For Quick Alerts
  ALLOW NOTIFICATIONS  
  For Daily Alerts

  ಕನ್ನಡ ನಟರಿಂದ ತುಳು ಭಾಷೆಯ ಅಭಿಯಾನಕ್ಕೆ ಬಲ ಬಂತು

  |

  Recommended Video

  ತುಳು ಭಾಷೆಯ ಅಭಿಯಾನಕ್ಕೆ ಬಲ ಬಂತು | FILMIBEAT KANNADA

  ತುಳು ಭಾಷೆಗೆ ಅಧಿಕೃತ ಮಾನ್ಯತೆ ಸಿಗಬೇಕು ಎನ್ನುವ ಕೋರಿಕೆ ಅನೇಕ ವರ್ಷಗಳಿಂದ ಇದೆ. ಈಗ ಈ ಅಭಿಯಾನ ಸೋ‍ಷಿಯಲ್ ಮೀಡಿಯಾಗೆ ಬಂದಿದೆ. ಒಂದು ವಾರ ಹಿಂದೆ ಶುರುವಾದ ಅಭಿಯಾನಕ್ಕೆ ಕನ್ನಡ ನಟರು ಬಲ ತುಂಬಿದ್ದಾರೆ.

  ನಟ ಶಿವರಾಜ್ ಕುಮಾರ್, ಜಗ್ಗೇಶ್, ರಕ್ಷಿತ್ ಶೆಟ್ಟಿ, ನಿರೂಪ್ ಭಂಡಾರಿ, ನಿರ್ದೇಶಕ ರಿಷಬ್ ಶೆಟ್ಟಿ, ಸಿಂಪಲ್ ಸುನಿ, ಅನೂಪ್ ಭಂಡಾರಿ ಸೇರಿದಂತೆ ಸಾಕಷ್ಟು ಕಲಾವಿದರು ಈ ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ. #TuluOfficial ಹಾಗೂ #TuluOfficialinKA_KL ಹ್ಯಾಶ್ ಟ್ಯಾಗ್ ಮೂಲಕ ಟ್ವೀಟ್ ಮಾಡುತ್ತಿದ್ದಾರೆ.

  ಆಗಸ್ಟ್ 10 ರಂದು ಮತ್ತೊಮ್ಮೆ ತುಳು ಭಾಷೆ ಮಾನ್ಯತೆಗಾಗಿ ಟ್ವೀಟ್ ಅಭಿಯಾನ

  ''ತುಳು ಭಾಷೆಯ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ'' ಎಂದು ವಿಡಿಯೋ ಮೂಲಕ ಶಿವಣ್ಣ ಹೇಳಿದ್ದಾರೆ.

  ಕರಾವಳಿ ಭಾಗದ ನಟರೇ ಆಗಿರುವ ರಕ್ಷಿತ್ ಶೆಟ್ಟಿ ''ನಮ್ಮ ಭಾಷೆ ಮತ್ತು ಸಂಸ್ಕೃತಿ ವಿಚಾರದಲ್ಲಿ ನಾನು ನಿಮ್ಮ ಜೊತೆಗೆ ಎಂದಿಗೂ ಇರುತ್ತೇನೆ. ಸೋಷಿಯಲ್ ಮೀಡಿಯಾ ಮಾತ್ರವಲ್ಲದೆ, ತುಳು ಸಮುದಾಯ ಮುಂದೆ ಬಂದು ಈ ಅಭಿಯಾನ ನಡೆಸಬೇಕು'' ಎಂದು ತಿಳಿದಿದ್ದಾರೆ.

  ತುಳು ಒಂದು ವರ್ಗದ ಭಾಷೆಯಾಗಿದ್ದು, ಅದಕ್ಕೆ ಅದರದ್ದೆ ಆದ ಇತಿಹಾಸ ಇದೆ. ಹೀಗಾಗಿ, ವಿಭಿನ್ನ ಸಂಸ್ಕೃತಿ ಹೊಂದಿರುವ ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡಬೇಕು ಎನ್ನುವುದು ಅಲ್ಲಿಯ ಭಾಗದ ಜನರ ಒತ್ತಾಯವಾಗಿದೆ.

  English summary
  Kannada actors supports for Tulu language campaign.
  Tuesday, September 10, 2019, 14:02
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X