»   » 'ಪುಲಿ' ಡಬ್ಬಿಂಗ್ ಮುಗಿಸಿದ ಅಭಿನಯ ಚಕ್ರವರ್ತಿ

'ಪುಲಿ' ಡಬ್ಬಿಂಗ್ ಮುಗಿಸಿದ ಅಭಿನಯ ಚಕ್ರವರ್ತಿ

By: ಸೋನು ಗೌಡ
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಎಲ್ಲರಿಗೂ ಇಷ್ಟವಾಗುವಂತೆ ನಡೆದುಕೊಳ್ಳುವ, ಹಾಗೂ ತಮ್ಮ ವೃತ್ತಿಯನ್ನು ಗೌರವಿಸುವ ನಟನೆಂದರೆ ಅದು ಕಿಚ್ಚ ಸುದೀಪ್ ಅಂತಾ ಹೇಳಿದರೂ ತಪ್ಪಾಗ್ಲಿಕ್ಕಿಲ್ಲ.

ಯಾಕೆಂದರೆ ಎಷ್ಟೇ ತಮ್ಮ ವೈಯಕ್ತಿಕ ಸಮಸ್ಯೆ ಇದ್ದರೂ ಕೂಡ ತಮ್ಮ ವೃತ್ತಿಯನ್ನು ಪ್ರೀತಿಸಿ ಅದರ ಕರೆಗೆ ಓಗೊಟ್ಟ 'ಅಭಿನಯ ಚಕ್ರವರ್ತಿ' ಕಿಚ್ಚ ಸುದೀಪ್ ಅವರು ಈ ವರ್ಷದ ಬಹುನಿರೀಕ್ಷಿತ ತಮಿಳು 'ಪುಲಿ' ಚಿತ್ರದ ಡಬ್ಬಿಂಗ್ ಕಾರ್ಯವನ್ನು ಮುಗಿಸಿಕೊಟ್ಟಿದ್ದಾರೆ. [ಟ್ವಿಟ್ಟರ್ ನಲ್ಲಿ ಮನದಾಳ ಬಿಚ್ಚಿಟ್ಟ ಕಿಚ್ಚ ಸುದೀಪ್.!]

Kannada Actor Sudeep dubbing for Tamil movie 'Puli' in Bengaluru

ತಮಿಳು ನಟ ಇಳೆಯದಳಪತಿ ವಿಜಯ್ ಹಾಗೂ ನಮ್ಮ ಕನ್ನಡದ 'ಮಾಣಿಕ್ಯ' ಕಿಚ್ಚ ಸುದೀಪ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ 'ಪುಲಿ' ಚಿತ್ರಕ್ಕೆ ನಿರ್ದೇಶಕ ಚೆಂಬು ದೇವನ್ ಆಕ್ಷನ್-ಕಟ್ ಹೇಳಿದ್ದಾರೆ.[14 ವರ್ಷದ ಸುದೀಪ್ ದಾಂಪತ್ಯ ಜೀವನದಲ್ಲಿ ಬಿರುಗಾಳಿ: ಡೈವೋರ್ಸ್!]

ಅಕ್ಟೋಬರ್ 1 ರಂದು ಭರ್ಜರಿಯಾಗಿ ತೆರೆ ಕಾಣುತ್ತಿರುವ 'ಪುಲಿ' ಚಿತ್ರದಲ್ಲಿ ತಾವು ಮಾಡುತ್ತಿರುವ ಪಾತ್ರದ ಭಾಗದ ಡಬ್ಬಿಂಗ್ ಕಾರ್ಯವನ್ನು ಬೆಂಗಳೂರಿನ 'ಕರಿಸುಬ್ಬು ಅವರ ಬಾಲಾಜಿ ಡಿ ಜಿ ಸ್ಟುಡಿಯೋದಲ್ಲಿ ಯಶಸ್ವಿಯಾಗಿ ಮುಗಿಸಿರುವುದಾಗಿ ನಟ ಕಿಚ್ಚ ಸುದೀಪ್ ಅವರು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಎಸ್ ಎಸ್ ರಾಜಮೌಳಿ ನಿರ್ದೇಶನದ ಬ್ಲಾಕ್ ಬಸ್ಟರ್ ತೆಲುಗು ಚಿತ್ರ 'ಈಗ' ದ ನಂತರ ಮತ್ತೊಮ್ಮೆ ಕಿಚ್ಚ ಸುದೀಪ್ ಅವರು ಅದ್ದೂರಿ ಮೇಕಿಂಗ್ ಹಾಗೂ ಬಿಗ್ ಬಜೆಟ್ ನ ತಮಿಳು ಚಿತ್ರದಲ್ಲಿ ಕಾಣಿಸಿಕೊಂಡು, ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಹುಟ್ಟು ಹಾಕಿದ್ದಾರೆ.

