»   » ಬೇರೆ ಮನೆ ಮಾಡಿರುವ ಬಗ್ಗೆ ರಾಕಿಂಗ್ ಸ್ಟಾರ್ ಖಡಕ್ ಉತ್ತರ

ಬೇರೆ ಮನೆ ಮಾಡಿರುವ ಬಗ್ಗೆ ರಾಕಿಂಗ್ ಸ್ಟಾರ್ ಖಡಕ್ ಉತ್ತರ

Posted By:
Subscribe to Filmibeat Kannada
ರಾಕಿಂಗ್ ಸ್ಟಾರ್ ಯಶ್ ತನ್ನ ಹೊಸ ಮನೆ ಬಗೆಗಿನ ಗಾಸಿಪ್ ಗೆ ಖಡಕ್ ಉತ್ತರ | Filmibeat Kannada

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಮದುವೆಯಾಗಿ ಒಂದು ವರ್ಷ ಕಳೆದಿದೆ. ಇಬ್ಬರು ಅನ್ಯೋನ್ಯವಾಗಿ, ಸಂತೋಷವಾಗಿ ತಮ್ಮ ಲೈಫ್ ನ ಎಂಜಾಯ್ ಮಾಡ್ತಿದ್ದಾರೆ. ಯಶ್ ಕುಟುಂಬದ ಜೊತೆ ರಾಧಿಕಾ ಸುಖವಾಗಿ ಜೀವನ ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ಯಶ್ ಹುಟ್ಟುಹಬ್ಬವನ್ನ ಕುಟುಂಬವೆಲ್ಲಾ ಸೇರಿ ಅದ್ಧೂರಿಯಾಗಿ ಆಚರಿಸಿದೆ. ಅದಕ್ಕೂ ಮುಂಚೆ ಪತ್ನಿ, ತಂದೆ-ತಾಯಿ ಮತ್ತು ತಂಗಿಗೋಸ್ಕರ ಮೂರು ಬೆಂಜ್ ಕಾರನ್ನ ಯಶ್ ಖರೀದಿಸಿದ್ದರು.

ಹೀಗೆ, ಖುಷಿ ಖುಷಿಯಾಗಿರುವ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಬಗ್ಗೆ ಒಂದು ಆರೋಪ ಕೇಳಿ ಬರುತ್ತಿತ್ತು. ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿಯೂ ಈ ವಿಷ್ಯ ಚರ್ಚೆಯಾಗಿತ್ತು.

ಅದೇನಪ್ಪಾ ಅಂದ್ರೆ, ರಾಕಿಂಗ್ ಸ್ಟಾರ್ ಯಶ್ ಮತ್ತು ಪತ್ನಿ ರಾಧಿಕಾ ಬೇರೆ ಮನೆ ಮಾಡಿದ್ದಾರೆ. ಕುಟುಂಬದಲ್ಲಿ ಮನಸ್ತಾಪ ಮೂಡಿರುವ ಹಿನ್ನೆಲೆ ಈ ನಿರ್ಧಾರ ಮಾಡಿದ್ದಾರೆ ಎಂಬ ಮಾತು ಎಲ್ಲೆಡೆ ಚರ್ಚೆಯಾಗುತ್ತಿತ್ತು. ಆದ್ರೆ, ಈ ಬಗ್ಗೆ ಯಶ್ ಕುಟುಂಬದವರು ಎಲ್ಲಿಯೂ ಮಾತನಾಡಿರಲಿಲ್ಲ. ಇತ್ತೀಚೆಗಷ್ಟೇ ಟಿವಿ ಸಂದರ್ಶನದಲ್ಲಿ ಯಶ್ ಈ ಬಗ್ಗೆ ಮಾತನಾಡಿದ್ದು, ಎಲ್ಲ ಅನುಮಾನಗಳಿಗೂ ಖಡಕ್ ಆಗಿ ಉತ್ತರ ನೀಡಿದ್ದಾರೆ.

ಮನೆ ಖರೀದಿ ಮಾಡಿರುವುದು ನಿಜ

ಈಗ ಇರುವ ಮನೆಯ ಜೊತೆಗೆ ಹೊಸ ಮನೆ ಖರೀದಿಸಿರುವುದು ನಿಜ ಎಂದು ನಟ ಯಶ್ ಸ್ಪಷ್ಟಪಡಿಸಿದ್ದಾರೆ. ಮದುವೆಗೆ ಮುಂಚೆನೇ ಇನ್ನೊಂದು ಮನೆ ಖರೀದಿಸುವ ಪ್ಲಾನ್ ಆಗಿತ್ತು, ಇದು ಒಂದು ರೀತಿ ಆಫೀಸ್ ಕಮ್ ಮನೆ ಎಂದು ನಟ ಯಶ್ ತಿಳಿಸಿದ್ದಾರೆ.

