»   » ಮದುವೆಗೂ ಮುನ್ನ 'ಕೊನೆ' ಪಾರ್ಟಿ ಮಾಡಿ ಖುಷಿ ಪಟ್ಟ ಅಮೂಲ್ಯ.!

ಮದುವೆಗೂ ಮುನ್ನ 'ಕೊನೆ' ಪಾರ್ಟಿ ಮಾಡಿ ಖುಷಿ ಪಟ್ಟ ಅಮೂಲ್ಯ.!

Posted By:
Subscribe to Filmibeat Kannada

'ಮುದ್ದು ಹುಡುಗಿ' ಅಮೂಲ್ಯ ಹಾಗೂ ಜಗದೀಶ್ ರವರ ವಿವಾಹ ಮಹೋತ್ಸವಕ್ಕೆ ಅದ್ಧೂರಿ ತಯಾರಿ ನಡೆಯುತ್ತಿದೆ. ಒಂದ್ಕಡೆ ಚಿತ್ರರಂಗದ ಗಣ್ಯರಿಗೆ, ಕುಟುಂಬಸ್ಥರಿಗೆ ಮದುವೆಯ ಆಮಂತ್ರಣ ನೀಡುವುದರಲ್ಲಿ ವಧು-ವರರ ಕುಟುಂಬ ಬಿಜಿಯಾಗಿದ್ದರೆ, ಇತ್ತ ನಟಿ ಅಮೂಲ್ಯ ಮಾತ್ರ ಪಾರ್ಟಿ ಮೂಡ್ ನಲ್ಲಿದ್ದಾರೆ.! [ನಟಿ ಅಮೂಲ್ಯಗೆ ಕೂಡಿ ಬಂತು ಕಂಕಣ ಭಾಗ್ಯ: ಹುಡುಗ ಯಾರು.?]

ಹೌದು, ಸ್ಟಾರ್ ನಟರಿಗೆ 'ಮದುವೆಯ ಮಮತೆಯ ಕರೆಯೋಲೆ' ನೀಡುತ್ತಿರುವ ನಟಿ ಅಮೂಲ್ಯ, ಅದೇ ಗ್ಯಾಪ್ ನಲ್ಲಿ ಗೆಳತಿಯರ ಜೊತೆ ಬ್ಯಾಚೆಲ್ಲೋರೆಟ್ ಪಾರ್ಟಿ ಮಾಡಿ ಖುಷಿ ಪಟ್ಟಿದ್ದಾರೆ. ಮುಂದೆ ಓದಿ....

'ಬ್ರೈಡ್ ಟು ಬಿ' ಅಮೂಲ್ಯ

ಹಸೆಮಣೆ ಏರಲು ತಯಾರಾಗಿರುವ ನಟಿ ಅಮೂಲ್ಯ ಮೊನ್ನೆ ರಾತ್ರಿ ಬ್ಯಾಚೆಲ್ಲೋರೆಟ್ ಪಾರ್ಟಿ ಮಾಡಿದಾಗ ಕಂಗೊಳಿಸಿದ್ದು ಹೀಗೆ....

ಮಿರಿ ಮಿರಿ ಮಿಂಚಿದ ಅಮೂಲ್ಯ

ಶಾರ್ಟ್ ಡ್ರೆಸ್ ನಲ್ಲಿ ನಟಿ ಅಮೂಲ್ಯ ಮಿರಿ ಮಿರಿ ಮಿಂಚುತ್ತಿದ್ದರು.[ಚಿತ್ರಗಳು: 'ಅಮೂಲ್ಯ-ಜಗದೀಶ್' ನಿಶ್ಚಿತಾರ್ಥದಲ್ಲಿ ತಾರೆಯರ ಸೆಲ್ಫಿ ಸಂಭ್ರಮ]

ಗೆಳತಿಯರು ಭಾಗಿ

ನಟಿ ಅಮೂಲ್ಯ ರವರ ಗೆಳತಿಯರು ಹಾಗೂ ಕ್ಲಾಸ್ ಮೇಟ್ಸ್ ಬ್ಯಾಚೆಲ್ಲೋರೆಟ್ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಅದರಲ್ಲಿ 'ಅಗ್ನಿಸಾಕ್ಷಿ' ಧಾರಾವಾಹಿಯ ವೈಷ್ಣವಿ ಕೂಡ ಒಬ್ಬರು. [ಮದುವೆ ನಿಕ್ಕಿ ಆಯ್ತು: ನಟಿ ಅಮೂಲ್ಯ 'ಮುಗುಳ್ನಗೆ' ಬಿಟ್ಟಾಯ್ತು.!]

'ಕೊನೆ'ಯ ಪಾರ್ಟಿ

ಮೇ 12 ರಂದು ಅಮೂಲ್ಯ-ಜಗದೀಶ್ ಗೃಹಸ್ಥಾಶ್ರಮಕ್ಕೆ ಕಾಲಿಡಲಿದ್ದಾರೆ. ಹೀಗಾಗಿ ಮದುವೆಗೆ ಮುನ್ನ 'ಕೊನೆ'ಯ ಬ್ಯಾಚೆಲ್ಲೋರೆಟ್ ಪಾರ್ಟಿಯನ್ನ ತಮ್ಮ ಫ್ರೆಂಡ್ಸ್ ಜೊತೆ ನಟಿ ಅಮೂಲ್ಯ ಸೆಲೆಬ್ರೇಟ್ ಮಾಡಿದ್ದಾರೆ.

English summary
Kannada Actress Amulya celebrates her Bachelorette Party with friends. Amulya-Jagadeesh wedding is scheduled on May 12th, 2017
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada