»   » 8 ಲಕ್ಷ ಫಾಲೋವರ್ಸ್ ಹೊಂದಿರುವ ಸುದೀಪ್ ಫಾಲೋ ಮಾಡೋದು 26 ಜನರನ್ನ ಮಾತ್ರ.!

8 ಲಕ್ಷ ಫಾಲೋವರ್ಸ್ ಹೊಂದಿರುವ ಸುದೀಪ್ ಫಾಲೋ ಮಾಡೋದು 26 ಜನರನ್ನ ಮಾತ್ರ.!

Posted By:
Subscribe to Filmibeat Kannada

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಮ್ಮ ಟ್ವಿಟ್ಟರ್ ನಲ್ಲಿ 8 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ. ಈ ಮೂಲಕ ಟ್ವಿಟ್ಟರ್ ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಕನ್ನಡದ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನ್ನಡ, ತಮಿಳು, ತೆಲುಗು, ಹಿಂದಿ ಚಿತ್ರರಂಗದ ಸಿನಿಮಾ ತಾರೆಯರು, ನಿರ್ದೇಶಕರು ಕೂಡ ಇರುವುದು ಖುಷಿಯ ವಿಚಾರ. ಸುದೀಪ್ ಅವರನ್ನ 8 ಲಕ್ಷ ಜನ ಅನುಕರಣೆ ಮಾಡುತ್ತಿದ್ದಾರೆ ನಿಜ. ಆದ್ರೆ, ಸುದೀಪ್ ಎಷ್ಟು ಜನರನ್ನ ಫಾಲೋ ಮಾಡ್ತಿದ್ದಾರೆ?

ಹೌದು, ಸುದೀಪ್ ಫಾಲೋ ಮಾಡುತ್ತಿರುವುದು ಕೇವಲ 26 ಜನರನ್ನ ಮಾತ್ರ. ಹಾಗಿದ್ರೆ, ಆ 26 ಜನರಲ್ಲಿ ಯಾರೆಲ್ಲಾ ಇದ್ದಾರೆ? ಕನ್ನಡದ ಯಾವ ನಟ, ನಟಿ, ನಿರ್ದೇಶಕರಿದ್ದಾರೆ? ಬೇರೆ ಭಾಷೆಯ ಯಾವ ತಾರೆಯರಿದ್ದಾರೆ? ಇವರೇ ನೋಡಿ ಸುದೀಪ್ ತಮ್ಮ ಟ್ವಿಟ್ಟರ್ ನಲ್ಲಿ ಫಾಲೋ ಮಾಡುತ್ತಿರುವ ಆ 26 ಜನ. ಮುಂದೆ ಓದಿ.....

ದರ್ಶನ್ ತೂಗುದೀಪ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನ ಕೂಡ ಸುದೀಪ್ ಅವರು ಟ್ವಿಟ್ಟರ್ ನಲ್ಲಿ ಫಾಲೋ ಮಾಡ್ತಿದ್ದಾರೆ. ಆದ್ರೆ, ಸುದೀಪ್ ಅವರನ್ನ, ದರ್ಶನ್ ಅನ್ ಫಾಲೋ ಮಾಡಿದ್ದರು.

ಹೆಬ್ಬುಲಿ ಕೃಷ್ಣ

'ಹೆಬ್ಬುಲಿ' ಚಿತ್ರದ ನಿರ್ದೇಶಕ ಹಾಗೂ ಖ್ಯಾತ ಛಾಯಾಗ್ರಾಹಕ ಕೃಷ್ಣ ಅವರನ್ನ ಟ್ವಿಟ್ಟರ್ ನಲ್ಲಿ ಸುದೀಪ್ ಫಾಲೋ ಮಾಡ್ತಿದ್ದಾರೆ.

4 ಬಾಲಿವುಡ್ ಸ್ಟಾರ್ ಗಳು

ಬಾಲಿವುಡ್ ಸ್ಟಾರ್ ನಟರಾದ ಶಾರೂಖ್ ಖಾನ್, ಸಲ್ಮಾನ್ ಖಾನ್, ರಿತೇಶ್ ದೇಶ್ಮುಖ್, ವಿವೇಕ್ ಒಬೆರಾಯ್ ಅವರನ್ನ ಸುದೀಪ್ ಅವರು ಫಾಲೋ ಮಾಡ್ತಿದ್ದಾರೆ.

ಸುದೀಪ್ ಅವರ 8 ಫ್ಯಾನ್ಸ್ ಕ್ಲಬ್

ಕಿಚ್ಚ ಫ್ಯಾನ್ಸ್ ಬೆಳಗಾವಿ, ಕಿಚ್ಚನ ಹುಡುಗೀರು, ಕಿಚ್ಚನ ಹುಡುಗರು, ಕಿಚ್ಚ ಸುದೀಪ್ ಫ್ಯಾನ್ಸ್, ಸೌತ್ ಇಂಡಿಯಾ ಸುದೀಪ್ ಫ್ಯಾನ್ಸ್, ಕೆ.ಎಸ್.ಎಸ್.ಎಸ್ ಅಫೀಶಿಯಲ್, ಕೆ.ಕೆ.ಎಸ್.ಎಫ್.ಎ, ಟೀಮ್ ಕಿಚ್ಚ ಸುದೀಪ್, ಎಂಬ 8 ಫ್ಯಾನ್ಸ್ ಕ್ಲಬ್ ಗಳನ್ನ ಸುದೀಪ್ ಟ್ವಿಟ್ಟರ್ ನಲ್ಲಿ ಫಾಲೋ ಮಾಡ್ತಿದ್ದಾರೆ.

4 ಜನ ಪತ್ರಕರ್ತರು

'ಬೆಂಗಳೂರು ಟೈಮ್ಸ್' ಪತ್ರಿಕೆಯ ಕಾವ್ಯ ಕ್ರಿಸ್ಟೋಫರ್, ಎಸ್.ಶ್ಯಾಮ್ ಪ್ರಸಾದ್‌, ಚಿತ್ರಲೋಕ.ಕಾಮ್ ಹಾಗೂ ಬಾಲಿವುಡ್ ವಿಮರ್ಶಕ ತರಣ್ ಆದರ್ಶ ಅವರನ್ನ ಸುದೀಪ್ ಫಾಲೋ ಮಾಡ್ತಿದ್ದಾರೆ .

ಸಂಚಿತ್ ಸಂಜೀವ್ ಮತ್ತು Warner Bros Pictures

ಫಿಲ್ಮ್ ಮೇಕರ್ ಸಂಚಿತ್ ಸಂಜೀವ್ ಮತ್ತು ಅಮೆರಿಕದ ಎಂಟರ್ ಟೈನ್ ಮೆಂಟ್ ಸಂಸ್ಥೆ Warner Bros Pictures ಅವರನ್ನ ಕೂಡ ಸುದೀಪ್ ತಮ್ಮ ಟ್ವಿಟ್ಟರ್ ನಲ್ಲಿ ಫಾಲೋ ಮಾಡ್ತಿದ್ದಾರೆ.

English summary
Kannada Actor Sudeep Have 8 Lakhs Followers In His Twitter Account. But Sudeep Following Only 26 Famous Peoples.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada