For Quick Alerts
  ALLOW NOTIFICATIONS  
  For Daily Alerts

  ಗುಂಡೇಟಿಗೆ ಬಲಿಯಾದ ಉಮೇಶ್ ಗೆ ಕಿಚ್ಚನಿಂದ ಪರಿಹಾರ ಧನ

  By Suneetha
  |

  ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ತಮ್ಮ ಅಭಿಮಾನಿಗಳ ಜೊತೆ ತುಂಬಾ ಹತ್ತಿರದ ಬಾಂಧವ್ಯ ಇಟ್ಟುಕೊಂಡಿದ್ದಾರೆ.

  ಇದಕ್ಕೆ ಉತ್ತಮ ನಿದರ್ಶನ ಅಂದ್ರೆ, ಅಭಿಮಾನಿಗಳು ಮಾಡುವ ಟ್ವೀಟ್ಸ್ ಗೆ ಉತ್ತರ ಕೊಡೋದು, ಅಭಿಮಾನಿ ಬಳಗ ಸಾಮಾಜಿಕ ಕಾರ್ಯ ಮಾಡಿದರೆ ಅವರಿಗೆ ಮತ್ತಷ್ಟು ಒಳ್ಳೆ ಕೆಲಸಗಳನ್ನು ಮಾಡಲು ಉತ್ತೇಜನ ಕೊಡೋದು ಇತ್ಯಾದಿ.['ಕಾವೇರಿ ಹಿಂಸಾಚಾರ'ದಲ್ಲಿ ಬಲಿಯಾದವರಿಗೆ ಅಣ್ಣಾವ್ರ ಮಕ್ಕಳ ಸಹಾಯ ಹಸ್ತ]

  ಬರೀ ಇದು ಮಾತ್ರವಲ್ಲದೇ ತಮ್ಮ ಅಭಿಮಾನಿಗಳಿಗೆ ಯಾರಿಗಾದ್ರೂ ಕಷ್ಟ ಅಂತ ಬಂದ್ರೆ, ಅಥವಾ ಅಭಿಮಾನಿಗಳು ಯಾರಾದ್ರೂ ನಿಧನ ಆದ್ರೆ, ಅವರ ಕುಟುಂಬಗಳಿಗೆ ಸಹಾಯ ಮಾಡೋದು, ಹೀಗೆ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡಿ ಹೃದಯವಂತ ಎನಿಸಿಕೊಳ್ಳುತ್ತಾರೆ ಕಿಚ್ಚ ಸುದೀಪ್ ಅವರು.

  ಇದೀಗ ಕಾವೇರಿ ಗಲಭೆಯಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದ ಅಮಾಯಕ ಉಮೇಶ್ ಅವರ ಕುಟುಂಬಕ್ಕೆ, ಸಹಾಯ ಹಸ್ತ ಚಾಚಲು ಕಿಚ್ಚ ಸುದೀಪ್ ಅವರು ದೌಡಾಯಿಸಿದ್ದಾರೆ. ಹೆಚ್ಚಿನ ಮಾಹಿತಿ ಕಲೆ ಹಾಕಲು ಮುಂದೆ ಓದಿ....

  ಕಿಚ್ಚನ ಕಡೆಯಿಂದ ಪರಿಹಾರ ಧನ

  ಕಿಚ್ಚನ ಕಡೆಯಿಂದ ಪರಿಹಾರ ಧನ

  ಕಾವೇರಿ ನೀರು ಪ್ರತಿಭಟನೆಯಲ್ಲಿ ಅನ್ಯಾಯವಾಗಿ ಗುಂಡೇಟಿಗೆ ಬಲಿಯಾದ ಉಮೇಶ್ ಕುಟುಂಬಕ್ಕೆ, ಕಿಚ್ಚ ಸುದೀಪ್ ಅವರು 1 ಲಕ್ಷ ರೂಪಾಯಿ ಪರಿಹಾರ ಧನ ನೀಡಿ ಸಹಾಯ ಮಾಡಿದ್ದಾರೆ.[ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ: ಉಪೇಂದ್ರ ಕೊಟ್ಟ ಸೂಪರ್ ಸುಪ್ರೀಂ ಐಡಿಯಾ!]

  ಕಿಚ್ಚ ಅಭಿಮಾನಿ ಉಮೇಶ್

  ಕಿಚ್ಚ ಅಭಿಮಾನಿ ಉಮೇಶ್

  ಮೃತಪಟ್ಟ ಉಮೇಶ್ ಗೌಡ ಅವರು ಕನ್ನಡ ನಟ ಕಿಚ್ಚ ಸುದೀಪ್ ಅವರು ಕಟ್ಟಾ ಅಭಿಮಾನಿ. ಆತನ ಎಡಗೈನಲ್ಲಿ ಕಿಚ್ಚನ ಹೆಸರನ್ನು ಟ್ಯಾಟೂ ಹಾಕಿಸಿಕೊಂಡಿದ್ದರಂತೆ ಮೃತ ಉಮೇಶ್ ಅವರು.[ಮಾನವೀಯತೆ ಮೆರೆದ 'ನಾಗರಹಾವು' ನಿರ್ಮಾಪಕ ಸಾಜಿದ್ ಖುರೇಶಿ]

  ಟ್ಯಾಟೂ ಸಹಾಯ ಮಾಡಿತು

  ಟ್ಯಾಟೂ ಸಹಾಯ ಮಾಡಿತು

  ಗುಂಡೇಟಿನಿಂದ ಪ್ರಾಣ ಕಳೆದುಕೊಂಡ ಉಮೇಶ್ ಅವರ ದೇಹವನ್ನು ಪತ್ತೆ ಮಾಡಲು, ಎಡಗೈನಲ್ಲಿ ಕಿಚ್ಚ ಅಂತ ಬರೆಸಿಕೊಂಡಿದ್ದ ಟ್ಯಾಟೂ ಸಹಾಯ ಮಾಡಿತ್ತು ಅನ್ನೋದು ವಿಪರ್ಯಾಸವೇ ಸರಿ.['ಕಾವೇರಿ ವಿವಾದ': ಶಿವಣ್ಣನ ಸಾರಥ್ಯದಲ್ಲಿ ಮೋದಿ ಭೇಟಿಗೆ ಚಿತ್ರರಂಗ?]

  ಅಭಿಮಾನಿ ಸಂಘದಿಂದ ಧನ ವಿತರಣೆ

  ಅಭಿಮಾನಿ ಸಂಘದಿಂದ ಧನ ವಿತರಣೆ

  ಸದ್ಯಕ್ಕೆ ಕಿಚ್ಚ ಸುದೀಪ್ ಅವರು ತಮ್ಮ ಮುಂಬರುವ ಸಿನಿಮಾ 'ಹೆಬ್ಬುಲಿ' ಶೂಟಿಂಗ್ ಗಾಗಿ ಕಾಶ್ಮೀರದಲ್ಲಿ ಬೀಡು ಬಿಟ್ಟಿದ್ದಾರೆ. ಹಾಗಾಗಿ ಸುದೀಪ್ ಅವರ ಅಭಿಮಾನಿ ಸಂಘದ ಅಧ್ಯಕ್ಷರು ಮತ್ತು ಪದಾದಿಕಾರಿಗಳು ಉಮೇಶ್ ಅವರ ಕುಟುಂಬದವರನ್ನು ಭೇಟಿ ಮಾಡಿ 1 ಲಕ್ಷ ರೂಪಾಯಿ ಪರಿಹಾರ ಧನ ವಿತರಣೆ ಮಾಡಿದ್ದಾರೆ.

  ಸಾಂತ್ವನ ಹೇಳಿದ ಸಂಘದ ಸದಸ್ಯರು

  ಸಾಂತ್ವನ ಹೇಳಿದ ಸಂಘದ ಸದಸ್ಯರು

  ಉಮೇಶ್ ಗೌಡ ಅವರ ಮನೆಗೆ ಹೋಗಿ, ಅವರ ಗರ್ಭಿಣಿ ಹೆಂಡತಿ ಮತ್ತು ಕುಟುಂಬಸ್ಥರನ್ನು ಭೇಟಿ ಮಾಡಿದ ಕಿಚ್ಚನ ಅಭಿಮಾನಿಗಳು, ಅವರಿಗೆ ಸಾಂತ್ವನ ನುಡಿದರು. ನಂತರ ಉಮೇಶ್ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿ, ಪತ್ನಿಗೆ ಸಹಾಯ ಧನ ಹಸ್ತಾಂತರಿಸಿದರು.

  English summary
  Kannada Actor Sudeep has again come forward in helping. This time he has given 1 lakh to Umesh who expired in the cauvery riot recently. Umesh was a hard core fan of Actor Sudeep.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X