For Quick Alerts
  ALLOW NOTIFICATIONS  
  For Daily Alerts

  'ನೀರ್ದೋಸೆ' ಹರಿಪ್ರಿಯಾಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್.!

  By Bharath Kumar
  |

  ಹರಿಪ್ರಿಯಾ.....ಸ್ಟಾರ್ ನಟರ ಸಿನಿಮಾಗಳಿಗೆ ಚೆಂದದಗೊಂಬೆ. ಯುವ ನಟರ ಚಿತ್ರಗಳಿಗೆ ಲಕ್ಕಿ ಹೀರೋಯಿನ್. ಚಂದನವನದ ಪಾಲಿಗೆ ಚಿನ್ನದ ಮೊಟ್ಟೆ. ಸದ್ಯ, ಸ್ಯಾಂಡಲ್ ವುಡ್ ಎಂಬ ಸಿನಿಲೋಕವನ್ನ ಆಳುತ್ತಿರುವ ಯಶಸ್ವಿ ನಟಿ.

  ಸಾಮಾನ್ಯವಾಗಿ ಕನ್ನಡದಲ್ಲಿ ನಾಯಕಿಯರಿಗೆ ಅವಕಾಶಗಳು ಕಮ್ಮಿ ಎಂಬ ಮಾತಿದೆ. ಆದ್ರೆ, ಅದು ಹರಿಪ್ರಿಯಾ ವಿಚಾರದಲ್ಲಿ ಸುಳ್ಳು. ಯಾಕಂದ್ರೆ, ಯಾವ ನಟ-ನಟಿಗೂ ಕಮ್ಮಿಯಿಲ್ಲ ಎಂಬಂತೆ ಹರಿಪ್ರಿಯಾ ಕೈಯಲ್ಲಿ ಸಿನಿಮಾಗಳಿವೆ.

  ಹೌದು, ಹರಿಪ್ರಿಯಾ ಅವರ ಜೋಳಿಗೆಯಲ್ಲಿ ಅಷ್ಟರ ಮಟ್ಟಿಗೆ ಸಿನಿಮಾಗಳಿವೆ. ಈ ಚಿತ್ರಗಳ ಪಟ್ಟಿ ಒಮ್ಮೆ ನೋಡಿದ್ರೆ, ಯಾವ ಸ್ಟಾರ್ ನಟ-ನಟಿಯೂ ಹರಿಪ್ರಿಯಾ ಅವರ ಮುಂದೆ ಕೆಮ್ಮಂಗಿಲ್ಲ. ಮುಂದೆ ಓದಿ.....

  'ಕಥಾ ಸಂಗಮ'ದಲ್ಲಿ ಹರಿಪ್ರಿಯಾ

  'ಕಥಾ ಸಂಗಮ'ದಲ್ಲಿ ಹರಿಪ್ರಿಯಾ

  ರಿಷಬ್ ಶೆಟ್ಟಿ ನಿರ್ದೇಶನ ಮಾಡುತ್ತಿರುವ 'ಕಥಾ ಸಂಗಮ'ದಲ್ಲಿ ಹರಿಪ್ರಿಯಾ ನಾಯಕಿ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಏಳು ಕಥೆಗಳಿದ್ದು, ಏಳು ನಾಯಕರು ಹಾಗು ಏಳು ನಾಯಕಿಯರು ಅಭಿನಯಿಸಲಿದ್ದಾರೆ.

  'ಕುರುಕ್ಷೇತ್ರ'ದಲ್ಲಿ ಹರಿಪ್ರಿಯಾ

  'ಕುರುಕ್ಷೇತ್ರ'ದಲ್ಲಿ ಹರಿಪ್ರಿಯಾ

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50ನೇ ಚಿತ್ರದಲ್ಲಿ 'ಹರಿಪ್ರಿಯಾ' ಕಾಣಿಸಿಕೊಳ್ಳುತ್ತಿದ್ದರು. ಹರಿಪ್ರಿಯಾ ಅವರ ಪಾತ್ರದ ಬಗ್ಗೆ ಬಹಿರಂಗವಾಗಿಲ್ಲವಾದರೂ, ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

  'ಲೈಫ್ ಜೊತೆ ಒಂದು ಸೆಲ್ಫಿ'

  'ಲೈಫ್ ಜೊತೆ ಒಂದು ಸೆಲ್ಫಿ'

  ದಿನಕರ್ ತೂಗುದೀಪ್ ನಿರ್ದೇಶನದ ಮುಂದಿನ ಸಿನಿಮಾ ' ಲೈಫ್ ಜೊತೆ ಒಂದು ಸೆಲ್ಫಿ'. ಈ ಚಿತ್ರದಲ್ಲಿ ಲವ್ಲಿಸ್ಟಾರ್ ಪ್ರೇಮ್ ಮತ್ತು ಡೈನಾಮಿಕ್ಸ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕರಾಗಿದ್ದು, ಹರಿಪ್ರಿಯಾ ಹೀರೋಯಿನ್ ಆಗಿ ಆಯ್ಕೆ ಆಗಿದ್ದಾರೆ.

  'ಕನಕ'ನ ರಾಣಿ

  'ಕನಕ'ನ ರಾಣಿ

  ಆರ್.ಚಂದ್ರು ನಿರ್ದೇಶನ ಮಾಡುತ್ತಿರುವ ಕನಕ ಚಿತ್ರದಲ್ಲಿ ಹರಿಪ್ರಿಯಾ ನಾಯಕಿ ಆಗಿ ಕಾಣಸಿಕೊಳ್ಳುತ್ತಿದ್ದಾರೆ. ಈ ಮೂಲಕ ದುನಿಯಾ ವಿಜಯ್ ಜೊತೆ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ ಹರಿಪ್ರಿಯಾ.

  'ಸಂಹಾರ'ನ ಜೊತೆ ಪ್ರಿಯೆ

  'ಸಂಹಾರ'ನ ಜೊತೆ ಪ್ರಿಯೆ

  ಗುರುದೇಶ್ ಪಾಂಡೆ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಸಂಹಾರ'ದಲ್ಲೂ ಹರಿಪ್ರಿಯಾ ಕಮಾಲ್ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾ ನಾಯಕನಾಗಿದ್ದು, ಡಿಫ್ರೆಂಟ್ ಲುಕ್ ನಲ್ಲಿ ಹರಿಪ್ರಿಯಾ ಮಿಂಚುತ್ತಿದ್ದಾರೆ.

  'ಭರ್ಜರಿ' ಹರಿಪ್ರಿಯಾ

  'ಭರ್ಜರಿ' ಹರಿಪ್ರಿಯಾ

  ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಭರ್ಜರಿ ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿದ್ದು, ಎರಡನೇ ನಾಯಕಿ ಆಗಿ ಹರಿಪ್ರಿಯಾ ಕೂಡ ಬಣ್ಣಹಚ್ಚಿದ್ದಾರೆ. ಆಗಸ್ಟ್ ಕೊನೆ ಅಥವಾ ಸೆಪ್ಟಂಬರ್ ಮೊದಲ ವಾರದಲ್ಲಿ ಈ ಸಿನಿಮಾ ತೆರೆ ಕಾಣಲಿದೆ.

  ಅಂಜನಿಪುತ್ರನ ಹಾಡಿನಲ್ಲಿ ಹೆಜ್ಜೆ

  ಅಂಜನಿಪುತ್ರನ ಹಾಡಿನಲ್ಲಿ ಹೆಜ್ಜೆ

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಅಂಜನಿಪುತ್ರ ಚಿತ್ರದಲ್ಲಿ ಹರಿಪ್ರಿಯಾ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ನಾಯಕ ನಟ ಪುನೀತ್ ಅವರ ಇಂಟ್ರೊಡಕ್ಷನ್ ಹಾಡಿನಲ್ಲಿ ಹರಿಪ್ರಿಯಾ ಕುಣಿದಿದ್ದಾರೆ.

  ತಮಿಳಿನ ಒಂದು ಸಿನಿಮಾ

  ತಮಿಳಿನ ಒಂದು ಸಿನಿಮಾ

  ಇಷ್ಟೆಲ್ಲಾ ಕನ್ನಡ ಸಿನಿಮಾಗಳ ಜೊತೆ ತಮಿಳಿನ ಒಂದು ಚಿತ್ರದಲ್ಲೂ ಹರಿಪ್ರಿಯಾ ಅಭಿನಯಿಸುತ್ತಿದ್ದು, ಈ ಚಿತ್ರ ಇನ್ನು ಪ್ರಿ-ಪ್ರೊಡಕ್ಷನ್ ಹಂತದಲ್ಲಿದೆ.

  English summary
  Kannada Actress Haripriya Film list in 2017. Presently Haripriya Acting in More than 7 Kannada films.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X