»   » ಕಡೆಗೂ ಮದುವೆ, ಗಾಸಿಪ್ ಬಗ್ಗೆ ಮೌನ ಮುರಿದ ರಚಿತಾ ರಾಮ್.!

ಕಡೆಗೂ ಮದುವೆ, ಗಾಸಿಪ್ ಬಗ್ಗೆ ಮೌನ ಮುರಿದ ರಚಿತಾ ರಾಮ್.!

Posted By:
Subscribe to Filmibeat Kannada

ಕನ್ನಡ ಸಿನಿಮಾ ರಂಗದಲ್ಲಿ ಸಾಲು ಸಾಲು ಮದುವೆ ನಡೆಯುತ್ತಿರುವ ಹಿನ್ನಲೆಯಲ್ಲಿ ಅವ್ರ ಜೊತೆ ಇವ್ರ ಮದ್ವೆ ಅಂತೆ... ಇವ್ರ ಜೊತೆ ಅವ್ರ ಮದ್ವೆ ಅಂತೆ... ಎಂಬ ಅಂತೆ ಕಂತೆಗಳು ಹರಿದಾಡೋದಕ್ಕೆ ಶುರು ಆಗಿಬಿಟ್ಟಿದೆ. ಈಗ ಅಂಥದೊಂದು ಗಾಸಿಪ್ ಆಗಿರೋದು ಗುಳಿಕೆನ್ನೆ ಬೆಡಗಿ ರಚಿತಾ ರಾಮ್ ಬಗ್ಗೆ.!

ರಚಿತಾ ಮದ್ವೆ ಆಗೋದಕ್ಕೆ ರೆಡಿಯಾಗಿದ್ದಾರಂತೆ.... ಯಾರೋ ಹುಡುಗನ ಜೊತೆ ರಚಿತಾ ಡೇಟ್ ಮಾಡ್ತಿದ್ದಾರಂತೆ.... ಅವ್ರನ್ನೇ ಮದುವೆ ಆಗ್ತಾರಂತೆ....ಎಂಬ ಸುದ್ದಿ ಗಾಂಧಿನಗರದ ಗಲ್ಲಿಗಲ್ಲಿಯಲ್ಲಿಯೂ ಹರಿದಾಡುತ್ತಿದೆ.

ಈ ಗಾಸಿಪ್ ರಚಿತಾ ರಾಮ್ ಕಿವಿಗೂ ಬಿದ್ಮೇಲೆ, ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಸ್ಪಷ್ಟನೆ ನೀಡಿದ್ದಾರೆ. ಮುಂದೆ ಓದಿರಿ....

ಮದ್ವೆ ಬಗ್ಗೆ ನನಗೆ ಚಿಂತೆಯಿಲ್ಲ

ಗಾಸಿಪ್ ಬಗ್ಗೆ ಮಾತನಾಡಿದ ರಚಿತಾ, ''ನಾನಿನ್ನೂ ಸಿಂಗಲ್, ಮಿಂಗಲ್ ಆಗೋದಕ್ಕೆ ಇನ್ನೂ ಟೈಂ ಇದೆ. ಮದುವೆ ಬಗ್ಗೆ ಈಗ ತಲೆ ಕೆಡಿಸಿಕೊಂಡಿಲ್ಲ. ಸದ್ಯ ಇರುವ ಸಿನಿಮಾಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿದೆ'' ಎಂದಿದ್ದಾರೆ.

ಎಲ್ಲವೂ ಸುಳ್ಳು ಸುದ್ದಿ

'ಜೊತೆಗೆ ನಟಿಸಿದ ನಟನ ಜೊತೆಗೆ ಡೇಟ್ ಮಾಡ್ತಿದ್ದಾರೆ. ಇಂಡಸ್ಟ್ರಿ ಬಿಟ್ಟು ಬೇರೆ ಯಾರೋ ಬಾಯ್ ಫ್ರೆಂಡ್ ಇದ್ದಾರಂತೆ'' ಎಂಬೆಲ್ಲ ಹಬ್ಬಿರೋ ಸುದ್ದಿ ಸುಳ್ಳು. ನಾನು ಯಾರ ಜೊತೆಗೂ ಕಮಿಟ್ ಆಗಿಲ್ಲ ಅಂತಿದ್ದಾರೆ ಡಿಂಪಲ್ ಕ್ವೀನ್.

ಆಹ್ವಾನ ನೀಡಿ ಮದುವೆ

''ನಾನು ಓಪನ್ ಮೈಂಡೆಡ್ ಗರ್ಲ್. ಅಭಿಮಾನಿಗಳಿಗೆ, ಮಾಧ್ಯಮದವರಿಗೆ ಹೇಳದೇ ನಾನು ಮದುವೆ ಆಗಲ್ಲ. ಎಂಗೇಜ್ ಮೆಂಟ್ ಆಗುವ ಮುನ್ನವೇ ಎಲ್ಲರಿಗೂ ತಿಳಿಸುತ್ತೇನೆ. ಕದ್ದು ಮುಚ್ಚಿ ಮದುವೆಯಾಗುವ ಅವಶ್ಯಕತೆ ಇಲ್ಲ'' ಅಂತ ರಚಿತಾ ರಾಮ್ ಹೇಳಿದ್ದಾರೆ.

ಗಾಸಿಪ್ ಗಳಿಗೆ ತೆರೆ ಎಳೆದ ರಚಿತಾ ರಾಮ್

ಕೆಲ ದಿನಗಳ ಹಿಂದೆ ರಾಜಕಾರಣಿ ಜೊತೆ ರಚಿತಾ ಹೆಸರು ತಳುಕು ಹಾಕಿಕೊಂಡಿತ್ತು. ''ಯಾರು ಯಾಕೆ ಹಿಂಗೆಲ್ಲಾ ಮಾಡ್ತಾರೆ ಅನ್ನೋದು ಗೊತ್ತಾಗುತ್ತಿಲ್ಲ. ಸದ್ಯ ಒಳ್ಳೆಯ ಸಿನಿಮಾಗಳ ಆಫರ್ ಇದೆ. ಆಕ್ಟ್ ಮಾಡೋದು ಅಷ್ಟೇ ನನ್ನ ಕೆಲಸ. ನಾನು ಎಲ್ಲರ ಜೊತೆ ಸೋಷಿಯಲ್ ಆಗಿ, ಫ್ರೆಂಡ್ಲಿ ಆಗಿರ್ತಿನಿ ಅದನ್ನೇ ಜನ ತಪ್ಪು ತಿಳಿದಿದ್ದಾರೆ'' ಅನ್ನೋದು ಡಿಂಪಲ್ ಕ್ವೀನ್ ಮಾತು. ಒಟ್ಟಾರೆ ಇದ್ರಿಂದ ರಚಿತಾ ಸಿಂಗಲ್ ಅನ್ನೋದಂತೂ ಗೊತ್ತಾಯ್ತು. ಹೀಗಾಗಿ ಅಭಿಮಾನಿಗಳೇ ಖುಷಿಯಾಗಿರಿ....

English summary
Kannada Actress Rachita Ram clarifies about her marriage gossip.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada