For Quick Alerts
  ALLOW NOTIFICATIONS  
  For Daily Alerts

  'ಚಿತ್ರಮಂದಿರಕ್ಕೆ ಮತ್ತೆ ಬನ್ನಿ ಸಂಭ್ರಮಿಸೋಣ' ಎಂದು ಆಹ್ವಾನಿಸಿದ ಸ್ಟಾರ್ ನಟರು

  |

  ''ನೂರು ವರುಷಗಳ ಇತಿಹಾಸವಿರುವ ಸಿನಿಮಾ ಇಂದಲ್ಲ ನಾಳೆ ತೆರೆ ಕಾಣಲೇಬೇಕು.....ಚಿತ್ರಮಂದರಿಗಳು ವಿಜೃಂಬಿಸಲೇಬೇಕು...'' ಎನ್ನುತ್ತಿರುವ ಚಿತ್ರರಂಗ ಜನರನ್ನು ಥಿಯೇಟರ್‌ ಕಡೆಗೆ ಸೆಳೆಯುವ ಪ್ರಯತ್ನ ಮಾಡ್ತಿದೆ.

  ಕೊರೊನಾ ವೈರಸ್‌ ಕಾರಣದಿಂದ ಆರೇಳು ತಿಂಗಳು ಚಿತ್ರಮಂದಿರಗಳು ಮುಚ್ಚಿದ್ದವು. ಸುಮಾರು ದಿನಗಳ ನಂತರ ಮತ್ತೆ ತೆರೆದಿದೆ. ಆದ್ರೆ, ಪ್ರೇಕ್ಷಕರ ಕೊರತೆ ಎದುರಾಗಿದೆ. ಕೊರೊನಾ ಭಯದಿಂದ ಮೊದಲಿನಂತೆ ಜನರು ಬರ್ತಿಲ್ಲ, ಹೌಸ್‌ಪುಲ್ ಪ್ರದರ್ಶನ ಕಾಣ್ತಿಲ್ಲ, ಆದ್ದರಿಂದ ಹೊಸ ಸಿನಿಮಾಗಳನ್ನು ರಿಲೀಸ್ ಮಾಡಲು ನಿರ್ಮಾಪಕರು ಹಿಂದೇಟು ಹಾಕುತ್ತಿದ್ದಾರೆ.

  ಬೇಡಿಕೆ ಈಡೇರಿಸುವ ವರೆಗೆ ಚಿತ್ರಪ್ರದರ್ಶನ ಇಲ್ಲ: ಚಿತ್ರ ಪ್ರದರ್ಶಕರ ಮಂಡಳಿಬೇಡಿಕೆ ಈಡೇರಿಸುವ ವರೆಗೆ ಚಿತ್ರಪ್ರದರ್ಶನ ಇಲ್ಲ: ಚಿತ್ರ ಪ್ರದರ್ಶಕರ ಮಂಡಳಿ

  ಇದೀಗ, ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನು ಕರೆತರುವ ಪ್ರಯತ್ನಕ್ಕೆ ಸ್ಟಾರ್ ನಟರು ಕೈ ಜೋಡಿಸಿದ್ದಾರೆ. 'ಚಿತ್ರಮಂದಿರಕ್ಕೆ ಮತ್ತೆ ಬನ್ನಿ ಸಂಭ್ರಮಿಸೋಣ' ಎಂಬ ಹೆಸರಿನಲ್ಲಿ ಸ್ಯಾಂಡಲ್ ವುಡ್ ಸ್ಟಾರ್‌ಗಳು ಅಭಿಮಾನ ಆರಂಭಿಸಿದ್ದಾರೆ.

  ಈ ಕುರಿತು ಕೆಆರ್‌ಜಿ ಸ್ಟುಡಿಯೋಸ್ ವಿಡಿಯೋವೊಂದನ್ನು ನಿರ್ಮಿಸಿದ್ದು, ಶಿವರಾಜ್ ಕುಮಾರ್, ದುನಿಯಾ ವಿಜಯ್, ಪುನೀತ್ ರಾಜ್ ಕುಮಾರ್, ಧನಂಜಯ್, ಶ್ರೀಮುರಳಿ ಹಾಗೂ ಗಣೇಶ್ ಪ್ರೇಕ್ಷಕರನ್ನು ಆಹ್ವಾನಿಸಿದ್ದಾರೆ.

  ವಿಡಿಯೋದಲ್ಲಿ ಏನಿದೆ?

  ಲಾಕ್‌ಡೌನ್ ಮುಗಿದ ನಂತರ ಥಿಯೇಟರ್ ಮಾಲೀಕರು ಚಿತ್ರಮಂದಿರ ಪುನರಾರಂಭಿಸುತ್ತಾರೆ. ಲಾಕ್‌ಡೌನ್‌ಗೂ ಮೊದಲು ಇದ್ದಂತೆ ಪರಿಸ್ಥಿತಿ ಮತ್ತೆ ಸಾಧ್ಯನಾ? ಪ್ರೇಕ್ಷಕರು, ಆ ಸಂಭ್ರಮ, ಪಟಾಕಿ, ಕುಣಿತ ಎಲ್ಲವೂ ನೋಡಲು ಸಾಧ್ಯನಾ ಎಂದು ಆ ಮಾಲೀಕ ಪ್ರಶ್ನಿಸಿಕೊಳ್ಳುತ್ತಾನೆ. ಮೊದಲಿನಂತೆ ಪ್ರೇಕ್ಷಕರು ಬರ್ತಾರೆ ಎನ್ನುವ ಆತ್ಮವಿಶ್ವಾಸವನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ.

  English summary
  Dr Shiva rajkumar, puneeth rajkumar, duniya vijay, ganesh, srimurali has request audience to come to filmtheaters.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X