For Quick Alerts
  ALLOW NOTIFICATIONS  
  For Daily Alerts

  'ಜೆಸ್ಸಿ' ಪ್ರಿಯತಮೆಗೆ ರೊಮ್ಯಾಂಟಿಕ್ ಚಿತ್ರದಲ್ಲಿ, ನಟಿಸೋದು ಇಷ್ಟವಂತೆ!

  By Suneetha
  |

  'ಪ್ಯಾರ್ಗೆ ಆಗ್ಬುಟ್ಟೈತೆ' ಬೆಡಗಿ ಪಾರುಲ್ ಯಾದವ್ ಅವರು 'ಜೆಸ್ಸಿ' ನಿರ್ದೇಶಕ ಪವನ್ ಒಡೆಯರ್ ಅವರನ್ನು ಬಾಯ್ತುಂಬ ಹೊಗಳಿದ್ದಾರೆ. ಅದ್ಯಾಕಪ್ಪಾ ಅಂತೀರಾ? ಯಾಕೆಂದರೆ ಪವನ್ ಒಡೆಯರ್ ನಿರ್ದೇಶನದ 'ಜೆಸ್ಸಿ' ಸಿನಿಮಾ ಗ್ಲಾಮರ್ ಬೊಂಬೆ ಪಾರುಲ್ ಗೆ ಮೊದಲನೇ ದೊಡ್ಡದಾದ ರೊಮ್ಯಾಂಟಿಕ್ ಚಿತ್ರವಂತೆ.

  "ನನಗೆ ರೊಮ್ಯಾಂಟಿಕ್ ಚಿತ್ರಗಳು ಅಂದರೆ ಒಂಥರಾ ಹುಚ್ಚು ಪ್ರೇಮ. 'ಡಿ.ಡಿ.ಎಲ್.ಜೆ' (ದಿಲ್ವಾಲೇ ದುಲ್ಹನಿಯಾ ಲೇ ಜಾಯೇಂಗೇ), 'ಹಮ್ ದಿಲ್ ದೇಚುಕೆ ಸನಮ್', ಮೈನೆ ಪ್ಯಾರ್ ಕಿಯಾ ಹೀಗೆ ಇಂತಹ ಸಖತ್ ರೊಮ್ಯಾಂಟಿಕ್ ಸಿನಿಮಾಗಳನ್ನು ನೋಡಿ ನಾನು ಬೆಳೆದವಳು.[ಊಟಿಯ ಲವ್ಲಿ ವಾತಾವರಣದಲ್ಲಿ 'ಜೆಸ್ಸಿ' ಫಸ್ಟ್ ಶೆಡ್ಯೂಲ್ ಶೂಟಿಂಗ್ ಮುಕ್ತಾಯ]

  ನನಗೆ ಇಂತಹ ಸಿನಿಮಾಗಳಲ್ಲಿ ನಾಯಕಿಯ ಪಾತ್ರ ನಿರ್ವಹಿಸಲು ಅವಕಾಶ ಯಾರು ನೀಡುತ್ತಿಲ್ಲ ಅಂತ ತುಂಬಾ ಬೇಸರದಿಂದಿದ್ದೆ. ಈ ಸಂದರ್ಭದಲ್ಲಿ ನನಗೆ 'ಜೆಸ್ಸಿ' ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು, ತುಂಬಾ ಸಂತೋಷವಾಗುತ್ತಿದೆ.

  ನನ್ನ ಸಿನಿಮಾ ಕೆರಿಯರ್ ನಲ್ಲಿ ನನಗೆ ಮೊದಲು ದೊಡ್ಡ ಹಿಟ್ ಕೊಟ್ಟವರು ನಿರ್ದೇಶಕ ಪವನ್ ಅವರು 'ಗೋವಿಂದಾಯ ನಮಃ' ಚಿತ್ರದ ಮೂಲಕ ಎಂದು ನಟಿ ಪಾರುಲ್ ಯಾದವ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.[ಪವನ್ ಒಡೆಯರ್ 'ಜೆಸ್ಸಿ' ಚಿತ್ರದ ಫಸ್ಟ್ ಲುಕ್ ಔಟ್]

  ಈಗಾಗಲೇ 'ಜೆಸ್ಸಿ' ಚಿತ್ರದ ಫಸ್ಟ್ ಶೆಡ್ಯೂಲ್ ಶೂಟಿಂಗ್ ಊಟಿಯಲ್ಲಿ ಕಂಪ್ಲೀಟ್ ಮಾಡಿರುವ ನಟಿ ಪಾರುಲ್ ಯಾದವ್ ಅವರು ಶೂಟಿಂಗ್ ಅನುಭವವನ್ನು ಹಂಚಿಕೊಂಡಿದ್ದಾರೆ. "ಇಡೀ ಶೂಟಿಂಗ್ ಸಮಯ ಬಹಳ ಉತ್ಸಾಹದಿಂದ ತುಂಬಿತ್ತು.[ಟೀಸರ್: ಪ್ರೇಮದ ಕಾಣಿಕೆ ಜೊತೆಗೆ ಬಂದ 'ಜೆಸ್ಸಿ']

  ಪ್ರೇಮ-ಕಥೆ ಹಾಗೂ ಒಳ್ಳೆಯ ಹಾಡುಗಳಿಂದ ಕೂಡಿದ ಸಿನಿಮಾ ಇದು. ನಿರ್ದೇಶಕರು ನಿಗದಿ ಮಾಡಿದಂತೆ ಶೂಟಿಂಗ್ ಮುಗಿಸಿದ್ದಾರೆ' ಎಂದು ಪಾರುಲ್ ಸಂಭ್ರಮ ಪಡುತ್ತಾರೆ. ಚಿತ್ರದಲ್ಲಿ ಡೈರೆಕ್ಟರ್ ಸ್ಪೆಷಲ್ ಹುಡುಗ ಧನಂಜಯ್ ಜೊತೆ ಪಾರುಲ್ ಅವರು ರೊಮ್ಯಾನ್ಸ್ ಮಾಡಲಿದ್ದಾರೆ.

  ಒಟ್ನಲ್ಲಿ ಈ ವರ್ಷವಂತೂ ನನಗೆ ಅದ್ಭುತ ವರ್ಷವಾಗಿದೆ ಎಂದು ನಟಿ ಪಾರುಲ್ ಖುಷಿ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಪಾರುಲ್ ಅವರ 'ಕಿಲ್ಲಿಂಗ್ ವೀರಪ್ಪನ್' ಬಿಡುಗಡೆಗೆ ಸಿದ್ಧವಾಗಿದ್ದು, ದೀಪಾವಳಿ ಹಬ್ಬಕ್ಕೆ ತೆರೆ ಕಾಣಲಿದೆ. ಇಲ್ಲಿ ಶಿವಣ್ಣ ಅವರೊಂದಿಗೆ ಇದೇ ಮೊದಲ ಬಾರಿಗೆ ಗ್ಲಾಮರ್ ಲೆಸ್ ಆಗಿ, ಸೂಪರ್ ಕಾಪ್ ಪಾತ್ರದಲ್ಲಿ ಮಿಂಚಿದ್ದಾರೆ.

  English summary
  Kannada Actress Parul Yadav is in eternal gratitude towards her director Pavan Wadeyar for her latest Kannada Movie 'Jessie'. Reason being, this is the first ever big-screen romantic outing for the actress. Jessie features Kannada Actress Parul Yadav, Kannada Actor Dhananjay in the lead role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X