ಬಾಡಿಗೆ ಮನೆ ಅಮ್ಮನಿಗೆ ಇಷ್ಟವಿರಲಿಲ್ಲ

''ನಾನು ಮನೆಯಲ್ಲಿ ಇರುವುದಕ್ಕಿಂತ, ಹೊರಗಡೆ ಇರುವುದು ಹೆಚ್ಚು. ಕೆಲಸ, ಶೂಟಿಂಗ್ ಅಂತ ಆಫೀಸ್ ನಲ್ಲಿ ಜಾಸ್ತಿ ಇರ್ತಿನಿ. ಮನೆಗೆ ಹೋಗಿ ಬರೋದು ಎಲ್ಲ ಹೀಗೆ ಲೇಟ್ ಆಗುತ್ತೆ. ಹೀಗಾಗಿ, ಬಾಡಿಗೆಗೆ ಒಂದು ಮನೆ ಮಾಡ್ತೀನಿ ಅಂತ ಅಮ್ಮನಿಗೆ ಹೇಳಿದೆ. ಅದಕ್ಕೆ ಅಮ್ಮ ಬಾಡಿಗೆ ಮನೆ ಬೇಡ. ಸ್ವಂತ ಮನೆ ಮಾಡೋಣ ಅಂದ್ರು'' - ಯಶ್, ನಟ

ಯಶ್ ಪ್ರತಿ ಹುಟ್ಟುಹಬ್ಬಕ್ಕೆ ಮರೆಯದೆ ಮಾಡುವ ಮೊದಲ ಕೆಲಸ ಇದು

ಮನೆ ಹುಡುಕಿಕೊಟ್ಟಿದ್ದೇ ಅಮ್ಮ

''ಈ ಮನೆಯನ್ನ ಹುಡುಕಿಕೊಟ್ಟಿದ್ದೇ ಅಮ್ಮ. ಬಾಡಿಗೆ ಇರ್ತಿನಿ ಅಂತ ನಾನು ಹೇಳಿದ್ದೆ, ಆದ್ರೆ, ಅಮ್ಮನೇ ಬಾಡಿಗೆ ಮನೆ ಬೇಡ. ನಮ್ಮ ಸೊಸೆ ಬಾಡಿಗೆ ಮನೆಯಲ್ಲಿ ಇರೋದು ಬೇಡ. ಒಂದು ಸಲ ಅನುಭವಿಸಿರೋದೇ ಸಾಕು. ಇನ್ನೊಂದು ಸಲ ಆ ಕಷ್ಟ ಬೇಡ. ಸ್ವಂತ ಮನೆಯನ್ನೇ ತೆಗೆದುಕೊಳ್ಳೋಣ ಅಂತ ಅಮ್ಮನೇ ಹಠ ಮಾಡಿ ಹುಡುಕಿಕೊಟ್ಟಿದ್ದು'' - ಯಶ್, ನಟ

ಸೆಲೆಬ್ರಿಟಿಗಳ ಜೀವನದಲ್ಲಿ ಇದೆಲ್ಲ ಕಾಮನ್

''ಎಲ್ಲರ ಲೈಫ್ ನಲ್ಲೂ ಇದಂತೆ, ಅದಂತೆ ಎನ್ನುವುದು ಬಂದೇ ಬರುತ್ತೆ. ಇನ್ನು ಸೆಲೆಬ್ರಿಟಿ ಆದ್ರೆ, ಇದೆಲ್ಲಾ ಕಾಮನ್. ಅದಕ್ಕೆಲ್ಲಾ ನಾವು ತಲೆನೂ ಕೆಡಿಸಿಕೊಳ್ಳಲ್ಲ. ನಾನು ಯೋಚನೆನೂ ಮಾಡಲ್ಲ'' ಎಂದು ಯಶ್ ಖಡಕ್ ಆಗಿ ಉತ್ತರಿಸಿದ್ದಾರೆ.

ಅನುಕೂಲಕ್ಕಾಗಿ ಹೊಸ ಮನೆ

ಅಂದ್ಹಾಗೆ, ಯಶ್ ಅವರು ಇನ್ನೊಂದು ಮನೆ ಮಾಡಿರುವುದು, ಶೂಟಿಂಗ್, ಕೆಲಸ ಅಂತ ಮನೆಗೆ ಹೋಗುವುದು ತಡವಾಗುತ್ತೆ. ಯಾವಾಗಲೂ ಆಫೀಸ್ ನಲ್ಲೇ ಇರಲು ಕಷ್ಟ. ಹೀಗಾಗಿ, ಅನುಕೂಲಕ್ಕೆ ಈ ಮನೆ ಇರಲಿ ಎಂದು ಇನ್ನೊಂದು ಮನೆ ಮಾಡಿದ್ದಾರೆ ಹೊರತು, ಕುಟುಂಬದಲ್ಲಿ ಯಾವುದೇ ರೀತಿಯ ಕಲಹ, ಮನಸ್ತಾಪ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಈಗಲಾದರೂ, ಈ ಅಂತೆ-ಕಂತೆಗಳಿಗೆ ಕಿವಿಕೊಡುವುದನ್ನ ಬಿಡಿ.

ರಾಕಿಂಗ್ ಸ್ಟಾರ್ ಬರ್ತಡೇಗೆ ಸರಳವಾಗಿ ವಿಶ್ ಮಾಡಿದ ಮಿಸಸ್ ಯಶ್

English summary
Sandalwood’s popular couple Yash and Radhika Pandit have recently purchased a new home in Bengaluru. After the completion of the interior works, they will shift to the new home.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X