»   » ಅಬ್ಬಾ.! ಅಂತೂ ಕಿಚ್ಚನ ಚಿತ್ರಕ್ಕೆ ಟೈಟಲ್ ಪಕ್ಕಾ ಆಯ್ತು

ಅಬ್ಬಾ.! ಅಂತೂ ಕಿಚ್ಚನ ಚಿತ್ರಕ್ಕೆ ಟೈಟಲ್ ಪಕ್ಕಾ ಆಯ್ತು

Posted By:
Subscribe to Filmibeat Kannada

ಇಷ್ಟು ದಿನ ಕಿಚ್ಚ ಸುದೀಪ್ ಹಾಗೂ ನಿರ್ದೇಶಕ ಕೆ.ಎಸ್ ರವಿಕುಮಾರ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿದ್ದ ಚಿತ್ರಕ್ಕೆ ಕನ್ನಡ ವರ್ಷನ್ ಗೆ ಟೈಟಲ್ ಯಾವುದು ಅನ್ನೋ ಗೊಂದಲ ಅಭಿಮಾನಿಗಳಲ್ಲಿ ಹಲವು ದಿನಗಳಿಂದ ಮನೆ ಮಾಡಿತ್ತು.

ಇದೀಗ ಎಲ್ಲರ ಗೊಂದಲಗಳಿಗೆ ನಿರ್ಮಾಪಕ ಸೂರಪ್ಪ ಬಾಬು ಅವರು ತೆರೆ ಎಳೆದಿದ್ದಾರೆ. ಹೌದು ಈ ಮೊದಲು ತಾತ್ಕಾಲಿಕವಾಗಿ 'ಕೋಟಿಗೊಬ್ಬ 2' ಅಂತ ಹೆಸರನ್ನಿಟ್ಟಿದ್ದ ಚಿತ್ರಕ್ಕೆ ಇದೀಗ ಎಲ್ಲರ ಆಗ್ರಹದ ಮೇರೆಗೆ ಅದೇ ಹೆಸರನ್ನು ಫೈನಲ್ ಮಾಡಲಾಗಿದೆ.[ವಾವ್ ಏಪ್ರಿಲ್ ತಿಂಗಳು ಸುದೀಪ್ ಅಭಿಮಾನಿಗಳಿಗೆ ಹಬ್ಬ ರೀ..!]

ಅಂತೂ ಆಫೀಶೀಯಲ್ ಆಗಿ ಚಿತ್ರದ ಹೆಸರು 'ಕೋಟಿಗೊಬ್ಬ 2' ಅಂತ ಫೈನಲ್ ಆಗಿದೆ. ಇಲ್ಲಿಯವರೆಗೆ ಚಿತ್ರದ ಕನ್ನಡ ಅವತರಣಿಕೆಯ ಟೈಟಲ್ ಪಕ್ಕಾ ಮಾಡದೇ ಸಿನಿಮಾದ ಶೂಟಿಂಗ್ ಮುಗಿಸಿದ್ದು, ಇನ್ನು ಎರಡು ಹಾಡುಗಳ ಶೂಟಿಂಗ್ ಬಾಕಿ ಉಳಿಸಿಕೊಂಡಿದೆ.

Kannada Actor sudeep's Movie titled 'Kotigobba 2' officially

ಕಿಚ್ಚ ಸುದೀಪ್ ಮತ್ತು ನಟಿ ನಿತ್ಯಾ ಮೆನನ್ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಸಿನಿಮಾ ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಏಕಕಾಲದಲ್ಲಿ ತೆರೆ ಕಾಣಲಿದೆ. ತಮಿಳಿನಲ್ಲಿ ಈ ಸಿನಿಮಾ 'ಮುಡಿಂಜ ಇವನ ಪುಡಿ' ಎಂಬ ಹೆಸರಿನಲ್ಲಿ ತೆರೆಗೆ ಬರಲಿದೆ.[ಇದಕ್ಕೆ ನೋಡಿ ಕನ್ನಡದ ಹುಡುಗರಿಗೆ ನಿತ್ಯಾ ಮೆನನ್ ಇಷ್ಟ ಆಗೋದು]

ಇನ್ನು ಈ ಮೊದಲು ಬಾಕಿ ಇರುವ ಚಿತ್ರದ ಎರಡು ಹಾಡುಗಳನ್ನು ಜಪಾನ್ ನಲ್ಲಿ ಚಿತ್ರೀಕರಣ ಮಾಡುವುದಾಗಿ ಹೇಳಿಕೊಂಡಿದ್ದ ನಿರ್ಮಾಪಕ ಸೂರಪ್ಪ ಬಾಬು ಅವರು ಇದೀಗ ಅದನ್ನು ಮುಂಬೈ ಮತ್ತು ಅಹಮದಾಬಾದ್ ನಲ್ಲಿ ಚಿತ್ರೀಕರಣ ಮಾಡಿ ಮುಗಿಸಲು ನಿರ್ಧರಿಸಿದ್ದಾರೆ.

ಎರಡು ಹಾಡುಗಳ ಶೂಟಿಂಗ್ ಮುಗಿದರೆ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಲಿದ್ದು, ಏಪ್ರಿಲ್ 25ರಿಂದ ಹಾಡುಗಳ ಚಿತ್ರೀಕರಣ ಆರಂಭವಾಗಲಿದ್ದು, ಮೊದಲ ಹಾಡನ್ನು ಅಹಮದಾಬಾದ್ ನಲ್ಲಿ ಚಿತ್ರೀಕರಣ ಮಾಡಲಾಗುತ್ತದೆ. ಈ ಹಾಡಿನಲ್ಲಿ ಸುದೀಪ್ ಮತ್ತು ನಿತ್ಯಾ ಮೆನನ್ ಹೆಜ್ಜೆ ಹಾಕಲಿದ್ದಾರೆ.[2 ಕೋಟಿ ರೂ.ವೆಚ್ಚದಲ್ಲಿ ಸುದೀಪ್ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್]

ಎರಡನೇ ಹಾಡು ಸುದೀಪ್ ಅವರ ಎಂಟ್ರಿ ಸಾಂಗ್ ಆಗಿದ್ದು, ಅದನ್ನು ಮುಂಬೈನಲ್ಲಿ ಶೂಟಿಂಗ್ ನಡೆಸಲಾಗುವುದು ಎಂದು ನಿರ್ಮಾಪಕ ಸೂರಪ್ಪ ಬಾಬು ಹೇಳಿಕೊಂಡಿದ್ದಾರೆ.(ಚಿತ್ರಕೃಪೆ: ಫೇಸ್ ಬುಕ್)

-
-
-
-
-
-
-
-
-
-
-
-
-
English summary
Kannada Actor Sudeep's new film being produced by Soorappa Babu has finally come to an end with the film being titled as 'Kotigobba 2' officially. Actress Nithya menen in the lead role. The movie is directed by 'Lingaa' fame director KS Ravikumar.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada