»   » ರಾಧಿಕಾ ಪಂಡಿತ್ ಮದುವೆಯ ನಂತರ ಮೊದಲ 'ಚೂಡಿ ಪೂಜೆ'

ರಾಧಿಕಾ ಪಂಡಿತ್ ಮದುವೆಯ ನಂತರ ಮೊದಲ 'ಚೂಡಿ ಪೂಜೆ'

Posted By:
Subscribe to Filmibeat Kannada

ಕರಾವಳಿ ಭಾಗದಲ್ಲಿ ಈ 'ಚೂಡಿ ಪೂಜೆ' (ತುಳಸಿ ಪೂಜೆ) ಆಚರಣೆ ತಲೆತಲಾಂತರದಿಂದ ನಡೆದುಕೊಂಡು ಬಂದಿದೆ. ಶ್ರಾವಣ ಮಾಸದಲ್ಲಿ ಮುತ್ತೈದೆಯರು ಅದರಲ್ಲಿಯೂ ವಿಶೇಷವಾಗಿ ನವವಿವಾಹಿತರು 'ಚೂಡಿ ಪೂಜೆ' ಸಲ್ಲಿಸುತ್ತಾರೆ.

ಶ್ರಾವಣ ಮಾಸದಲ್ಲಿ ಪ್ರತಿ ಶುಕ್ರವಾರ ಹಾಗೂ ಭಾನುವಾರ ಈ ಪೂಜೆ ಮಾಡಲಾಗುತ್ತದೆ. ಅಂದು ಮನೆಯ ಮುಂದಿನ ತುಳಸಿ ಕಟ್ಟೆ, ಬಾವಿಯ ಕಟ್ಟೆ ಹಾಗೂ ಮನೆಯ ಹೊಸ್ತಿಲಿಗೆ ಪೂಜೆ ಸಲ್ಲಿಸುತ್ತಾರೆ. ಚೂಡಿ ಪೂಜೆ ಮಾಡಿದರೆ ವಿವಾಹಿತ ಮಹಿಳೆಯರಿಗೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಇಂತಹ ಚೂಡಿ ಪೂಜೆಯನ್ನ ಸ್ಯಾಂಡಲ್ ವುಡ್ ಪ್ರಿನ್ಸಸ್ ರಾಧಿಕಾ ಪಂಡಿತ್ ನೆರವೇರಿಸಿದ್ದಾರೆ.

ರಾಧಿಕಾ ಪಂಡಿತ್ ಹೊಸ ಚಿತ್ರಕ್ಕೆ ನಾಯಕ ಯಾರು?

Kannada Actress Radhika Pandit First Chudi Puja

ಭಾನುವಾರ ನಟಿ ರಾಧಿಕಾ ಪಂಡಿತ್ ತಮ್ಮ ಮನೆಯ ಮುಂದಿರುವ ತುಳಸಿ ಕಟ್ಟೆಗೆ ಪೂಜೆ ಸಲ್ಲಿಸಿದರು. ಈ ಫೋಟೋವನ್ನ ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. ಈ ವೇಳೆ ಸಂಪ್ರದಾಯಸ್ಥ ಗೃಹಿಣಿಯಾಗಿ ಕಂಗೊಳಿಸುತ್ತಿದ್ದ ರಾಧಿಕಾ, ಗಂಡನ ಮನೆಯಲ್ಲಿ ಮೊದಲ ಸಲ ಚೂಡಿ ಪೂಜೆಯನ್ನ ಆಚರಿಸಿದ್ದಾರೆ. ಅಷ್ಟೇ ಅಲ್ಲದೆ, ಮುಂದಿನ ವಾರ ವರಲಕ್ಷ್ಮಿ ಹಬ್ಬವಿದೆ. ಗಂಡನ ಮನೆಯ ಮೊದಲ ವರಲಕ್ಷ್ಮಿ ಹಬ್ಬವನ್ನ ಸ್ವಾಗತಿಸಲು ಸಜ್ಜಾಗಿದ್ದೇವೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ಅದು ರಾಧಿಕಾ 'ಕಮ್ ಬ್ಯಾಕ್' ಸಿನಿಮಾ ಅಂತ ಕರೆಯಬೇಡಿ ಎಂದ ಯಶ್.!

English summary
Kannada Actress Radhika Pandit has taken her Facebook account to shares her first Chudi Puja memories (offering chudi to tulsi) After her marriage with Rocking Star Yash.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada