»   » 'ಜಿಗರ್ ಥಂಡ' ಚಿತ್ರಕ್ಕೆ ಎಡಿಟಿಂಗ್ ಟಚ್ ಕೊಟ್ಟ ಕಿಚ್ಚ ಸುದೀಪ್

'ಜಿಗರ್ ಥಂಡ' ಚಿತ್ರಕ್ಕೆ ಎಡಿಟಿಂಗ್ ಟಚ್ ಕೊಟ್ಟ ಕಿಚ್ಚ ಸುದೀಪ್

Posted By:
Subscribe to Filmibeat Kannada

ಕಿಚ್ಚ ಕ್ರಿಯೇಷನ್ಸ್ ಅಡಿಯಲ್ಲಿ ಈ ವಾರ ತೆರೆಗೆ ಬರಲು ತಯಾರಾಗಿರುವ ಬಹುನಿರೀಕ್ಷಿತ ಸಿನಿಮಾ 'ಜಿಗರ್ ಥಂಡ' ಗಾಂಧಿನಗರದಲ್ಲಿ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದೆ. ಈಗಾಗಲೇ ಬಿಡುಗಡೆ ಆಗಿರುವ ಟ್ರೈಲರ್ [ಸಮಾಜ ಬದಲಾಗಲು ಕೊಬ್ರಿ ಮಂಜು ಸಿನಿಮಾ ಮಾಡಲ್ವಂತೆ.!] ನೋಡಿದ ಪ್ರೇಕ್ಷಕ ವರ್ಗ ಚಿತ್ರ ಬಿಡುಗಡೆಗೆ ಕಾತರದಿಂದ ಕಾದಿದ್ದಾರೆ ಅಂದ್ರೂ ತಪ್ಪಾಗಲ್ಲ.

ಅಂದಹಾಗೆ 'ಜಿಗರ್ ಥಂಡ' ಬಗ್ಗೆ ಬಹಳ ಮುತುವರ್ಜಿ ವಹಿಸಿರುವ ನಟ ಕಿಚ್ಚ ಸುದೀಪ್ ಅವರು ಸುಮಾರು 18 ದಿನಗಳ ಕಾಲ ಖುದ್ದು ಅವರೇ ಕುಳಿತು ಚಿತ್ರದ ಎಡಿಟಿಂಗ್ ಮಾಡಿದ್ದಾರೆ. ಶೂಟಿಂಗ್ ಅದೂ ಇದೂ ಅಂತ ತಮ್ಮ ಬಿಡುವಿಲ್ಲದ ಕೆಲಸದ ಮಧ್ಯೆಯೂ 'ಜಿಗರ್ ಥಂಡ' ಚಿತ್ರದ ಎಡಿಟಿಂಗ್ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಎಂದು ಚಿತ್ರದ ನಾಯಕ ನಟ ರಾಹುಲ್ ಅವರು ತಿಳಿಸಿದ್ದಾರೆ.


Kannada Actor Sudeep gives tech touch to Kannada Movie 'Jigarthanda'

'ಚಿತ್ರದ ಶೂಟಿಂಗ್ ಆರಂಭವಾದಗಿನಿಂದಲೂ ದಿನನಿತ್ಯದ ಚಟುವಟಿಕೆ ಬಗ್ಗೆ ಸುದೀಪ್ ಅವರು ಗಮನ ಹರಿಸುತ್ತಿದ್ದರು. ಶೂಟಿಂಗ್ ಸೆಟ್ ನಲ್ಲಿ ಏನು ನಡೆಯುತ್ತಿದೆ ಅನ್ನೋದನ್ನು ತಿಳಿದುಕೊಳ್ಳುತ್ತಿದ್ದರು.[ಇಂದು 'ಡ್ರಾಮಾ ಜ್ಯೂನಿಯರ್ಸ್'ನಲ್ಲಿ 'ಆರ್ಮುಗಂ' ರವಿಶಂಕರ್ ಆರ್ಭಟ.!]


Kannada Actor Sudeep gives tech touch to Kannada Movie 'Jigarthanda'

'ಜಿಗರ್ ಥಂಡ' ಶೂಟಿಂಗ್ ಕಂಪ್ಲೀಟ್ ಆದ ನಂತರ ಸಂಪೂರ್ಣ ವೀಕ್ಷಿಸಿ ಸುದೀಪ್ ಅವರು ಎಡಿಟಿಂಗ್ ಕಾರ್ಯ ಕೈಗೆತ್ತಿಕೊಂಡರು ಎಂದು ನಟ ರಾಹುಲ್ ಹೇಳಿದ್ದಾರೆ. ಇನ್ನು ವಿಶೇಷವಾಗಿ ರಾಹುಲ್ ಮತ್ತು ರವಿಶಂಕರ್ ಅವರ ನಟನೆಯನ್ನು ಸುದೀಪ್ ಅವರು ಮೆಚ್ಚಿಕೊಂಡಿದ್ದಕ್ಕಾಗಿ ರಾಹುಲ್ ಅವರು ಫುಲ್ ಖುಷ್ ಆಗಿದ್ದಾರೆ.[ಮುಂದಿನ ವಾರ ಚಿತ್ರಮಂದಿರಗಳಲ್ಲಿ 'ಜಿಗರ್ ಥಂಡ' ಹವಾ]


Kannada Actor Sudeep gives tech touch to Kannada Movie 'Jigarthanda'

ಹಲವು ಗ್ಯಾಪ್ ಗಳ ನಂತರ ಕಮ್ ಬ್ಯಾಕ್ ಆಗಿರುವ ನಟ ರಾಹುಲ್ ಅವರಿಗೆ ಈ ಚಿತ್ರ ಬ್ರೇಕ್ ನೀಡುವ ಎಲ್ಲಾ ಲಕ್ಷಣಗಳು ಕಾಣುತ್ತಿದ್ದು, ನಟ ರವಿಶಂಕರ್ ಅವರು ಈ ಸಿನಿಮಾದ ಮೂಲಕ ಭರ್ಜರಿ 50 ಸಿನಿಮಾಗಳನ್ನು ಪೂರೈಸಿದ ಖುಷಿಯಲ್ಲಿದ್ದಾರೆ.[50ರ ಗಡಿ ತಲುಪಿದ ಸಂಭ್ರಮದಲ್ಲಿ 'ಆರ್ಮುಗಂ' ರವಿಶಂಕರ್]


Kannada Actor Sudeep gives tech touch to Kannada Movie 'Jigarthanda'

ಹಲವಾರು ವಿಶೇಷತೆಗಳನ್ನು ಒಳಗೊಂಡಿರುವ 'ಜಿಗರ್ ಥಂಡ' ಚಿತ್ರ ಈಗಾಗಲೇ ಸೆನ್ಸಾರ್ ನಿಂದ ಗ್ರೀನ್ ಸಿಗ್ನಲ್ ಪಡೆದುಕೊಂಡು ಇದೇ ಶುಕ್ರವಾರ (ಜೂನ್ 24) ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಚಿತ್ರಕ್ಕೆ ನಿರ್ದೇಶಕ ಶಿವ ಗಣೇಶ್ ಆಕ್ಷನ್-ಕಟ್ ಹೇಳಿದ್ದು, ನಟ ರಾಹುಲ್, ನಟಿ ಸಂಯುಕ್ತಾ ಬೆಳವಾಡಿ, ನಟ ರವಿಶಂಕರ್ ಮತ್ತು ಚಿಕ್ಕಣ್ಣ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.


ಚಿತ್ರಕ್ಕೆ ರಾಕಿಂಗ್ ಸ್ಟಾರ್ ಯಶ್ ಅವರು ಶುಭ ಹಾರೈಸಿದ ವಿಡಿಯೋ ನೋಡಿ...English summary
Kannada movie 'Jigarthanda' made under Kannada Actor Sudeep banner Kiccha Creations in association with SRV Productions, Actor Sudeep took over the edit desk for 18 days. Kannada Actor P. Ravi Shankar, Kannada Actor Rahul, Kannada Actress Samyukta Belavadi in the lead role. The movie is directed by Shiva Ganesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada