For Quick Alerts
  ALLOW NOTIFICATIONS  
  For Daily Alerts

  ಬಹುಕೋಟಿ ಐತಿಹಾಸಿಕ 'ರಾಜ ವಿಷ್ಣುವರ್ಧನ' ಚಿತ್ರದಲ್ಲಿ ಸುದೀಪ್!

  By Bharath Kumar
  |

  'ಮಾಸ್ತಿಗುಡಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ನಿರ್ದೇಶಕ ನಾಗಶೇಖರ್, ಈಗ ಮತ್ತೊಂದು ಪರ್ವ ಹುಟ್ಟುಹಾಕಲು ಸಿದ್ದವಾಗಿದ್ದಾರೆ.

  ಸದ್ಯ, 'ಮಾಸ್ತಿಗುಡಿ' ಚಿತ್ರದ ಬಿಡುಗಡೆಗೆ ಕಾಯುತ್ತಿರುವ ಡೈರೆಕ್ಟರ್ ನಾಗಶೇಖರ್, ಅದಾದ ಬಳಿಕ ಐತಿಹಾಸಿಕ ಚಿತ್ರವೊಂದನ್ನ ಶುರು ಮಾಡಲಿದ್ದಾರಂತೆ. ಈ ಚಿತ್ರದಲ್ಲಿ ಕನ್ನಡದ ಆರಡಿ ಕಟೌಟ್ ಕಿಚ್ಚ ಸುದೀಪ್ ಅವರನ್ನ ಕರೆತರುವ ಬಹುದೊಡ್ಡ ಯೋಚನೆಯಲ್ಲಿದ್ದಾರಂತೆ. ಅಷ್ಟೇ ಅಲ್ಲದೆ ಇದು ಬಹೊದೊಡ್ಡ ಪ್ರಾಜೆಕ್ಟ್ ಆಗಿದ್ದು, ಬಹುಬಾಷೆಗಳಲ್ಲಿ ಮೂಡಿ ಬರಲಿದೆಯಂತೆ.[ಬಿಡುಗಡೆಗೂ ಮುನ್ನವೇ ಭರ್ಜರಿ ಬೇಟೆ ಆಡಿದ ವಿಜಯ್ 'ಮಾಸ್ತಿಗುಡಿ']

  ಅಷ್ಟಕ್ಕೂ, ನಿರ್ದೇಶಕ ನಾಗಶೇಖರ್ ಕೈಗೆತ್ತಿಕೊಂಡಿರುವ ಆ ಐತಿಹಾಸಿಕ ಕಥೆ ಯಾವುದು? ಕಿಚ್ಚನಿಗೆ ರೆಡಿಯಾಗ್ತಿರುವ ಆ ಪಾತ್ರ ಯಾವುದು ಎಂದು ತಿಳಿದುಕೊಳ್ಳಲು ಮುಂದೆ ಓದಿ......

  'ರಾಜ ವಿಷ್ಣುವರ್ಧನ' ಕುರಿತು ಚಿತ್ರ

  'ರಾಜ ವಿಷ್ಣುವರ್ಧನ' ಕುರಿತು ಚಿತ್ರ

  1108 ರಿಂದ 1152 ರ ಕಾಲಘಟ್ಟದ ಹೊಯ್ಸಳ ಸಂಸ್ಥಾನ 'ರಾಜ ವಿಷ್ಣುವರ್ಧನ' ಕುರಿತು ಸಿನಿಮಾ ಮಾಡಲು ನಿರ್ದೇಶಕ ನಾಗಶೇಖರ್ ಮುಂದಾಗಿದ್ದಾರೆ.

  ಐತಿಹಾಸಿಕ ಪ್ರೇಮಕಥೆ

  ಐತಿಹಾಸಿಕ ಪ್ರೇಮಕಥೆ

  ಇದೊಂದು ನೈಜಕಥೆಯಾಗಿದ್ದು, 'ರಾಜ ವಿಷ್ಣುವರ್ಧನ' ಮತ್ತು 'ನಾಟ್ಯರಾಣಿ ಶಾಂತಲಾ' ನಡುವಿನ ಪ್ರೇಮಕಥೆಯನ್ನ ಸಿನಿಮಾ ಮಾಡಲು ನಿರ್ಧರಿಸಿದ್ದಾರಂತೆ. ಇದಕ್ಕಾಗಿ ಈಗಾಗಲೇ ಹಲವು ಪುಸ್ತಕಗಳನ್ನ ಓದುತ್ತಿದ್ದಾರಂತೆ ನಿರ್ದೇಶಕರು

  ಶೀರ್ಷಿಕೆ ಅಂತಿಮ

  ಶೀರ್ಷಿಕೆ ಅಂತಿಮ

  ಈ ಮೆಗಾ ಚಿತ್ರಕ್ಕೆ 'ರಾಜ ವಿಷ್ಣುವರ್ಧನ' ಎಂದು ಶೀರ್ಷಿಕೆಯನ್ನ ಕೂಡ ಅಂತಿಮ ಮಾಡಿದ್ದು, ಅದರ ಸುತ್ತಾ ಚಿತ್ರಕಥೆಯನ್ನ ಹೆಣೆಯುತ್ತಿದ್ದಾರಂತೆ ನಾಗಶೇಖರ್.

