»   » 'ಬಿಗ್ ಬಾಸ್' ಬೆಡಗಿ ದೀಪಿಕಾ ಕಾಮಯ್ಯ ಕೈಹಿಡಿಯಲಿರುವ ಕುವರ ಇವರೇ...

'ಬಿಗ್ ಬಾಸ್' ಬೆಡಗಿ ದೀಪಿಕಾ ಕಾಮಯ್ಯ ಕೈಹಿಡಿಯಲಿರುವ ಕುವರ ಇವರೇ...

Posted By:
Subscribe to Filmibeat Kannada

'ಚಿಂಗಾರಿ', 'ಆಟೋ ರಾಜಾ' ಮತ್ತು 'ಜಗ್ಗು ದಾದಾ' ಚಿತ್ರಗಳಲ್ಲಿ ನಾಯಕಿ ಆಗಿ ಕಾಣಿಸಿಕೊಂಡು ಕನ್ನಡ ಸಿನಿ ರಸಿಕರ ಮನ ಗೆದ್ದಿದ್ದ ನಟಿ ದೀಪಿಕಾ ಕಾಮಯ್ಯಗೆ ಕಂಕಣ ಭಾಗ್ಯ ಕೂಡಿ ಬಂದಿದೆ.

ಇದೇ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ದೀಪಿಕಾ ಕಾಮಯ್ಯ ವಿವಾಹ ಮಹೋತ್ಸವ ಅದ್ಧೂರಿ ಆಗಿ ನಡೆಯಲಿದೆ. [ಕೊಡಗಿನ ಕಿತ್ತಳೆ ದೀಪಿಕಾ ಕಾಮಯ್ಯ ಬಯೋಡಾಟಾ]

ತಮ್ಮ ಬಬ್ಲಿ ಆಕ್ಟಿಂಗ್ ಮೂಲಕ ಪಡ್ಡೆ ಹುಡುಗರ ಹೃದಯಕ್ಕೆ ಕಿಚ್ಚು ಹಚ್ಚಿಸಿದ 'ಕೊಡವತಿ' ದೀಪಿಕಾ ಕಾಮಯ್ಯ ಮದುವೆ ಆಗುತ್ತಿರುವ ಗಂಡು ಇವರೇ....

ದೀಪಿಕಾ ಕಾಮಯ್ಯ ಕೈ ಹಿಡಿಯಲಿರುವ ಕುವರ...

ಮಾಡೆಲ್ ಕಮ್ ನಟಿ ಆಗಿರುವ ದೀಪಿಕಾ ಕಾಮಯ್ಯ ಕೈಹಿಡಿಯುತ್ತಿರುವ ಗಂಡು ಇವರೇ..ಹೆಸರು ಸುಮಂತ್ ಗೋಪಿ. [ನೀನೆ ಬರಿ ನೀನೆ ಎಂದ ಚಿಂಗಾರಿ ದೀಪಿಕಾ ಕಾಮಯ್ಯ]

ಬೆಂಗಳೂರಿನ ಹುಡುಗ ಸುಮಂತ್ ಗೋಪಿ

ಬೆಂಗಳೂರಿನಲ್ಲೇ ಹುಟ್ಟಿ ಬೆಳೆದಿರುವ ಸುಮಂತ್ ಗೋಪಿ, ಸದ್ಯ ಕೆಲಸ ನಿಮಿತ್ತ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ.

ಇದು ಅರೇಂಜ್ಡ್ ಮ್ಯಾರೇಜ್

ಎಲ್ಲರೂ ಅಂದುಕೊಂಡಿರುವ ಹಾಗೆ ದೀಪಿಕಾ ಕಾಮಯ್ಯ-ಸುಮಂತ್ ಗೋಪಿ ರದ್ದು ಲವ್ ಮ್ಯಾರೇಜ್ ಅಲ್ಲ. ಬದಲಾಗಿ ದೊಡ್ಡವರು ನಿಶ್ಚಯ ಮಾಡಿರುವ ಮದುವೆ.

ದೀಪಿಕಾ-ಸುಮಂತ್ ಗೋಪಿ ಮದುವೆ ಯಾವಾಗ? ಎಲ್ಲಿ?

ನವೆಂಬರ್ ಕೊನೆ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ದೀಪಿಕಾ ಕಾಮಯ್ಯ-ಸುಮಂತ್ ಗೋಪಿ ವಿವಾಹ ಬೆಂಗಳೂರಿನ ಮಣಿಪಾಲ್ ಕೌಂಟಿ ರೆಸಾರ್ಟ್ ನಲ್ಲಿ ನಡೆಯಲಿದೆ.

ದಿನಾಂಕ ನಿಗದಿ ಆಗಿಲ್ಲ.!

''ಡೇಟ್ ಇನ್ನೂ ಫೈನಲ್ ಆಗಿಲ್ಲ. ಮಣಿಪಾಲ್ ಕೌಂಟಿಯಲ್ಲಿ ಮದುವೆ ನಡೆಯುವ ಬಗ್ಗೆ ಪ್ಲಾನ್ನಿಂಗ್ ನಡೆಯುತ್ತಿದೆ. ಚಿತ್ರರಂಗದಲ್ಲಿ ನನಗೆ ಗೊತ್ತಿರುವ ಎಲ್ಲರಿಗೂ ಆಹ್ವಾನ ನೀಡುತ್ತೇನೆ'' ಎನ್ನುತ್ತಾರೆ ದೀಪಿಕಾ ಕಾಮಯ್ಯ.

ಮದುವೆ ನಂತರ ಆಸ್ಟ್ರೇಲಿಯಾಗೆ ಶಿಫ್ಟ್?

''ಮದುವೆ ಆದ್ಮೇಲೆ ಆಸ್ಟ್ರೇಲಿಯಾಗೆ ಹೋಗುತ್ತೇನೆ'' ಎಂದೂ ಕೂಡ ನಟಿ ದೀಪಿಕಾ ಕಾಮಯ್ಯ ಹೇಳಿದ್ದಾರೆ.

ಬಣ್ಣದ ಬದುಕಿಗೆ ಗುಡ್ ಬೈ ಹೇಳ್ತಾರಾ?

''ಮದುವೆ ಆದ್ಮೇಲೂ ಕೂಡ ಸಿನಿಮಾದಲ್ಲಿ ನಟಿಸುತ್ತೇನೆ. ಆಕ್ಟಿಂಗ್ ನನ್ನ ಪ್ಯಾಶನ್. ಸುಮಂತ್ ಗೋಪಿ ಕಡೆಯಿಂದ ಖಂಡಿತ ನನಗೆ ಸಪೋರ್ಟ್ ಇದೆ'' - ದೀಪಿಕಾ ಕಾಮಯ್ಯ.

ಸುಮಂತ್ ಗೋಪಿ ಬಗ್ಗೆ ದೀಪಿಕಾ ಅಂತರಾಳ

''ಇದು ಅರೇಂಜ್ಡ್ ಮ್ಯಾರೇಜ್. ಸುಮಂತ್ ಗೋಪಿ ತುಂಬಾ ಒಳ್ಳೆಯ ಹುಡುಗ. ಅವರೂ ಕೂಡ ನನ್ನ ಹಾಗೆ, ಸದಾ ಜೋಕ್ ಮಾಡಿಕೊಂಡು ಇರ್ತಾರೆ. ನನಗೆ ತುಂಬಾ ಗೌರವ ಕೊಡುತ್ತಾರೆ. ನನ್ನ ಗಂಡ ಹೇಗಿರಬೇಕು ಅಂತ ನಾನು ಕನಸು ಕಾಣುತ್ತಿದ್ನೋ, ಸುಮಂತ್ ಗೋಪಿ ಹಾಗೇ ಇದ್ದಾರೆ. ನಾನು ತುಂಬಾ ಲಕ್ಕಿ'' - ದೀಪಿಕಾ ಕಾಮಯ್ಯ.

ದೀಪಿಕಾ ಕಾಮಯ್ಯ ಕುರಿತು....

ಕೊಡಗು ಮೂಲದ ದೀಪಿಕಾ ಕಾಮಯ್ಯ ಹುಟ್ಟಿದ್ದು, ಬೆಳೆದದ್ದು ಬೆಂಗಳೂರಿನಲ್ಲಿ. ಬಿಷಪ್ ಕಾಟನ್ ಕಾಲೇಜ್ ನಲ್ಲಿ ಬಿ.ಕಾಂ ಪದವಿ ಪಡೆದಿರುವ ದೀಪಿಕಾ, 2009 ರ ಫೆಮಿನಾ ಮಿಸ್ ಇಂಡಿಯಾ ಸೌತ್ ನಲ್ಲಿ ಭಾಗವಹಿಸಿ ಫೈನಲ್ ಹಂತ ತಲುಪಿದ್ದರು.

ದೀಪಿಕಾ ಕಾಮಯ್ಯ ನಟಿಸಿದ ಚಿತ್ರಗಳು....

ಕನ್ನಡದಲ್ಲಿ 'ಚಿಂಗಾರಿ', 'ಆಟೋ ರಾಜಾ', 'ನೀನೇ ಬರೀ ನೀನೇ', 'ಜಗ್ಗು ದಾದಾ' ಚಿತ್ರಗಳಲ್ಲಿ ಅಭಿನಯಿಸಿರುವ ದೀಪಿಕಾ ಬಾಲಿವುಡ್ ಹಾಗೂ ಕಾಲಿವುಡ್ ಅಂಗಳವನ್ನೂ ರೌಂಡ್ ಹಾಕಿ ಬಂದಿದ್ದಾರೆ.

'ಬಿಗ್ ಬಾಸ್ ಕನ್ನಡ-2'ನಲ್ಲಿ ದೀಪಿಕಾ ಮಿಂಚು

ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ-2'ನ ಟಾಪ್ 3 ಹಂತ ತಲುಪಿದ್ದರು ನಟಿ ದೀಪಿಕಾ ಕಾಮಯ್ಯ.

English summary
Kannada Actress Deepika Kamaiah is getting hitched to Bengaluru based Sumanth Gopi in December 2016

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada