Just In
Don't Miss!
- News
ಧಾರವಾಡ ಅಪಘಾತ; ಮತ್ತೊಬ್ಬ ಮಹಿಳೆ ಸಾವು, ಅಂಗಾಂಗ ದಾನ
- Finance
ವಿಶ್ವದ ಸಿರಿವಂತರ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿ ಮುಕೇಶ್; ಆಸ್ತಿ 5.78 ಲಕ್ಷ ಕೋಟಿ ರು.
- Sports
ಟೀಮ್ ಇಂಡಿಯಾದ ನಿರ್ಭೀತ ಆಟಕ್ಕೆ ಆ ಇಬ್ಬರು ಕಾರಣ ಎಂದ ಭರತ್ ಅರುಣ್
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹುಟ್ಟುಹಬ್ಬದಂದು ಹೊಸ ಮನೆಗೆ ರಮ್ಯಾ ಪ್ರವೇಶ.!
ಕನ್ನಡ ಸಿನಿಮಾ ರಂಗದ ಮಾಜಿ ನಟಿ, ದಶಕದ ಕಾಲ ಸ್ಯಾಂಡಲ್ ವುಡ್ ನ ನಾಯಕಿಯಾಗಿ ಆಳಿದ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನಾ ಹೊಸ ಮನೆಯನ್ನ ಖರೀದಿಸಿದ್ದಾರೆ.
ಅರೇ... ರಮ್ಯಾ ಬೆಂಗಳೂರಿನಲ್ಲಿರುವ ಮೂರು ಮನೆಗಳ ಜೊತೆಗೆ ಮತ್ತೊಂದು ಮನೆಯನ್ನ ಖರೀದಿ ಮಾಡಿದ್ರಾ.?! ಅಂತ ಆಶ್ಚರ್ಯ ಪಡಬೇಡಿ. ಯಾಕಂದ್ರೆ ರಮ್ಯ ಮನೆ ಖರೀದಿಸಿರುವುದು ಬೆಂಗಳೂರಿನಲ್ಲಿ ಅಲ್ಲ.
ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳು ಮನೆ ಖರೀದಿ ಮಾಡಿದ್ರೆ ಸಾಕು, ಮನೆ ಎಲ್ಲಿ ಖರೀದಿ ಮಾಡಿದ್ದಾರೆ, ಮನೆ ಹೇಗಿದೆ.? ಹೀಗೆ ಸಾಕಷ್ಟು ಕುತೂಹಲ ಅವ್ರ ಅಭಿಮಾನಿಗಳಲ್ಲಿ ಹಾಗೂ ಜನಸಾಮಾನ್ಯರಲ್ಲಿ ಇರುತ್ತೆ. ಹಾಗಾದ್ರೆ ರಮ್ಯಾ ಮನೆ ಹೇಗಿದೆ.? ಎಲ್ಲಿದೆ.? ಮುಂದೆ ಓದಿ....

ಹಳೆ ಮನೆಯನ್ನೇ ಖರೀದಿ ಮಾಡಿದ ರಮ್ಯ
ರಮ್ಯ ಸಾಕಷ್ಟು ಹಿಂದೆಯೇ ಮಂಡ್ಯದಲ್ಲಿ ಮನೆಯನ್ನ ಖರೀದಿ ಮಾಡಿ ಅಲ್ಲೇ ಕೆಲ ದಿನಗಳು ವಾಸವಿದ್ರೂ, ಬಳಿಕ ರಮ್ಯ ಬೆಂಗಳೂರಿಗೆ ವಾಪಸ್ ಆಗಿದ್ರು. ಆದ್ರೆ ಈಗ ರಮ್ಯ ಮಂಡ್ಯದಲ್ಲೇ ಮನೆಯನ್ನ ಖರೀದಿ ಮಾಡಿದ್ದಾರೆ.

ಮಂಡ್ಯದಲ್ಲಿ ಹುಟ್ಟುಹಬ್ಬ ಆಚರಣೆ
ಮಂಡ್ಯದಲ್ಲಿದ್ದ ಮನೆಯನ್ನ ಸ್ವಂತಕ್ಕೆ ಖರೀದಿ ಮಾಡಿರುವ ರಮ್ಯ ಈ ಬಾರಿಯ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದಾರೆ. ತಮಗೆ ಬೇಕಾದಂತೆ ಮನೆಯನ್ನ ನವೀಕರಣ ಮಾಡಿಕೊಂಡಿರುವ ರಮ್ಯ ಇದೇ ತಿಂಗಳ 29 ರಂದು ಗೃಹ ಪ್ರವೇಶ ಮಾಡಲಿದ್ದಾರೆ.

ಚುನಾವಣೆ ಪ್ರಚಾರಕ್ಕೆ ಚಾಲನೆ
2018ರ ವಿಧಾನಸಭಾ ಚುನಾವಣೆಯಲ್ಲಿ ರಮ್ಯ ಮಂಡ್ಯದಿಂದ ಸ್ಪರ್ಧಿಸುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಹಿನ್ನಲೆಯಲ್ಲಿ ರಮ್ಯ ಇನ್ನು ಮುಂದೆ ಮಂಡ್ಯದ ಕೆ.ಆರ್.ರಸ್ತೆಯಲ್ಲಿರುವ ನಿವಾಸದಲ್ಲಿ ವಾಸವಿರ್ತಾರಂತೆ.

ನವೀಕರಣವಾಗ್ತಿರೋ ಮನೆ
ಹಳೆಯ ಮನೆಯಲ್ಲೇ ಗೆಲವು ಕಾಣಬೇಕೆಂದು ನಿರ್ಧಾರ ಮಾಡಿರೋ ರಮ್ಯಾ ಅದೇ ಮನೆಯನ್ನ ತಮಗೆ ಬೇಕಾದಂತೆ ನವೀಕರಣ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ನ ಐ.ಟಿ.ಸೆಲ್ ನೋಡಿಕೊಳ್ತಿರೋ ರಮ್ಯ ಇನ್ನು ಮುಂದೆ ಚುನಾವಣಾ ಪ್ರಚಾರಕ್ಕಾಗಿ ಕಣಕ್ಕಿಳಿಯಲಿದ್ದಾರೆ.

ಸಿನಿಮಾರಂಗದಲ್ಲಿ ಕಾಣಿಸಲ್ಲ ರಮ್ಯ
ಸಕ್ರಿಯವಾಗಿ ರಾಜಕೀಯದಲ್ಲಿ ಬ್ಯುಸಿ ಆಗಿರೋ ರಮ್ಯ ಮತ್ತೆ ಸಿನಿಮಾರಂಗದ ಕಡೆ ಬರೋದಿಲ್ವಂತೆ. ಹೀಗಂತ ರಮ್ಯ ತಮ್ಮ ಟ್ವಿಟ್ಟರ್ ನಲ್ಲಿ ಬಹಳ ಹಿಂದೆಯೇ ಹೇಳಿದ್ರು. ಹೊಸಬರು ಸಾಕಷ್ಟು ಜನ ಬಂದಿದ್ದಾರೆ ಅವ್ರಿಗೆ ಅವಕಾಶಗಳು ದೊರೆಯಲಿ ನಾನು ರಾಜಕೀಯದಲ್ಲಿ ಖುಷಿಯಾಗಿದ್ದೇನೆ ಅಂತಿದ್ರು ರಮ್ಯ.