  ಬಿಗ್ ಬಜೆಟ್ ಸಿನಿಮಾ

  ಬಿಗ್ ಬಜೆಟ್ ಸಿನಿಮಾ

  ಸರಿ ಸುಮಾರು 60 ಕೋಟಿ ವೆಚ್ಚದಲ್ಲಿ ಈ ಬಿಗ್ ಬಜೆಟ್ ಸಿನಿಮಾ ತಯಾರಾಗಲಿದೆಯಂತೆ. ಇದಕ್ಕಾಗಿ ದೊಡ್ಡ ಬಂಡವಾಳ ಹೂಡುವ ನಿರ್ಮಾಪಕರನ್ನ ಹುಡುಕುತ್ತಿದ್ದಾರಂತೆ.

  ಬಹುಭಾಷೆಯಲ್ಲಿ ಮೂಡಲಿದೆ ದೃಶ್ಯಕಾವ್ಯ

  ಬಹುಭಾಷೆಯಲ್ಲಿ ಮೂಡಲಿದೆ ದೃಶ್ಯಕಾವ್ಯ

  ವಿಶೇಷ ಅಂದ್ರೆ, ಈ ಚಿತ್ರ ಕನ್ನಡದ ಜೊತೆಗೆ ಬಹುಭಾಷೆಗಳಲ್ಲಿ ಮೂಡಲಿದೆಯಂತೆ. ತೆಲುಗು, ತಮಿಳು ಹಾಗೂ ಹಿಂದಿಯಲ್ಲೂ ಚಿತ್ರೀಕರಣ ಮಾಡುವ ಉದ್ದೇಶ ಹೊಂದಿದ್ದಾರಂತೆ.

  ಸುದೀಪ್ ಅಭಿನಯಿಸುವ ವಿಶ್ವಾಸ!

  ಸುದೀಪ್ ಅಭಿನಯಿಸುವ ವಿಶ್ವಾಸ!

  'ರಾಜ ವಿಷ್ಣುವರ್ಧನ' ಹಾಗೂ ಶಾಂತಲಾ ಬಗ್ಗೆ ಸಂಶೋಧನೆ ಮಾಡುತ್ತಿರುವ ನಿರ್ದೇಶಕರು, ಈ ಪಾತ್ರಕ್ಕಾಗಿ ಸುದೀಪ್ ಅವರನ್ನ ಕರೆತರುವ ವಿಶ್ವಾಸದಲ್ಲಿದ್ದಾರೆ. ಸದ್ಯ, ಸ್ಕ್ರಿಪ್ಟ್ ಕೆಲಸದಲ್ಲಿ ಬ್ಯುಸಿಯಾಗಿರುವ ನಾಗಶೇಖರ್, ಸ್ಕ್ರಿಪ್ಟ್ ಅಂತಿಮವಾದ ಮೇಲೆ ಸುದೀಪ್ ಅವರ ಬಳಿ ಮಾತನಾಡಲಿದ್ದಾರಂತೆ.

  ಸುದೀಪ್ ಮಾಡ್ತಾರ?

  ಸುದೀಪ್ ಮಾಡ್ತಾರ?

  ಸುದೀಪ್ ಸದ್ಯ, ಪ್ರೇಮ್ ನಿರ್ದೇಶನದ 'ದಿ ವಿಲನ್' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಅದಾದ ನಂತರ ರಕ್ಷಿತ್ ಶೆಟ್ಟಿ ನಿರ್ದೇಶನದ 'ಥಗ್ಸ್ ಆಫ್ ಮಾಲ್ಗುಡಿ' ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಈ ಮಧ್ಯೆ ಮುನಿರತ್ನ ನಿರ್ಮಾಣ ಮಾಡಲಿರುವ 'ಕುರುಕ್ಷೇತ್ರ' ಚಿತ್ರದಲ್ಲೂ ಸುದೀಪ್ ಅಭಿನಯಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇದೀಗ, ನಾಗಶೇಖರ್ ಅವರು 'ರಾಜ ವಿಷ್ಣುವರ್ಧನ' ಎಂಬ ಐತಿಹಾಸಿಕ ಚಿತ್ರ ಮಾಡುವ ತಯಾರಿ. ಈ ಚಿತ್ರಕ್ಕೆ ಸುದೀಪ್ ಬರ್ತಾರ! ಕಾದು ನೋಡೋಣ.

  English summary
  If everything goes as per the plan, actor Kichcha Sudeep, will play the role of erstwhile king Vishnvardhana, in a project to be directed by Nagashekhar. Vishnvardhana was a king in Hoysala empire.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X