For Quick Alerts
  ALLOW NOTIFICATIONS  
  For Daily Alerts

  6 ವರ್ಷಗಳ ಬಳಿಕ ಮರಳಿ ಬಂದ ನಟ 'ತರುಣ್ ಚಂದ್ರ'!

  |

  ಚಿತ್ರರಂಗದಲ್ಲಿ ಕೆಲವು ನಟ ನಟಿಯರು ಉತ್ತಮ ಹೆಸರು ಮಾಡಿದರು ಕೆಲವೇ ವರ್ಷಗಳಲ್ಲಿ ಕಾಣದಂತೆ ಮಾಯವಾಗಿ ಬಿಡುತ್ತಾರೆ. ಕನ್ನಡ ಸಿನಿಮಾ ರಂಗದಲ್ಲೂ ಇದೆ ರೀತಿ ಹಲವು ತಾರೆಯರು ಇದ್ದಾರೆ. ಒಂದಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಗಮನ ಸೆಳೆದು ನಂತ ಚಿತ್ರ ರಂಗದಿಂದ ದೂರ ಉಳಿದು ಬಿಡುತ್ತಾರೆ. ಈ ಲಿಸ್ಟ್‌ಗೆ ನಟ ತರುಣ್ ಚಂದ್ರ ಕೂಡ ಸೇರಿ ಕೊಂಡಿದ್ದಾರೆ.

  'ಲವ್‌ ಗುರು' ಖ್ಯಾತಿಯ ನಟ ತರುಣ್ ಚಂದ್ರ ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳನ್ನು ಮಾಡಿ ಸಿನಿರಸಿಕರ ಮನ ಗೆದ್ದಿದ್ದರು. ಆದರೆ ಈಗ ಅದ್ಯಾಕೋ ಇದ್ದಕ್ಕಿದ್ದ ಹಾಗೆ ತರುಣ್ ಸಿನಿಮಾರಂಗದಿಂದ ದೂರ ಉಳಿದು ಬಿಟ್ಟರು.

  ಈಗ ಮತ್ತೆ ತರುಣ್ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ವಿಶೇಷವಾದ ಪಾತ್ರದ ಮೂಲಕ ನಟ ತರುಣ್ ಚಂದ್ರ ಕನ್ನಡ ಸಿನಿಮಾರಂಗದಲ್ಲಿ ಮತ್ತೇ ತಮ್ಮ ಸಿನಿಮಾ ಜರ್ನಿ ಆರಂಭಿಸಲು ಬರುತ್ತಿದ್ದಾರೆ.

  ಹಾರರ್ ಕಥೆಯ ಮೂಲಕ ತರುಣ್ ಕಮ್‌ ಬ್ಯಾಕ್!

  ಹಾರರ್ ಕಥೆಯ ಮೂಲಕ ತರುಣ್ ಕಮ್‌ ಬ್ಯಾಕ್!

  ನಟ ತರುಣ್ ಚಂದ್ರ ಮುಂದಿನ ಕನ್ನಡ ಸಿನಿಮಾ ಶೂಟಿಂಗ್‌ಗೆ ಸಕಲ ತಯಾರಿ ಮಾಡಿಕೊಂಡಿದೆ. ಈ ಚಿತ್ರ ಹಾರರ್ ಕಥೆಯುಳ್ಳ ಸಿನಿಮಾ. ಚಿತ್ರದಲ್ಲಿ ಪ್ಯಾರಾನಾರ್ಮಲ್ ಅಂಶವನ್ನು ಮುಖ್ಯವಾಗಿ ಇರಿಸಿ ಸಿನಿಮಾ ಕಥೆಯನ್ನು ಕಟ್ಟಿದ್ದಾರೆ ನಿರ್ದೇಶಕ ಆನಂದ್ ಮಿಶ್ರ. ಹಾಗಾಗಿ ಈ ಚಿತ್ರದಲ್ಲಿ ತರುಣ್ ಪಾತ್ರ ಹೇಗೆ ಇರಲಿದೆ ಎನ್ನುವ ಬಗ್ಗೆ ಕುತೂಹಲ ಮೂಡಿದೆ. ಇದು ತರುಣ್ ಕಮ್ ಬ್ಯಾಕ್ ಆಗಿರುವುದರಿಂದ ಉತ್ತಮ ಪಾತ್ರದಲ್ಲಿಯೇ ತರುಣ್ ಕಾಣಿಸಿಕೊಳ್ಳಲಿದ್ದಾರೆ.

  ಟ್ರಿನ್, ಟ್ರಿನ್‌ನಲ್ಲಿ ತರುಣ್ ಜೊತೆಗೆ ದಿಗಂತ್!

  ಟ್ರಿನ್, ಟ್ರಿನ್‌ನಲ್ಲಿ ತರುಣ್ ಜೊತೆಗೆ ದಿಗಂತ್!

  ಈ ಚಿತ್ರದಲ್ಲಿ ನಟ ತರುಣ್ ಜೊತೆಗೆ ದಿಗಂತ್ ಕೂಡ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಲಿದ್ದಾರೆ. ಚಿತ್ರಕ್ಕೆ ಸದ್ಯ ತಾತ್ಕಾಲಿಕವಾಗಿ ಟ್ರಿನ್, ಟ್ರಿನ್ ಎನ್ನುವ ಶೀರ್ಷಿಕೆಯನ್ನು ನಿಗದಿ ಮಾಡಲಾಗಿದೆ. ಕನ್ನಡದ ಇಬ್ಬರು ನಟರು ಒಟ್ಟಿಗೆ ಈ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಮತ್ತೊಂದು ಕುತೂಹಲ ಹುಟ್ಟು ಹಾಕಿದೆ. ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳು ಬಹುತೇಕ ಮುಗಿದ್ದು, ಜನವರಿಯಲ್ಲಿ ಸಿನಿಮಾತಂಡ ಶೂಟಿಂಗ್ ಆರಂಭಿಸಲಿದೆ.

  ಖುಷಿ ಚಿತ್ರದ ಮೂಲಕ ಬಣ್ಣ ಹಚ್ಚಿದ್ದ ತರುಣ್ ಚಂದ್ರ!

  ಖುಷಿ ಚಿತ್ರದ ಮೂಲಕ ಬಣ್ಣ ಹಚ್ಚಿದ್ದ ತರುಣ್ ಚಂದ್ರ!

  ನಟ ತರುಣ್ 2013ರಲ್ಲಿ ತೆರೆಕಂಡ 'ಖುಷಿ' ಚಿತ್ರದ ಮೂಲಕ ಕನ್ನಡದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಬಳಿಕ ತರುಣ್ ಕನ್ನಡ ಚಿತ್ರರಂಗದಲ್ಲಿ ಚಾಕಲೇಟ್ ಬಾಯ್ ಅಂತ ಕರೆಸಿಕೊಲ್ಲುತ್ತಾ ಇದ್ದರು. ತರುಣ್ ಅಭಿನಯದ ಲವ್‌ ಸ್ಟೋರಿ ಸಿನಿಮಾಗಳು ಸಿನಿರಸಿಕರನ್ನು ಸೆಳಿಯುತ್ತಿದ್ದವು. ಆದರೆ ತಮ್ಮ ಸಿನಿಮಾ ಪಯಣವನ್ನು ಅರ್ಧಕ್ಕೆ ನಿಲ್ಲಿಸಿದ್ದ ನಟ ತರುಣ್ ಈಗ ಮತ್ತೆ ವಾಪಸ್ ಆಗಿದ್ದಾರೆ. ಈ ಚಿತ್ರದ ಮೂಲಕ ತರುಣ್ ಹೇಗೆ ಜಾದೂ ಮಾಡಲಿದ್ದಾರೆ ಎನ್ನುವ ಕುತೂಹಲ ಸದ್ಯಕ್ಕೆ ಮೂಡಿದೆ.

  ಹಿಟ್ ಸಿನಿಮಾಗಳನ್ನು ಕೊಟ್ಟು ಟಾಪ್‌ನಲ್ಲಿ ಇದ್ದ ನಟ!

  ಹಿಟ್ ಸಿನಿಮಾಗಳನ್ನು ಕೊಟ್ಟು ಟಾಪ್‌ನಲ್ಲಿ ಇದ್ದ ನಟ!

  ನಟ ತರುಣ್ ಸಾಲು ಸಾಲು ಸಿನಿಮಾಗಳನ್ನ ಮಾಡಿ ಸೈ ಎನಿಸಿಕೊಂಡ ನಟ. ಗೆಳೆಯ, ಈ ಬಂಧನ, ಲವ್‌ ಗುರು, ಸಿನಿಮಾಗಳು ತರುಣ್ ಸಿನಿಜರ್ನಿಯ ಹಿಟ್ ಚಿತ್ರಗಳು. ಒಟ್ಟು 17 ಚಿತ್ರಗಳಲ್ಲಿ ತರುಣ್ ಅಭಿನಯಿಸಿದ್ದಾರೆ. ಈ ನಡುವೆ ತೆಲುಗು ಚಿತ್ರದಲ್ಲೂ ತರುಣ್ ಅಭಿನಯಿಸಿದ್ದಾರೆ. ಕೊನೆಯದಾಗಿ ತರುಣ್ ಅಭಿನಯದ ಸಿನಿಮಾ 'ಗೋವ'. ಈ ಚಿತ್ರ 2015ರಲ್ಲಿ ರಿಲೀಸ್ ಆಗಿದೆ. ಈಗ 6 ವರ್ಷಗಳ ಅಂತರದ ನಂತರ ತರುಣ್ ಈಗ ಮತ್ತೆ ಕನ್ನಡ ಚಿತ್ರದಲ್ಲಿ ಅಭಿನಯಿಸಲು ಮುಂದಾಗಿದ್ದಾರೆ. ಈ ಚಿತ್ರದಲ್ಲಿ ತರುಣ್ ಜೊತೆಗೆ ದಿಗಂತ್ ಕೂಡ ಇರಲಿದ್ದಾರೆ. ಆದರೆ ತರುಣ್ ಪಾತ್ರದ ಮೇಲೆ ಹೆಚ್ಚಿನ ನಿರೀಕ್ಷೆ ಸೃಷ್ಟಿ ಅಗಿದೆ.

  English summary
  Kannada Actor Tarun Chandra come back after 6 years, sharing screen with diganth, know more,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X