»   » 'ಮಾಸ್ತಿ ಗುಡಿ'ಯಲ್ಲಿ ದುನಿಯಾ ವಿಜಯ್ ಜೊತೆ ಅಮೂಲ್ಯ ಬೇಬಿ?

'ಮಾಸ್ತಿ ಗುಡಿ'ಯಲ್ಲಿ ದುನಿಯಾ ವಿಜಯ್ ಜೊತೆ ಅಮೂಲ್ಯ ಬೇಬಿ?

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ಚೆಲುವಿನ ಚಿತ್ತಾರ' ಬಿಡಿಸಿದ್ದಾಯ್ತು. ರಾಕಿಂಗ್ ಸ್ಟಾರ್ ಯಶ್ ಜೊತೆಗೂಡಿ 'ಗಜಕೇಸರಿ' ಸವಾರಿ ಮಾಡಿದ್ದಾಯ್ತು. ಲವ್ಲಿ ಸ್ಟಾರ್ ಪ್ರೇಮ್ ಜೊತೆಯಲಿ 'ಮಳೆ'ಯಲಿ ನೆನೆದ ಅಮೂಲ್ಯ ಇದೀಗ 'ಬ್ಲಾಕ್ ಕೋಬ್ರಾ' ಜೋಡಿ.

ಹೌದು, 'ಮಾಸ್ತಿ ಗುಡಿ' ಸಿನಿಮಾದಲ್ಲಿ ದುನಿಯಾ ವಿಜಯ್ ಜೊತೆ ಡ್ಯುಯೆಟ್ ಹಾಡುವ ಬೆಡಗಿ ಬೇರಾರೂ ಅಲ್ಲ. ಮುದ್ದು ಮುಖದ ಚೆಲುವೆ ನಟಿ ಅಮೂಲ್ಯ. [ಇನ್ಮುಂದೆ ದುನಿಯಾ ವಿಜಯ್ 'ಸ್ಯಾಂಡಲ್ ವುಡ್ ಸೂಪರ್ ಸ್ಟಾರ್'.!]


Kannada Actress Amulya to pair up opposite Duniya Vijay in 'Maasthi Gudi'

ನಾಗಶೇಖರ್ ನಿರ್ದೇಶನದ 'ಮಾಸ್ತಿ ಗುಡಿ' ಸಿನಿಮಾ ಕಳೆದ ತಿಂಗಳಷ್ಟೇ, ದುನಿಯಾ ವಿಜಯ್ ಹುಟ್ಟುಹಬ್ಬದ ಪ್ರಯುಕ್ತ ಸೆಟ್ಟೇರ್ತು. ಈಗ ಚಿತ್ರದ ನಾಯಕಿ ಆಯ್ಕೆ ಪ್ರಕ್ರಿಯೆ ಮುಗಿದಿದೆ. ಚಿತ್ರೀಕರಣ ಸದ್ಯದಲ್ಲೇ ಶುರುವಾಗಲಿದೆ.


ಈಗಾಗಲೇ ರಿಲೀಸ್ ಆಗಿರುವ 'ಮಾಸ್ತಿ ಗುಡಿ' ಚಿತ್ರದ ಟೀಸರ್ ನಲ್ಲಿ ದುನಿಯಾ ವಿಜಯ್ ಫಾರೆಸ್ಟ್ ಆಫೀಸರ್ ಲುಕ್ ನಲ್ಲಿ ಮಿಂಚಿದ್ದಾರೆ. ಇದಲ್ಲದೇ ಮೂರು ವಿಭಿನ್ನ ಶೇಡ್ ಗಳಲ್ಲೂ ವಿಜಯ್ ಕಾಣಿಸಿಕೊಳ್ಳಲಿದ್ದಾರೆ. [75ರ ಮುದುಕನ ಪಾತ್ರದಲ್ಲಿ ದುನಿಯಾ ವಿಜಿ ಮಿಂಚಿಂಗು]


Kannada Actress Amulya to pair up opposite Duniya Vijay in 'Maasthi Gudi'

ಚಿತ್ರಕಥೆ ಬಗ್ಗೆ ನಿರ್ದೇಶಕ ನಾಗಶೇಖರ್ ಮಾತ್ರ ಎಲ್ಲೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದ್ರೂ ಅಭಿಮಾನಿಗಳು ಮಾತ್ರ 'ಮಾಸ್ತಿ ಗುಡಿ' ಸಿನಿಮಾದಲ್ಲಿ ಮೈನವಿರೇಳಿಸುವ ಸಾಹಸ ನಿರೀಕ್ಷೆ ಮಾಡುತ್ತಿದ್ದಾರೆ. [ಬರ್ತ್ ಡೇ ಬಾಯ್ ವಿಜಿಗೆ 'ಮಾಸ್ತಿ ಗುಡಿ' ಟೀಸರ್ ಗಿಫ್ಟ್]


Kannada Actress Amulya to pair up opposite Duniya Vijay in 'Maasthi Gudi'

ಈಗ 'ಮಾಸ್ತಿ ಗುಡಿ' ಸಿನಿಮಾ ತಂಡದಲ್ಲಿ ನಟಿ ಅಮೂಲ್ಯ ಸೇರಿಕೊಂಡಿರುವುದರಿಂದ ಚಿತ್ರದಲ್ಲಿ ಲವ್ ಸ್ಟೋರಿ ಕೂಡ ಎಕ್ಸ್ ಪೆಕ್ಟ್ ಮಾಡಬಹುದು.


ಸದ್ಯಕ್ಕೆ ಯೋಗರಾಜ್ ಭಟ್ ನಿರ್ದೇಶನದ 'ದನ ಕಾಯೋನು' ಚಿತ್ರದಲ್ಲಿ ದುನಿಯಾ ವಿಜಯ್ ಬಿಜಿಯಾಗಿದ್ರೆ, ನಟಿ ಅಮೂಲ್ಯ 'ಕೃಷ್ಣ ರುಕ್ಕು' ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ['ಮಾಸ್ತಿ ಗುಡಿ' ದುನಿಯಾ ವಿಜಿ ರಿಯಲ್ ಕಹಾನಿನಾ?]


Kannada Actress Amulya to pair up opposite Duniya Vijay in 'Maasthi Gudi'

'ಮಾಸ್ತಿ ಗುಡಿ' ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ.

English summary
According to the reports, Kannada Actress Amulya to pair up opposite Duniya Vijay in 'Maasthi Gudi'. Nagashekar is directing this movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada