For Quick Alerts
  ALLOW NOTIFICATIONS  
  For Daily Alerts

  ನಮ್ಮ ಪ್ರೀತಿಯ ಸ್ಟಾರ್ ನಟರಿಗೆ ಸಿಕ್ಕ ಹೊಸ ಬಿರುದುಗಳಿವು

  |
  ನಮ್ಮ ಪ್ರೀತಿಯ ಸ್ಟಾರ್ ನಟರಿಗೆ ಸಿಕ್ಕ ಹೊಸ ಬಿರುದುಗಳಿವು..! | FILMIBEAT KANNADA

  ಸಿನಿಮಾ ನಟರಿಗೆ ಸಾಕಷ್ಟು ಬಿರುದುಗಳು ಇರುತ್ತದೆ. ಸಿನಿಮಾ ನೋಡುವ ಅಭಿಮಾನಿಗಳು ಪ್ರೀತಿಯಿಂದ ತಮ್ಮ ಸ್ಟಾರ್ ಗಳಿಗೆ ಹೊಸ ಹೊಸ ಬಿರುದುಗಳ ಮೂಲಕ ಕರೆಯುತ್ತಾರೆ. ಇದೀಗ, ಕನ್ನಡದ ಸ್ಟಾರ್ ಗಳಿಗೆ ಹೊಸ ಬಿರುದುಗಳು ಸಿಕ್ಕಿವೆ.

  ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಆಗಿರುವ ಶಿವರಾಜ್ ಕುಮಾರ್, ಚಾಲೆಂಜಿಂಗ್ ಸ್ಟಾರ್ ಆಗಿರುವ ದರ್ಶನ್, ಅಭಿನಯ ಚಕ್ರವರ್ತಿ ಸುದೀಪ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಪ್ರಣಯ ರಾಜ ಶ್ರೀನಾಥ್ ಅವರಿಗೆ ಇತ್ತೀಚಿಗೆ ಹೊಸ ಬಿರುದುಗಳ ದಕ್ಕಿವೆ.

  'ಭರತ ಚಕ್ರವರ್ತಿ'ಯಾದ ಕರುನಾಡ ಚಕ್ರವರ್ತಿ ಶಿವಣ್ಣ

  ಅಂದಹಾಗೆ, ಕನ್ನಡದ ಈ ನಟರಿಗೆ ಸಿಕ್ಕ ಹೊಸ ಬಿರುದುಗಳು ಯಾವುವು ಎಂಬ ವಿವರ ಮುಂದಿದೆ ಓದಿ...

  'ಬಾದ್ ಶಾ' ಆದ ಕಿಚ್ಚ

  'ಬಾದ್ ಶಾ' ಆದ ಕಿಚ್ಚ

  ನಟ ಸುದೀಪ್, ಕಿಚ್ಚ ಹಾಗೂ ಅಭಿನಯ ಚಕ್ರವರ್ತಿ ಎಂದು ಕರೆಸಿಕೊಳ್ಳುತ್ತಾರೆ. ಅವುಗಳ ಜೊತೆಗೆ ಈಗ ಈ ನಟನಿಗೆ ಮತ್ತೊಂದು ಟೈಟಲ್ ಸಿಕ್ಕಿದೆ. ಇನ್ನು ಮುಂದೆ ಸುದೀಪ್ ಸ್ಯಾಂಡಲ್ ವುಡ್ 'ಬಾದ್ ಶಾ' ಆಗಿದ್ದಾರೆ. 'ಪೈಲ್ವಾನ್' ಚಿತ್ರತಂಡ ಈ ಬಿರುದನ್ನು ಸುದೀಪ್ ಅವರಿಗೆ ನೀಡಲಾಗಿದೆ.

  ಕಿಚ್ಚ ಸುದೀಪ್ ಗೆ ಹೊಸ ಬಿರುದು ನೀಡಿದ 'ಪೈಲ್ವಾನ್' ತಂಡ

  'ಕರುನಾಡ ಕಲಾ ಕುಲತಿಲಕ' ದರ್ಶನ್

  'ಕರುನಾಡ ಕಲಾ ಕುಲತಿಲಕ' ದರ್ಶನ್

  ನಟ ದರ್ಶನ್ ಕೆಲ ದಿನಗಳ ಹಿಂದೆ ಕತಾರ್ ನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರಿಗೆ 'ಕರುನಾಡ ಕಲಾ ಕುಲತಿಲಕ' ಎಂಬ ಹೊಸ ಬಿರುದು ನೀಡಿ ಗೌರವ ಸಲ್ಲಿಸಲಾಗಿದೆ. ಇದಕ್ಕೂ ಮುಂಚೆ 'ಮೈಸೂರು ರತ್ನ' ಹಾಗೂ 'ಶತಸೋದರಾಗ್ರಜಾ ಶರವೀರ' ಎಂಬ ಬಿರುದನ್ನು ಸಹ ಅವರು ಪಡೆದಿದ್ದಾರೆ.

  ವಿದೇಶದಲ್ಲಿ ನಟ ದರ್ಶನ್, ಸೃಜನ್ ಗೆ ಗೌರವ

  ಶಿವಣ್ಣ 'ಭರತ ಚಕ್ರವರ್ತಿ'

  ಶಿವಣ್ಣ 'ಭರತ ಚಕ್ರವರ್ತಿ'

  ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಸೇರಿದಂತೆ ಶಿವರಾಜ್ ಕುಮಾರ್ ಅವರಿಗೆ ಸಾಕಷ್ಟು ಬಿರುದುಗಳನ್ನು ಫ್ಯಾನ್ಸ್ ನೀಡಿದ್ದಾರೆ. 'ಟಗರು' ಸಿನಿಮಾ ಯಶಸ್ವಿ ನೂರು ದಿನಗಳು ಪೂರೈಸಿದ ವೇಳೆ 'ಟಗರು' ಚಿತ್ರತಂಡ ಹಾಗೂ ಅಭಿಮಾನಿಗಳು 'ಭರತ ಚಕ್ರವರ್ತಿ' ಎಂಬ ಬಿರುದನ್ನು ಶಿವಣ್ಣನಿಗೆ ಕೊಟ್ಟಿದ್ದರು.

  'ರಾಜರತ್ನ' ಪುನೀತ್

  'ರಾಜರತ್ನ' ಪುನೀತ್

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 'ರಾಜರತ್ನ' ಆಗಿದ್ದು, 'ರಾಜಕುಮಾರ' ಚಿತ್ರದಿಂದ. 'ರಾಜಕುಮಾರ' ಚಿತ್ರತಂಡ ಪ್ರೀತಿಯಿಂದ ಅಪ್ಪುಗೆ 'ರಾಜರತ್ನ' ಎಂದು ಕರೆದಿತ್ತು. ರಾಜಣ್ಣನ ಕಿರಿಯ ಮಗನ ಈ ಬಿರುದು ಅಭಿಮಾನಿಗಳಿಗೆ ಬಹಳ ಇಷ್ಟ ಆಯ್ತು. ಅಂದಹಾಗೆ, 'ರಾಜರತ್ನ' ಈಗ 'ಯುವರತ್ನ' ಹೆಸರಿನಲ್ಲಿ ಸಿನಿಮಾ ಮಾಡುತ್ತಿದ್ದಾರೆ.

  'ಅಭಿನಯ ಮಾಣಿಕ್ಯ' ಶ್ರೀನಾಥ್

  'ಅಭಿನಯ ಮಾಣಿಕ್ಯ' ಶ್ರೀನಾಥ್

  ಈ ವರ್ಷ ಅಮೇರಿಕಾದಲ್ಲಿ ನಡೆದ ಅಕ್ಕ ಸಮ್ಮೇಳನದಲ್ಲಿ ಹಿರಿಯ ನಟ ಶ್ರೀನಾಥ್ ಭಾಗಿಯಾಗಿದ್ದರು. ಇದೇ ಕಾರ್ಯಕ್ರಮದಲ್ಲಿ ಅವರಿಗೆ ಹೊಸ ಬಿರುದು ನೀಡಿ ಗೌರವ ಸಮರ್ಪಣೆ ಮಾಡಲಾಗಿತ್ತು. ಕಳೆದ 50 ವರ್ಷಗಳಿಂದ ಚಿತ್ರರಂಗದಲ್ಲಿ ಅವರು ಮಾಡಿರುವ ಸಾಧನೆಯನ್ನು ಗಮನಿಸಿ 'ಅಭಿನಯ ಮಾಣಿಕ್ಯ' ಎಂಬ ಬಿರುದನ್ನು ನೀಡಲಾಗಿತ್ತು.

  English summary
  Kannada actors titles honored with new titles.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X