»   » 'ಐಕಾನ್ ಆಫ್ ದ ಇಯರ್' ಪಟ್ಟ ಅಲಂಕರಿಸಿದ ರಾಗಿಣಿ ದ್ವಿವೇದಿ

'ಐಕಾನ್ ಆಫ್ ದ ಇಯರ್' ಪಟ್ಟ ಅಲಂಕರಿಸಿದ ರಾಗಿಣಿ ದ್ವಿವೇದಿ

Posted By:
Subscribe to Filmibeat Kannada

ಮೊದಲು ಗುಂಡ-ಗುಂಡಗೆ ಇದ್ದ ನಟಿ ರಾಗಿಣಿ ದ್ವಿವೇದಿ ಅವರೀಗ ತೆಳ್ಳಗಾದ ಮೇಲೆ ತುಂಬಾ ಮುದ್ದಾಗಿ ಕಾಣಿಸುತ್ತಿದ್ದಾರೆ. ಇದೇ ಖುಷಿಯಲ್ಲಿ ರಾಗಿಣಿ ಅವರು ಇದೀಗ ವಿಶೇಷ ಪ್ರಶಸ್ತಿಯೊಂದನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಸದಾ ಸಾಮಾಜಿಕ ಜಾಲತಾಣ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಸಕ್ರೀಯರಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ನಟಿ ರಾಗಿಣಿ ದ್ವಿವೇದಿ ಅವರು, ಈ ವರ್ಷದ 'ದಿ ಬೆಸ್ಟ್' ಸಾಧಕಿ ಎನಿಸಿಕೊಂಡಿದ್ದಾರೆ.['ಸೋಷಿಯಲ್ ಮೀಡಿಯಾ ಐಕಾನ್' ಆದ ನಟಿ ಸಂಜನಾ ಗಲ್ರಾನಿ]

Kannada Actress Ragini Dwivedi is the Icon Of The Year

ನ್ಯಾಷನಲ್ ಎಜುಕೇಶನ್ ಎಕ್ಸಲೆನ್ಸ್ ಅವಾರ್ಡ್ಸ್ ವತಿಯಿಂದ ಪ್ರತೀ ವರ್ಷ 'ಐಕಾನ್ ಆಫ್ ದ ಇಯರ್' ಅಂತ ಸಾಧಕರಿಗೆ ಹಾಗೂ ಸ್ಫೂರ್ತಿಯ ಸೆಲೆಯಾದವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಅದರಂತೆ ಈ ಬಾರಿ, 'ಐಕಾನ್ ಆಫ್ ದ ಇಯರ್' ವಿಶೇಷ ಪ್ರಶಸ್ತಿ ನಟಿ ರಾಗಿಣಿ ದ್ವಿವೇದಿ ಅವರ ಮುಡಿಗೇರಿದೆ. ದೆಹಲಿಯಲ್ಲಿ ನಟಿ ರಾಗಿಣಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.[ಕನ್ನಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಾಯಕಿ ಯಾರು.?]

Kannada Actress Ragini Dwivedi is the Icon Of The Year

ದೆಹಲಿಯಲ್ಲಿ ನಡೆಯುವ ಈ ವಿಶೇಷ ಸಮಾರಂಭದಲ್ಲಿ, ವಿಜ್ಞಾನಿಗಳು, ಪ್ರೊಫೆಸರ್ ಗಳು, ಅನೇಕ ಕಾಲೇಜುಗಳ ಮುಖ್ಯಸ್ಥರು ಮತ್ತು ಪ್ರಿನ್ಸಿಪಾಲ್ ಗಳು ಹಾಜರಿದ್ದರು. ಅಂದಹಾಗೆ ಈ ಪ್ರಶಸ್ತಿಯನ್ನು ಪ್ರತಿಷ್ಠಿತ ವಾರ್ತಾ ಪತ್ರಿಕೆಯೊಂದು ನೀಡುತ್ತದೆ.[ವಾವ್...ರಾಗಿಣಿ ಬದಲಾಗಿದ್ದಾರೆ.! ಹೊಸ ಫೋಟೋ ನೋಡಿ...]

2016ರ 'ಐಕಾನ್ ಆಫ್ ದ ಇಯರ್' ಪ್ರಶಸ್ತಿ ಬಂದಿದ್ದಕ್ಕೆ ತುಂಬಾ ಖುಷಿಯಾಗಿರುವ ನಟಿ ರಾಗಿಣಿ ದ್ವಿವೇದಿ ಅವರು, ಪ್ರಶಸ್ತಿ ಕೈಯಲ್ಲಿ ಹಿಡಿದಿರುವ ಫೋಟೋವನ್ನು ಟ್ವಿಟ್ಟರ್-ಫೇಸ್ ಬುಕ್ ನಲ್ಲಿ ಶೇರ್ ಮಾಡಿ, ಈ ಖುಷಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.[ವಾವ್.! ರಾಗಿಣಿ ಸಖತ್ ಸ್ಲಿಮ್ ಬ್ಯೂಟಿ ಆದ್ರು ಕಣ್ರೀ]

English summary
Kannada Actress Ragini Dwivedi was Yesterday (August 22) given the 'icon of the year' award at an award function in New Delhi. That was attended by scientists, professors, directors, principals, and other faculties from universities, engineering colleges and leading management colleges across the country.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada