For Quick Alerts
  ALLOW NOTIFICATIONS  
  For Daily Alerts

  ಭೈರವನಾದ 'ಡಾಲಿ'ಗೆ ಉಘೇ ಎಂದ ಚಂದನವನ

  By Pavithra
  |
  ಧನಂಜಯ ಭೈರವ ಲುಕ್‌ಗೆ ಫಿದಾ ಆದ ಸ್ಯಾಂಡಲ್‌ವುಡ್ ತಾರೆಯರು..!

  ಧನಂಜಯ ಐದು ವರ್ಷದ ಹಿಂದೆ ಯಾವುದೇ ಗಾಡ್ ಫಾದರ್ ಇಲ್ಲದೆ ಕನ್ನಡ ಸಿನಿಮಾರಂಗದಲ್ಲಿ ಏನಾದರೂ ಸಾಧಿಸಬೇಕು ಎಂದು ಡೈರೆಕ್ಟರ್ ಸ್ಪೆಷಲ್ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದ ನಟ.

  ಅಲ್ಲಿಂದ ಇಲ್ಲಿಯ ವರೆಗೂ ಸಾಕಷ್ಟು ಚಿತ್ರಗಳ ಮೂಲಕ ವಿಭಿನ್ನ ಸಿನಿಮಾಗಳಲ್ಲಿ ಅಭಿನಯ ಮಾಡುತ್ತಾ ಬಂದ ಧನಂಜಯ ಅಭಿನಯದ 'ಟಗರು' ಸಿನಿಮಾ ಪ್ರೇಕ್ಷಕರಿಗೆ ಹೆಚ್ಚು ಕಾಡಿದ್ದು. ಇಷ್ಟು ವರ್ಷಗಳ ಕಾಲ ಸ್ಪೆಷಲ್ ಸ್ಟಾರ್ ಆಗಿದ್ದ ಧನಂಜಯ ಈಗ ನಟ ರಾಕ್ಷಸ, ಡಾಲಿ ಅಂತಾನೇ ಪ್ರಖ್ಯಾತಿ ಪಡೆದುಕೊಂಡರು.

  ರಗಡ್ ಲುಕ್ ನಲ್ಲಿ 'ಭೈರವ'ನ ದರ್ಶನರಗಡ್ ಲುಕ್ ನಲ್ಲಿ 'ಭೈರವ'ನ ದರ್ಶನ

  'ಟಗರು' ಚಿತ್ರವೇ ಟಾಲಿವುಡ್ ನಲ್ಲಿಯೂ ಧನಂಜಯನನ್ನು ಗುರುತಿಸಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ. ಸದ್ಯ ಧನಂಜಯ ಟಾಲಿವುಡ್ ಅಂಗಳಕ್ಕೆ ಪರಿಚಿತನಾಗುತ್ತಿದ್ದು ಹೆಸರಾಂತ ನಿರ್ದೇಶಕ ಹಾಗೂ ನಿರ್ಮಾಪಕ ರಾಮ್ ಗೋಪಾಲ್ ವರ್ಮ ಡಾಲಿಯನ್ನು ತಮ್ಮ ಚಿತ್ರದ ಮೂಲಕ ತೆಲುಗು ಸಿನಿಮಾರಂಗಕ್ಕೆ ಇಂಟ್ರಡ್ಯೂಸ್ ಮಾಡುತ್ತಿದ್ದಾರೆ. 'ಭೈರವ ಗೀತಾ' ಎನ್ನುವ ಚಿತ್ರದಲ್ಲಿ ಡಾಲಿ ಅಭಿನಯ ಮಾಡುತ್ತಿದ್ದು ಚಿತ್ರದಲ್ಲಿನ ಧನಂಜಯನ ಲುಕ್ ರಿವಿಲ್ ಆಗಿದೆ. ಗಾಂಧಿನಗರದ ಮಂದಿ ಭೈರವನ ಅವತಾರಕ್ಕೆ ಉಘೇ ಎಂದಿದ್ದಾರೆ.ಮುಂದೆ ಓದಿ..

  ಭೈರವನ ಅವತಾರ ಮೆಚ್ಚಿದ ಪ್ರಿಯಾಂಕ

  ನಟಿ ಪ್ರಿಯಾಂಕ ಉಪೇಂದ್ರ, ಧನಂಜಯ ಅವರ 'ಭೈರವ ಗೀತಾ' ಸಿನಿಮಾದ ಲುಕ್ ಇಷ್ಟ ಪಟ್ಟಿದ್ದಾರೆ. ಟ್ವಿಟ್ಟರ್ ಮೂಲಕ ಸಿನಿಮಾತಂಡ ಹಾಗೂ ಧನಂಜಯ ಮತ್ತು ಆರ್ ಜಿ ವಿ ಗೆ ಶುಭಾಶಯ ಕೋರಿದ್ದಾರೆ.

  ಕನಸು ನನಸಾದ ಖುಷಿ

  ಸಿನಿಮಾರಂಗದಲ್ಲಿ ಧನಂಜಯ ಅವರಿಗೆ ಒಳ್ಳೆಯ ಸ್ನೇಹಿತನಾಗಿರುವ ನಟ ವಸಿಷ್ಠ ಎನ್ ಸಿಂಹ ದೋಸ್ತಿಯ ಬೆಳವಣಿಗೆಗೆ ಸಂತಸ ವ್ಯಕ್ತ ಪಡಿಸಿದ್ದಾರೆ. "ಫಸ್ಟ್ ಲುಕ್ ಸ್ಟನ್ನಿಂಗ್ ಆಗಿದೆ. ನಿನ್ನ ಕನಸು ನನಸಾಯ್ತು. ಅದರ ಜೊತೆಯಲ್ಲಿ ಫಿಲ್ಮ್ ಫೇರ್ ಅವಾರ್ಡ್ ಬಂದಿದಕ್ಕೆ ಶುಭಾಶಯಗಳು" ಎಂದಿದ್ದಾರೆ.

  ಶಿಷ್ಯನಿಗೆ ಸಿಕ್ಕಿತು ಗುರುವಿನ ಆಶೀರ್ವಾದ

  ಶಿಷ್ಯನಿಗೆ ಸಿಕ್ಕಿತು ಗುರುವಿನ ಆಶೀರ್ವಾದ

  ಡಾಲಿ.. ಸದಾ ಹೇಳಿಕೊಳ್ಳುವಂತೆ ಅವರ ಗುರುಗಳಾದ ಮೈಮ್ ರಮೇಶ್ ಕೂಡ ಡಾಲಿಯ ಏಳಿಗೆಗೆ ಶುಭ ಹಾರೈಸಿದ್ದಾರೆ. "ನಿನಗೆ ಸೈಮಾ ಅವಾರ್ಡ್ ಸಿಕ್ಕಿದೆ, ಫಿಲ್ಮ್ ಫೇರ್ ಕೂಡ ಸಿಕ್ಕಿದೆ. ಮುಂದಿನ ದಿನಗಳಲ್ಲಿ ನ್ಯಾಷನಲ್ ಅವಾರ್ಡ್ ಕೂಡ ಸಿಗಲಿದೆ. ನೀನು ಮತ್ತೊಬ್ಬ ನಾನಾ ಪಟೇಕರ್ ಮತ್ತು ಮೋಹನ್ ಲಾಲ್ ಆಗುತ್ತೀಯ, ನನಗೆ ನಂಬಿಕೆ ಇದೆ ನೀನು ಆ ಮಟ್ಟಕೆ ಹೋಗುತ್ತಿಯ. ಗುರು ತಂದೆಯ ಸಮಾನ ನನ್ನ ಆಶೀರ್ವಾದ ಸದಾ ನಿನ್ನ ಮೇಲೆ ಇರುತ್ತೆ ನಿನ್ನ ಕನಸನ್ನು ಬೆನ್ನತ್ತಿ ಹೋಗು, ಶುಭಾಶಯಗಳು ಎಂದಿದ್ದಾರೆ.

  ನಿರ್ಮಾಪಕರ ಮನಸ್ಸಿನಲ್ಲಿ ಡಾಲಿ

  ನಿರ್ಮಾಪಕರ ಮನಸ್ಸಿನಲ್ಲಿ ಡಾಲಿ

  ಕೇವಲ ಕಲಾವಿದರು ಮಾತ್ರವಲ್ಲದೆ ಕನ್ನಡ ಸಿನಿಮಾ ನಿರ್ಮಾಪಕರು ಕೂಡ ಧನಂಜಯ ತೆಲುಗು ಸಿನಿಮಾ ಲುಕ್ ನೋಡಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಒಟ್ಟಾರೆ ಕನ್ನಡದ ಪ್ರತಿಭೆ ಪರಭಾಷೆ ನೆಲದಲ್ಲಿ ಮಿಂಚುತ್ತಿರುವುದು ಅಭಿಮಾನಿಗಳಿಗೆ ಮಾತ್ರವಲ್ಲದೆ ಕನ್ನಡ ಚಿತ್ರರಂಗದವ್ರಿಗೂ ಖುಷಿ ತಂದಿದೆ.

  English summary
  Kannada film artist and producers liked Dhananjaya's Telugu Bhairava ​​Geetha movie first look. Bhairava Geetha is being produced by Ram Gopal Varma.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X