»   » 'ಮನಸು ಮಲ್ಲಿಗೆ' ನೋಡಿದ ಯಶ್ ಹೇಳಿದ್ದೇನು?

'ಮನಸು ಮಲ್ಲಿಗೆ' ನೋಡಿದ ಯಶ್ ಹೇಳಿದ್ದೇನು?

Posted By:
Subscribe to Filmibeat Kannada

ಎಸ್.ನಾರಾಯಣ್ ನಿರ್ದೇಶನದ 'ಮನಸು ಮಲ್ಲಿಗೆ' ಚಿತ್ರ ಕಳೆದ ವಾರವಷ್ಟೇ ಬಿಡುಗಡೆಯಾಗಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಗಳಿಸಿಕೊಂಡಿದೆ. ಪ್ರೇಕ್ಷಕರು ಮೆಚ್ಚಿಕೊಂಡ 'ಮನಸು ಮಲ್ಲಿಗೆ'ಯನ್ನ ಇತ್ತೀಚೆಗಷ್ಟೇ ರಾಕಿಂಗ್ ಸ್ಟಾರ್ ಯಶ್ ಕೂಡ ನೋಡಿ ಇಷ್ಟಪಟ್ಟಿದ್ದಾರೆ.[ಟ್ರೈಲರ್: ಕನ್ನಡದ 'ಪ್ರೇಮಕಾವ್ಯ' ಆಗುವ ಸೂಚನೆ ಕೊಟ್ಟ 'ಮನಸು ಮಲ್ಲಿಗೆ' ]

ಯಶ್ ಹೇಳಿದ್ದೇನು?

''ಸಿನಿಮಾ ತುಂಬಾ ನೈಜವಾಗಿ ಮೂಡಿ ಬಂದಿದೆ. ಚಿತ್ರದ ಕ್ಲೈಮ್ಯಾಕ್ಸ್ ಪರಿಣಾಮಕಾರಿಯಾಗಿದೆ. ಇಬ್ಬರು ತುಂಬಾ ಚೆನ್ನಾಗಿ ಅಭಿನಯ ಮಾಡಿದ್ದಾರೆ. ಇಬ್ಬರಲ್ಲೂ ಆ ಮುಗ್ದತೆ ಇದೆ. ರಿಂಕು ರಾಜ್ ಗುರು ಈಗಾಗಲೇ ಮರಾಠಿಯಲ್ಲಿ ಅಭಿನಯಿಸಿ ಗುರುತಿಸಿಕೊಂಡಿದ್ದಾರೆ. ರಾಕ್ ಲೈನ್ ವೆಂಕಟೇಶ್ ಅವರು ಒಂದೊಳ್ಳೆ ಸಿನಿಮಾ ಕೊಟ್ಟಿದ್ದಾರೆ. ಎಸ್.ನಾರಾಯಣ್ ಅವರು 'ಚೆಲುವಿನ ಚಿತ್ತಾರ'ದ ನಂತರ ಅಂತಹದ್ದೇ ಮತ್ತೊಂದು ಸಿನಿಮಾ ಮಾಡಿದ್ದಾರೆ'' ಎಂದು 'ಮನಸು ಮಲ್ಲಿಗೆ' ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Kannada Actor Yash Talk About Manasu Mallige

ಅಂದ್ಹಾಗೆ, 'ಮನಸು ಮಲ್ಲಿಗೆ' ಮರಾಠಿಯ ಸೈರಾಟ್ ಚಿತ್ರದ ರೀಮೇಕ್. ಕಲಾ ಸಾಮ್ರಾಟ್ ಎಸ್.ನಾರಾಯಣ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದಾರೆ. ಇನ್ನು ಮೂಲ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ರಿಂಕು ರಾಜ್ ಗುರು ಕನ್ನಡದಲ್ಲೂ ನಾಯಕಿಯಾಗಿ ಕಾಣಿಸಿಕೊಂಡಿದ್ರೆ, ಬಹುಭಾಷಾ ನಟ ಸತ್ಯ ಪ್ರಕಾಶ್ ಅವರು ಮಗ ನಿಶಾಂತ್ ಈ ಚಿತ್ರದ ಮೂಲಕ ನಾಯಕನಾಗಿ ಬೆಳ್ಳಿತೆರೆಗೆ ಕಾಲಿಟ್ಟಿದ್ದಾರೆ.

English summary
Kannada Actor Yash Watched Kannada Movie 'Manasu Mallige' and Expressed Appreciation for Actors.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada