊಮ್ಮೆ ತೆರೆಯ ಮೇಲೆ 'ಕೋಟಿಗೊಬ್ಬ 2' ಎನ್ನುವ ಚಿತ್ರದ ಮೂಲಕ ತೆರೆ ಮೇಲೆ ಭರ್ಜರಿ ಎಂಟ್ರಿ ಕೊಡುವ ಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದಾರೆ.

English summary
On Sunday there was surprise on the set of Sudeep's new film 'Kotigobba 2' . The actor's birthday was celebrated by the team. The shooting schedule was packed up on Saturday and therefore the team decided to celebrate Sudeep's birthday on Sunday night itself. Sudeep.'s birthday is on September 2. 'Kotigobba 2' movie is directed by K.S Ravikumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada