»   » ಅಭಿಜಿತ್ ಶುಭ ಲಗ್ನದಲ್ಲಿ ಅಮೂಲ್ಯಗೆ ಜಗದೀಶ್ 'ಮಾಂಗಲ್ಯ ಧಾರಣೆ'

ಅಭಿಜಿತ್ ಶುಭ ಲಗ್ನದಲ್ಲಿ ಅಮೂಲ್ಯಗೆ ಜಗದೀಶ್ 'ಮಾಂಗಲ್ಯ ಧಾರಣೆ'

Posted By: Naveen
Subscribe to Filmibeat Kannada

ಸ್ಯಾಂಡಲ್ ವುಡ್ ನ 'ಬೇಬಿ ಡಾಲ್' ನಟಿ ಅಮೂಲ್ಯ ಇಂದು ತಮ್ಮ ಬ್ಯಾಚುಲರ್ ಲೈಫ್ ಗೆ ವಿರಾಮ ಹಾಕಿದ್ದಾರೆ. ರಾಜರಾಜೇಶ್ವರಿ ನಗರದ ಮಾಜಿ ಕಾರ್ಪೋರೇಟರ್ ಮಗ ಜಗದೀಶ್ ರವರೊಂದಿಗೆ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ.

ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಕ್ಷೇತ್ರದ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇಂದು ಮಧ್ಯಾಹ್ನ 12.00 ರಿಂದ 12.30 ವರೆಗೆ ಇದ್ದ ಶುಭ ಅಭಿಜಿತ್ ಲಗ್ನದಲ್ಲಿ ಜಗದೀಶ್ ಮತ್ತು ಅಮೂಲ್ಯ ಹಸೆಮಣೆ ಏರಿದರು. 12.30 ರ ಸುಮಾರಿಗೆ ಅಮೂಲ್ಯ ರವರ ಕೊರಳಿಗೆ ಜಗದೀಶ್ ಮಾಂಗಲ್ಯಧಾರಣೆ ಮಾಡಿದರು.

ಆದಿಚುಂಚನಗಿರಿ ಕ್ಷೇತ್ರದ ಮಠಾಧೀಶರಾದ ಶ್ರೀ ನಿರ್ಮಲಾನಂದ ಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಅಮೂಲ್ಯ ಮದುವೆಯ ಅಪೂರ್ವ ಕ್ಷಣಗಳು ಮುಂದಿದೆ ಓದಿ.

ಶಾಸ್ತ್ರದೊಂದಿಗೆ ಶುರು

ಮೊದಲು ವರಪೂಜೆ, ಗಂಗೆ ಪೂಜೆಯೊಂದಿಗೆ ಇಂದಿನ ವಿವಾಹ ಕಾರ್ಯಕ್ರಮ ಶುರುವಾಯಿತು. ನಂತರ ಪತ್ರಿಕೆ ಪೂಜೆ, ಗಣಪತಿ ಪೂಜೆಯನ್ನ ಮಾಡಲಾಯಿತು.

ಕಾಲು ತೊಳೆಯುವ ಶಾಸ್ತ್ರ

ವಧು ಅಮೂಲ್ಯ ಅಣ್ಣ ಮತ್ತು ಅತ್ತಿಗೆ, ವರ ಜಗದೀಶ್ ರವರ ಕಾಲು ತೊಳೆಯುವ ಶಾಸ್ತ್ರ ನೆರೆವೇರಿಸಿದರು.

ಒಕ್ಕಲಿಗ ಸಂಪ್ರದಾಯದಂತೆ ಮದುವೆ

ಅಮೂಲ್ಯ ಮತ್ತು ಜಗದೀಶ್ ಅವರ ವಿವಾಹವೂ ಒಕ್ಕಲಿಗ ಸಂಪ್ರದಾಯದಂತೆ ನಡೆಯಿತು.

ಮಾಂಗಲ್ಯ ಧಾರಣೆ

ಮಧ್ಯಾಹ್ನ 12.30ರ ಸುಮಾರಿಗೆ ಇದ್ದ ಶುಭ ಅಭಿಜಿತ್ ಲಗ್ನದಲ್ಲಿ ಅಮೂಲ್ಯ ರವರ ಕೊರಳಿಗೆ ಜಗದೀಶ್ ಮಾಂಗಲ್ಯ ಧಾರಣೆ ಮಾಡಿದರು.

ಸ್ವಾಮೀಜಿ ಸಾನಿಧ್ಯ

ಆದಿಚುಂಚನಗಿರಿ ಕ್ಷೇತ್ರದ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇಬ್ಬರ ವಿವಾಹ ನಡೆಯಿತು. ಶ್ರೀ ನಿರ್ಮಲಾನಂದ ಸ್ವಾಮೀಜಿ ಸಾನಿಧ್ಯದಲ್ಲಿ ಅಮೂಲ್ಯ ಮತ್ತು ಜಗದೀಶ್ ಮುಹೂರ್ತ ಕಾರ್ಯಕ್ರಮ ನೆರವೇರಿತು.

English summary
Kannada Actress Amulya tied knot with Jagadish today(May 12) at Aadichunchanagiri Kalabairaveshwara temple.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada