»   » ಮದುವೆ ಬಗ್ಗೆ ಕ್ಲಾರಿಟಿ ಕೊಟ್ಟ ಜಾಕಿ ಭಾವನಾ!

ಮದುವೆ ಬಗ್ಗೆ ಕ್ಲಾರಿಟಿ ಕೊಟ್ಟ ಜಾಕಿ ಭಾವನಾ!

Posted By:
Subscribe to Filmibeat Kannada

ಕಳೆದ ಎರಡು ಮೂರು ತಿಂಗಳುಗಳಿಂದ ನಟಿ ಭಾವನಾ ಅವರ ಮದುವೆ ಕುರಿತು ಸಿಕ್ಕಾಪಟ್ಟೆ ಸುದ್ದಿಗಳು ಹರಿದಾಡುತ್ತಿವೆ. ಆ ಸುದ್ದಿಗಳಿಗೆಲ್ಲ ನಟಿ ಭಾವನಾ ತೆರೆ ಎಳೆದಿದ್ದಾರೆ.

ಕನ್ನಡದ ನಿರ್ಮಾಪಕರೊಬ್ಬರನ್ನ ಭಾವನಾ ಪ್ರೀತಿಸುತ್ತಿದ್ದಾರೆ. ಅವರನೇ ಮದುವೆ ಕೂಡ ಆಗುತ್ತಿದ್ದಾರೆ. ಮದುವೆಯ ಎಲ್ಲಾ ತಯಾರಿ ನಡೆಯುತ್ತಿದೆ. ಬಹುಶಃ ಜನವರಿ ನಂತರ ಭಾವನಾ ಸಪ್ತಪದಿ ತುಳಿಯಲಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯಾಗಿತ್ತು.['ಜಾಕಿ' ಭಾವನಾ ಮದುವೆ ಆಗ್ತಿರೋದು ಯಾರನ್ನ ಅಂತ ನಿಮಗೆ ಗೊತ್ತಾ?]

ಆದ್ರೀಗ, ನಟಿ ಭಾವನಾ ಅವರೇ ತಮ್ಮ ಮದುವೆ ಬಗೆಗಿನ ಸುದ್ದಿಗಳಿಗೆ ಕ್ಲಾರಿಟಿ ಕೊಟ್ಟಿದ್ದಾರೆ.

ಮದುವೆ ಸುದ್ದಿ ಸುಳ್ಳು ಎಂದ ಭಾವನಾ!

''ನನ್ನ ಮದುವೆ ಬಗ್ಗೆ ಇಲ್ಲ ಸಲ್ಲದ ವದಂತಿಗಳು ಹರಿದಾಡುತ್ತಿದೆ. ಅದೇಲ್ಲವೂ ಸುಳ್ಳು. ನಾನು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೇನೆ. ಸದ್ಯ, ಮದುವೆಯ ಬಗ್ಗೆ ಯೋಚನೆ ಮಾಡಿಲ್ಲ'' ಎಂದು ತಮ್ಮ ಮದುವೆ ಬಗ್ಗೆ ನಟಿ ಭಾವನಾ ಕ್ಲಾರಿಟಿ ಕೊಟ್ಟಿದ್ದಾರೆ.[ಜಾತಕದ ಪ್ರಕಾರ ಮಲ್ಲು ಬೆಡಗಿ ಭಾವನಾ ಮದುವೆ]

ಇದು ಕಿಡಿಗೇಡಿಗಳ ಕೃತ್ಯ!

''ನಾನು ಜೂನ್ ವರೆಗೂ ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದೇನೆ. ಆದ್ರೆ, ಜನವರಿಯಲ್ಲೇ ಮದುವೆ ಆಗ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಜನವರಿ ಮುಗಿತ ಬರ್ತಿದೆ, ನಾನು ಇನ್ನೂ ಮದುವೆ ಆಗಿಲ್ಲ ಅಂದ್ಮೇಲೆ ಅದು ಸುಳ್ಳು ಅನ್ನೋದು ನಿಜಾ ಅಲ್ವಾ. ಇದು ಸಾಮಾಜಿಕ ಜಾಲತಾಣಗಳಲ್ಲಿ ಯಾರೋ ಕಿಡಿಗೇಡಿಗಳು ಸೃಷ್ಠಿಸಿರುವ ಸುದ್ದಿ ಅಷ್ಟೇ'' ಎಂದು ಸದ್ಯಕ್ಕೆ ಮದುವೆ ವಿಚಾರವನ್ನ ಭಾವನಾ ಅಲ್ಲೆಗಳೆದಿದ್ದಾರೆ.[ಫಿಲಂ ಮೇಕರ್ ಜತೆ ಮಲ್ಲು ಬೆಡಗಿ ಭಾವನಾ ಮದುವೆ]

ನವೀನ್ ಪ್ರೀತಿ ವಿಚಾರವೇನು!

ಇನ್ನೂ ಕನ್ನಡದ ಯುವ ನಿರ್ಮಾಪಕ ನವೀನ ಕುಮಾರ್ ಅವರ ಪ್ರೀತಿಯ ಹಾಗೂ ಅವರನ್ನ ಮದುವೆಯಾಗುತ್ತಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ''ನಾನು ಆ ಬಗ್ಗೆ ಮಾತನಾಡಲು ಇಷ್ಟ ಪಡುವುದಿಲ್ಲ'' ಎಂದು ಹೇಳುವ ಮೂಲಕ ಅಡ್ಡಗೋಡೆಯ ಮೇಲೆ ದೀಪವನ್ನಿಟ್ಟಿದ್ದಾರೆ.

ಶಿವಣ್ಣನ 'ಟಗರು' ಚಿತ್ರದಲ್ಲಿ ಭಾವನಾ!

ಸದ್ಯ, ಶಿವರಾಜ್ ಕುಮಾರ್ ಅಭಿನಯದ 'ಟಗರು' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿರುವ ಭಾವನಾ, ಮತ್ತೆರೆಡು ಮಲಾಯಳಂ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ, ಸದ್ಯದ ಮಟ್ಟಿಗೆ ಭಾವನಾ ಅವರ ಮದುವೆ ವಿಚಾರ ಸುಳ್ಳು ಎಂಬುದು ಅವರೇ ಖಚಿತಪಡಿಸಿದ್ದಾರೆ.

English summary
Kannada Actress Bhavana Gave Clarity On Her Marriage. Presently Bhavana Busy With Kannada And Malayalam Movies. and Still today She Didn't Decide About her Marriage' She says.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada