»   » ಸಿನಿಮಾ ಮಾಡಿ ಬೋರ್ ಆಯ್ತು ಎಂದ್ರಾ ಅಮೂಲ್ಯ?

ಸಿನಿಮಾ ಮಾಡಿ ಬೋರ್ ಆಯ್ತು ಎಂದ್ರಾ ಅಮೂಲ್ಯ?

Written By:
Subscribe to Filmibeat Kannada

ಟೈಟಲ್ ನೋಡಿದ ತಕ್ಷಣ ಶಾಕ್ ಆದ್ರಾ?, ಹೌದು ಅಮೂಲ್ಯ ಅವರು ಬೋರ್ ಆಯ್ತು ಅಂದಿದ್ದೇನು ನಿಜ, ಆದರೆ ಸಿನಿಮಾ ಮಾಡಿ ಬೊರಾಗಿದ್ದಲ್ಲ, ಬದ್ಲಾಗಿ ಅವರಿಗೆ ಸಿನಿಮಾಗಳಲ್ಲಿ ಬಜಾರಿ ಪಾತ್ರ ಮಾಡಿ ಬೋರ್ ಆಯ್ತಂತೆ.

ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕೆ ಕೈ ತುಂಬಾ ಪ್ರಾಜೆಕ್ಟ್ ಹಿಡಿದು ಓಡಾಡುತ್ತಿರುವ ನಟಿಯರ ಸಾಲಿಗೆ ಹೊಸದಾಗಿ ಅಭಿಮಾನಿಗಳ ಅಚ್ಚುಮೆಚ್ಚಿನ ಬೇಬಿ ಡಾಲ್ ಅಮೂಲ್ಯ ಅವರು ಸೇರ್ಪಡೆಗೊಳ್ಳುತ್ತಾರೆ.[ಗೆಳತಿಯರೊಂದಿಗೆ 'ಬೆಣ್ಣೆ ದೋಸೆ' ತಿಂದ 'ಬೇಬಿ ಡಾಲ್' ಅಮೂಲ್ಯ]


Kannada Actress Amoolya wants to have a break

ಬಾಲ ನಟಿಯಾಗಿ ಚಿತ್ರರಂಗದಲ್ಲಿ ಕಾಣಿಸಿಕೊಳ್ಳಲು ಆರಂಭ ಮಾಡಿದ ಅಮೂಲ್ಯ ತದನಂತರ 'ಚೆಲುವಿನ ಚಿತ್ತಾರ' ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಸ್ಕೂಲ್ ಹುಡುಗಿ ಪಾತ್ರದಲ್ಲಿ ಮಿಂಚಿದ್ದರು.


Kannada Actress Amoolya wants to have a break

ನಂತರ ಚಿಕ್ಕ ಹುಡುಗಿಯ ಪಾತ್ರದ ಇಮೇಜ್ ನಿಂದ ಹೊರಬರಲು ಬಜಾರಿ ಪಾತ್ರಗಳನ್ನು ಮಾಡಲು ಆರಂಭಿಸಿದರು. 'ಮಳೆ', 'ಮದುವೆಯ ಮಮತೆಯ ಕರೆಯೋಲೆ' ಮತ್ತು 'ಕೃಷ್ಣ ರುಕ್ಕು' [ವಿಮರ್ಶೆ: ಉಡಾಫೆ ಕೃಷ್ಣ, ಬಜಾರಿ ರುಕ್ಕು ಕಥೆ ಚೆನ್ನಾಗಿದೆ] ಮುಂತಾದ ಸಿನಿಮಾಗಳಲ್ಲಿ 'ಸಂಪತ್ತಿಗೆ ಸವಾಲ್' ಮಂಜುಳಾ ಅವರ ತರ ನಟಿಸಿ ಅಭಿಮಾನಿಗಳಿಂದ 'ಮಾಡರ್ನ್ ಮಂಜುಳ' ಎಂಬ ಬಿರುದು ಗಿಟ್ಟಿಸಿಕೊಂಡರು.


Kannada Actress Amoolya wants to have a break

ಇದೀಗ ಇಂತಹ ಬಜಾರಿ ಪಾತ್ರಗಳನ್ನು ಮಾಡಿ ಮಾಡಿ ಬೋರಾಗಿರುವ ಬೇಬಿ ಡಾಲ್ ಅಮೂಲ್ಯ ಅವರಿಗೆ ಕೊಂಚ ಬ್ರೇಕ್ ಬೇಕಾಗಿದೆಯಂತೆ. ಅದಕ್ಕಾಗಿ ಇನ್ನುಮುಂದೆ ಬಜಾರಿ ಪಾತ್ರಗಳು ಇರುವಂತಹ ಸಿನಿಮಾಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದಿದ್ದಾರೆ.[ಗಂಡುಬೀರಿಯಾದ ಚಿತ್ತಾರದ ಬೆಡಗಿ 'ಅಮೂಲ್ಯ']


Kannada Actress Amoolya wants to have a break

ಸ್ಕ್ರಿಪ್ಟ್ ಮತ್ತು ಪಾತ್ರಗಳ ಆಯ್ಕೆಯಲ್ಲಿ ಸಖತ್ ಚ್ಯೂಸಿಯಾಗಿರುವ ನಟಿ ಅಮೂಲ್ಯ ಅವರು ಮುಂಬರುವ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳನ್ನು ಮಾಡಬೇಕೆಂಬ ನಿರೀಕ್ಷೆಯಲ್ಲಿದ್ದಾರೆ.['ಮಾಸ್ತಿ ಗುಡಿ'ಯಲ್ಲಿ ದುನಿಯಾ ವಿಜಯ್ ಜೊತೆ ಅಮೂಲ್ಯ ಬೇಬಿ?]


ಒಟ್ನಲ್ಲಿ ಒಂದು ಪುಟ್ಟ ಬ್ರೇಕ್ ಅಂತೂ ಖಂಡಿತ ಬೇಕು ಅಂದಿರುವ ಅಮೂಲ್ಯ ಅವರು ದುನಿಯಾ ವಿಜಯ್ ಅವರ ಬಹುನಿರೀಕ್ಷಿತ ಸಿನಿಮಾ 'ಮಾಸ್ತಿ ಗುಡಿ'ಯಲ್ಲಿ ಮತ್ತೆ ಸ್ಕೂಲ್ ಹುಡುಗಿಯಾಗಿ ಮಿಂಚಲು ಎಲ್ಲಾ ರೀತಿಯ ತಯಾರಿ ನಡೆಸುತ್ತಿದ್ದಾರೆ.

English summary
Kannada Actress Amoolya Says wants to have a small break in Rom-Com Role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada