TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಪ್ರೀತಿ ಮಾಡ್ತಿದ್ದಾರಂತೆ ಹಿತಾ ಚಂದ್ರಶೇಖರ್-ಕಿರಣ್ ಶ್ರೀನಿವಾಸ್
ಸಿಹಿ ಕಹಿ ಚಂದ್ರು-ಸಿಹಿ ಕಹಿ ಗೀತಾ ಪುತ್ರಿ... ಕನ್ನಡ ಚಿತ್ರ ನಟಿ ಹಿತಾ ಚಂದ್ರಶೇಖರ್ ಪ್ರೀತಿಯಲ್ಲಿ ಬಿದ್ದಿದ್ದಾರೆ. ನಟ ಕಿರಣ್ ಶ್ರೀನಿವಾಸ್ ರನ್ನ ಹಿತಾ ಚಂದ್ರಶೇಖರ್ ಲವ್ ಮಾಡುತ್ತಿದ್ದಾರಂತೆ.
ಹಿತಾ ಚಂದ್ರಶೇಖರ್-ಕಿರಣ್ ಶ್ರೀನಿವಾಸ್ ಲವ್ ಮಾಡುತ್ತಿರುವ ವಿಚಾರವನ್ನು ಜಗಜ್ಜಾಹೀರು ಮಾಡಿದ್ದು ನಟಿ ಸೋನು ಗೌಡ. ಸೋಷಿಯಲ್ ಮೀಡಿಯಾದಲ್ಲಿ 'ಒಂಥರಾ ಬಣ್ಣಗಳು' ಜೋಡಿ ಲವ್ ಮಾಡುತ್ತಿದ್ದಾರೆ ಅಂತ ಸೋನು ಗೌಡ ಬರೆದುಕೊಂಡಿದ್ದಾರೆ.
ಅಂದ್ಹಾಗೆ, '1/4 ಕೆಜಿ ಪ್ರೀತಿ', 'ದುನಿಯಾ-2', 'ಒಂಥರಾ ಬಣ್ಣಗಳು', 'ತುರ್ತು ನಿರ್ಗಮನ' ಸಿನಿಮಾಗಳಲ್ಲಿ ಹಿತಾ ಚಂದ್ರಶೇಖರ್ ಅಭಿನಯಿಸಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯ 'ಡ್ಯಾನ್ಸಿಂಗ್ ಸ್ಟಾರ್ ಸೀಸನ್ 3' ಕಾರ್ಯಕ್ರಮದಲ್ಲಿ ಸ್ಪರ್ಧಿಸಿ ಹಿತಾ ಚಂದ್ರಶೇಖರ್ ವಿನ್ನರ್ ಕೂಡ ಆಗಿದ್ದರು.
ಇನ್ನೂ ಕಿರಣ್ ಶ್ರೀನಿವಾಸ್ 'ಹಾಗೇ ಸುಮ್ಮನೆ', 'ಪ್ರೀತಿಯಿಂದ ರಮೇಶ್', 'ನಿರುತ್ತರ', 'ಒಂಥರಾ ಬಣ್ಣಗಳು' ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಿಂದಿ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಕಿರಣ್ ಶ್ರೀನಿವಾಸ್ ಸದ್ಯ ಕೆಲ ಹಿಂದಿ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದಾರೆ.
ಅತಿ ಶೀಘ್ರದಲ್ಲಿ ಕಿರಣ್ ಶ್ರೀನಿವಾಸ್ ಮತ್ತು ಹಿತಾ ಚಂದ್ರಶೇಖರ್ ಮದುವೆ ಆಗಲಿದ್ದಾರಂತೆ. ಆದ್ರೆ, ಈ ಬಗ್ಗೆ ಹಿತಾ ಆಗಲಿ ಕಿರಣ್ ಆಗಲಿ ಇನ್ನೂ ಕನ್ಫರ್ಮ್ ಮಾಡಿಲ್ಲ.