ಸದ್ಯಕ್ಕೆ ಕರ್ನಾಟಕ ಕ್ರಿಕೆಟ್ ಪ್ರೀಮಿಯರ್ ಲೀಗ್ ನಿಂದ ಕೊಂಚ ಬಿಡುವು ಮಾಡಿಕೊಂಡು 'ಪುಲಿ' ಚಿತ್ರದ ಡಬ್ಬಿಂಗ್ ಕಾರ್ಯ ಮುಗಿಸಿ ತಮಗೆ ವೃತ್ತಿಯ ಮೇಲಿರುವ ಗೌರವ ಪ್ರೀತಿಯನ್ನು ತೋರಿಸಿಕೊಟ್ಟಿದ್ದಾರೆ.[ಕಿಚ್ಚನ ದಾಂಪತ್ಯದಲ್ಲಿ ಕಿಚ್ಚು : ಸುದೀಪ್ ಹೇಳಿದ್ದೇನು?]

ಮೂಲಗಳ ಪ್ರಕಾರ ನಮ್ಮ 'ನಲ್ಲ' ಕಿಚ್ಚ ಸುದೀಪ್ ಅವರಿಗೆ ತಮಿಳಿನ 'ಪುಲಿ' ಚಿತ್ರದಲ್ಲಿ ಮುಖ್ಯ ಪಾತ್ರವಿದೆ. 'ಈಗ' ಚಿತ್ರದ ಮೂಲಕ ತೆಲುಗು ಅಭಿಮಾನಿಗಳ ಮನಗೆದ್ದಂತೆ, ಇದೀಗ 'ಪುಲಿ' ಮೂಲಕ ತಮಿಳರ ಮನಗೆಲ್ಲಲು ಹೊರಟಿರುವ ಅಭಿನಯ ಚಕ್ರವರ್ತಿ ಅವರಿಗೆ ಆಲ್ ದ ಬೆಸ್ಟ್ ಹೇಳೋಣ ನೀವೇನಂತೀರಾ?.

ಚಿತ್ರದಲ್ಲಿ ಇನ್ನುಳಿದಂತೆ ಇಳೆಯದಳಪತಿ ವಿಜಯ್, ಸುದೀಪ್, ಬಾಲಿವುಡ್ ಬೆಡಗಿ ಶ್ರೀದೇವಿ, ಹನ್ಸಿಕಾ ಮೋಟ್ವಾನಿ, ಗ್ಲಾಮರ್ ಬೊಂಬೆ ಶ್ರುತಿ ಹಾಸನ್ ಸೇರಿದಂತೆ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇರುವುದರಿಂದ ಸಹಜವಾಗಿಯೇ 'ಪುಲಿ' ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಸೃಷ್ಟಿಸುತ್ತಿದೆ.

English summary
Tamil film Puli's release on October 1, Kiccha Sudeep is spending every available minute dubbing for his role. The dubbing is taking place in Karisubbu's Balaji DG Studio in Bengaluru itself. 'Puli' features Kannada Actor Sudeep, Tamil Actor Vijay, Hindi Actress Sridevi, Actress Shruti Haasan, Actress Hansika Motwani in the lead role. The movie is directed by Chimbu Deven.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada