»   » ಒಂದೇ ಚಿತ್ರದಲ್ಲಿ ಪುನೀತ್, ಉಪೇಂದ್ರ, ಸುದೀಪ್ ಅಭಿನಯ

ಒಂದೇ ಚಿತ್ರದಲ್ಲಿ ಪುನೀತ್, ಉಪೇಂದ್ರ, ಸುದೀಪ್ ಅಭಿನಯ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಪವರ್ ಸ್ಟಾರ್, ಅಭಿನಯ ಚಕ್ರವರ್ತಿ ಹಾಗೂ ರಿಯಲ್ ಸ್ಟಾರ್ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ ಅನ್ನುವ ಸುದ್ದಿಗಳು ಬಹಳ ದಿನಗಳಿಂದ ಹರಿದಾಡುತ್ತಲೇ ಇತ್ತು. ಚಿತ್ರ ನಿರ್ದೇಶಕರಾಗಲಿ ಅಥವಾ ನಿರ್ಮಾಪಕರಾಗಲಿ ಈ ಸುದ್ದಿಯ ಬಗ್ಗೆ ಯಾರು ಮಾತನಾಡಿರಲಿಲ್ಲ. ಆದರೆ ಈಗ ಈ ಗಾಸಿಪ್ ಸುದ್ದಿಗೆ ಪುಷ್ಠಿ ಸಿಕ್ಕಿದೆ.

ಸಿನಿಮಾರಂಗ ಸೇರಿದಂತೆ ರಾಜಕೀಯ ರಂಗದಲ್ಲೂ ಗುರುತಿಸಿಕೊಂಡಿರುವ ನಿರ್ಮಾಪಕ ಮುನಿರತ್ನ ಈ ಮೂವರು ಸ್ಟಾರ್ ನಟರನ್ನ ಒಂದೇ ಚಿತ್ರದಲ್ಲಿ ತರುವಂತಹ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಹೌದು ಕುರುಕ್ಷೇತ್ರ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿರುವ ಮುನಿರತ್ನ ಸುದೀಪ್, ಪುನೀತ್ ಹಾಗೂ ಉಪೇಂದ್ರ ಅವರಿಗಾಗಿ ಕಥೆ ರೆಡಿಯಾಗಿದ್ದು ಚಿತ್ರದಲ್ಲಿ ಮೂರು ಜನರು ಅಭಿನಯಿಸಿದರೆ ತುಂಬಾ ಚೆನ್ನಾಗಿರುತ್ತೆ ಎಂದಿದ್ದಾರೆ.

Kannada actors Puneeth Rajkumar,Upendra and Sudeep will acting in same movie

'ಚಾಣಾಕ್ಷ ಚಂದ್ರಗುಪ್ತ' ಅನ್ನುವ ಟೈಟಲ್ ನಲ್ಲಿ ಚಿತ್ರ ನಿರ್ಮಾಣ ಮಾಡಲು ನಿರ್ಮಾಪಕ ಮುನಿರತ್ನ ತಯಾರಿ ಮಾಡಿಕೊಂಡಿದ್ದಾರಂತೆ. ಕುರುಕ್ಷೇತ್ರ ಚಿತ್ರದ ನಂತರ ಇಂಥದೊಂದು ಸಿನಿಮಾ ಮಾಡಲೇ ಬೇಕು ಎಂದು ನಿರ್ಧರಿಸಿದ್ದಾರೆ.

ಚಂದ್ರಗುಪ್ತನ ಪಾತ್ರದಲ್ಲಿ ಪುನೀತ್ ರಾಜ್ ಕುಮಾರ್, ಚಾಣಾಕ್ಷ ಪಾತ್ರದಲ್ಲಿ ನಟ ಉಪೇಂದ್ರ ಹಾಗೂ ಅಲೆಗ್ಜಾಂಡರ್ ಆಗಿ ಸುದೀಪ್ ನಟಿಸಬೇಕು ಎನ್ನುವ ಆಸೆಯನ್ನೂ ಒಂದಿದ್ದಾರೆ.

Kannada actors Puneeth Rajkumar,Upendra and Sudeep will acting in same movie

ಸದ್ಯ ಕತೆಯನ್ನ ತಯಾರಿ ಮಾಡಿಕೊಳ್ಳುತ್ತಿದ್ದು ಚಿತ್ರದ ಬಗ್ಗೆ ಜೂನ್ ಅಥವಾ ಜುಲೈನಲ್ಲಿ ಸುದ್ದಿ ಕೊಡಲಿದ್ದಾರಂತೆ. ಸಿನಿಮಾವನ್ನ ಯಾರು ನಿರ್ದೇಶನ ಮಾಡುತ್ತಾರೆ ಅನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಆದರೆ 'ಚಾಣಾಕ್ಷ ಚಂದ್ರಗುಪ್ತ' ಹೆಸರಿನಲ್ಲಿ ಚಿತ್ರ ಸೆಟ್ಟೇರುವು ಗ್ಯಾರೆಂಟಿ ಅನ್ನೋದನ್ನ ತಿಳಿಸಿದ್ದಾರೆ ಮುನಿರತ್ನ.

ಒಟ್ಟಾರೆ ಬಹಳ ದಿನದಿಂದ ಮೂರು ಸ್ಟಾರ್ ಗಳನ್ನ ಒಟ್ಟಿಗೆ ತೆರೆ ಮೇಲೆ ನೋಡಬೇಕು ಎಂದು ಆಸೆ ಪಟ್ಟಿದ್ದ ಅಭಿಮಾನಿಗಳಿಗೆ ಹೊಸ ವರ್ಷಕ್ಕೆ ಸಿಹಿ ಸುದ್ದಿ ನೀಡಿದ್ದಾರೆ ಮುನಿರತ್ನ.

English summary
Kannada actors Puneeth Rajkumar,Upendra and Sudeep will acting in same movie. Film producer Muniratnam has prepared for production.The movie is named 'Chanakshya Chandragupta'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X